
ಬೆಂಗಳೂರು[ನ.23] ನಟಿ ಸಂಯುಕ್ತಾ ಹೆಗಡೆ ಕನ್ನಡದ ನೀಲಿ ತಾರೆಯಂತೆ, ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ ಕನ್ನಡದಲ್ಲಿ ಸಂಯುಕ್ತಾ ಹೆಗಡೆ ಹಾಗೆ... ಹೀಗೆ ಹೇಳಿದ್ದು ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸಂಯುಕ್ತಾ ಹೆಗಡೆ ಒಬ್ಬ ಕೆಟ್ಟ ಹುಡುಗಿ, ಎಣ್ಣೆ, ಸಿಗರೇಟ್, ಗಾಂಜಾ, ಎಲ್ಲಾ ಚಟ ಇರುವ ಹುಡುಗಿ. ಅವಳಿಂದ ಚಿತ್ರರಂಗ ಹಾಳಾಗುತ್ತಿದೆ ಎಂದು ನಿರ್ದೇಶಕ ಕೀರ್ತನ್ ಶೆಟ್ಟಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ನಂತರ ಯಾವುದೋ ಕಾರಣಕ್ಕೆ ಡಿಲೀಟ್ ಮಾಡಿದ್ದಾರೆ.
ನನ್ನ ಮೀಟೂ ವಿತ್ ಫೈಟೂ ಚಿತ್ರದ ಕಥೆಯ ಗುಟ್ಟನ್ನು ದಯಮಾಡಿ ಚಿತ್ರ ಶೂಟಿಂಗ್ ಆಗಿ ಬಿಡುಗಡೆಯಾಗುವರೆಗೂ ಬಿಟ್ಟು ಕೊಡಲ್ಲ. ಚಿತ್ರದಲ್ಲಿ ಮೀಟೂ ಮೊಟ್ಟ ಮೊದಲು ಆರೋಪ ಮಾಡಿದ್ದ ತೆಲುಗು ನಟಿ ಶ್ರೀ ರೆಡ್ಡಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯುವ ನಿರ್ದೇಶಕ ತಿಳಿಸಿದ್ದಾರೆ.
ನನ್ನ ಚಿತ್ರದಲ್ಲಿ ಕಿರಿಕ್ ಹುಡುಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡು ಬೀರಿ ಸಂಯುಕ್ತ ತರಹದ ಒಂದು ಪಾತ್ರ ಇದೆ. ಆ ಪಾತ್ರವನ್ನು ಇವಾಗ ಬಿಗ್ ಬಾಸ್ ಮನೆಯಲ್ಲಿರುವ ಸೋನು ಪಾಟೀಲ್ ಅವರು ಹೊರಗಡೆ ಬಂದಾಗ ಅವರತ್ರ ಮಾತಾಡಿ ಅವರತ್ರ ಮಾಡಿಸುವ ಆಲೋಚನೆ ಇದೆ.ಸೋನು ಪಾಟೀಲ್ ನನಗೆ ವೈಯಕ್ತಿಕವಾಗಿ ಗೊತ್ತಿರುವ ಹುಡುಗಿ. ಇನ್ನುಳಿದ ಗುಟ್ಟನ್ನು ಸಮಯ ಬಂದಾಗ ನಾನೇ ಬಿಟ್ಟು ಕೊಡುವೆ ಎಂದು ಬರೆದಿದ್ದರು.
ಸಂಯುಕ್ತ ಹೆಗ್ಡೆ ಒಬ್ಬಳು ಕೆಟ್ಟ ಹುಡುಗಿ ಅವಳಿಗೆ ಎಣ್ಣೆ, ಗಾಂಜಾ, ಸಿಗರೇಟ್ ಎಲ್ಲಾ ಕೆಟ್ಟ ಚಟ ಇರುವ ಹುಡುಗಿ ಅಂಥವರಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ದಯಮಾಡಿ ನನ್ನ ಚಿತ್ರದಲ್ಲಿ ಯಾವುದೇ ಕೆಟ್ಟ ಸಂದೇಶ ಇಲ್ಲ ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮತ್ತು ನಿಜವಾದ ಕಥೆಯಾದರಿತ ಸಿನಿಮಾ ಎಂದೆಲ್ಲ ಬರೆದುಕೊಂಡು ಈಗ ಡಿಲೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.