
ಸ್ಟಾರ್ ಡೈರೆಕ್ಟರ್ ಪ್ರೇಮ್‌ಗೂ ಜೈಲ್‌ಗೂ ಎನೋ ಒಂಥರಾ ನಂಟು ಅನ್ಸುತೆ ನೋಡಿ. ಯಾವ ಚಿತ್ರದಲ್ಲಿಯೂ ಜೈಲ್ ಸೀನ್ ಮಿಸ್ ಮಾಡೋದೆ ಇಲ್ಲ.
ತಮ್ಮ ರಾಣಾನನ್ನು ತಮ್ಮ ಬ್ಯಾನರ್‌ನಲ್ಲಿಯೇ ಸ್ಯಾಂಡಲ್‌ವುಡ್‌ಗೆ ಪರಿಚಯಿಸಬೇಕಂಬ ಆಸೆ ಇತ್ತು 'ಕ್ರೇಜಿ ಕ್ವೀನ್' ರಕ್ಷಿತಾಗೆ. ಪತ್ನಿ ಕನಸಿಗೆ ನಿರ್ದೇಶಕ ಪ್ರೇಮ್ ಸಾಥ್ ನೀಡಿದ್ದಾರೆ.
ಟಿಕ್‌ಟಾಕ್ ಸ್ಟಾರ್‌ಗಳಿಗೆ ಡೈರೆಕ್ಟರ್ ಪ್ರೇಮ್ ಚಿತ್ರದಲ್ಲಿ ಅವಕಾಶ!
'ಏಕ್ ಲವ್ ಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ರಾಣಾ, ಈಗಾಗಲೇ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಪ್ರೇಮ್ ಶೂಟಿಂಗ್ ಹಂತ ಹಂತವಾಗಿ ಮುಗಿಸಿಕೊಂಡು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಿವಮೊಗ್ಗ ಜೈಲಿನಲ್ಲಿ ಪ್ರೇಮ್ ತಂಡ ಚಿತ್ರದ ಮುಖ್ಯ ಸನ್ನಿವೇಶವನ್ನು ಶೂಟ್ ಮಾಡಿದ್ದು ಫೋಟೋವನ್ನು ಟ್ಟಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
'ಶಿವಮೊಗ್ಗ ಜೈಲಲ್ಲಿ ಶೂಟಿಂಗ್ ಮಾಡುವ ಮೂಲಕ ನಮ್ ಜರ್ನಿ Start ಆಗಿದೆ. ಜೊತೆಗೆ ಮಳೆಯೂ ಬರ್ತಿದೆ weather ತುಂಬಾ ಚೆನ್ನಾಗಿದೆ, ಗ್ಯಾಪ್ ಗ್ಯಾಪಲ್ಲಿ ಸೂಪರ್ರಾಗಿರೋ updates ಕೊಡ್ತಾಯಿರ್ತೀನಿ' ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಚಿತ್ರದ ಬಗ್ಗೆ ಕನ್ನಡಿಗರಲ್ಲಿ ವಿಶೇಷ ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.