ವಿನೋದ್ ಪ್ರಭಾಕರ್ ಏಯ್ಟ್ ಪ್ಯಾಕ್‌ಗೆ ಭಾರಿ ಬೇಡಿಕೆ!

Published : Apr 03, 2019, 09:02 AM IST
ವಿನೋದ್ ಪ್ರಭಾಕರ್ ಏಯ್ಟ್ ಪ್ಯಾಕ್‌ಗೆ ಭಾರಿ ಬೇಡಿಕೆ!

ಸಾರಾಂಶ

ವಿನೋದ್‌ ಪ್ರಭಾಕರ್‌ ಇತ್ತೀಚೆಗೆ ಸಿಕ್ಕಾಪಟ್ಟೆಬ್ಯುಸಿ ಆಗಿದ್ದಾರೆ. ಒಂದು ವರ್ಷದ ಹಿಂದೆ ಕಠಿಣವಾದ ವರ್ಕೌಟ್‌ ಮೂಲಕ ಸಿಕ್ಸ್‌ ಪ್ಯಾಕ್‌ ದೇಹವನ್ನು ಎಂಟು ಪ್ಯಾಕ್‌ಗೆ ಹುರಿಗಟ್ಟಿಸಿದ ನಂತರ ಅವರಿಗೆ ನಿಜಕ್ಕೂ ಅದೃಷ್ಟಖುಲಾಯಿಸಿದೆ. ಏಯ್‌್ಟಪ್ಯಾಕ್‌ ಬಾಡಿ ಬಿಲ್ಡ್‌ ಮಾಡಿಕೊಂಡ ಕಾರಣಕ್ಕಾಗಿಯೇ ಅವರಿಗೀಗ ಸಾಕಷ್ಟುಅವಕಾಶಗಳು ಬರುತ್ತಿವೆ. 

ಅವೆಲ್ಲವೂ ಪಕ್ಕಾ ಆ್ಯಕ್ಷನ್‌ ಸಿನಿಮಾಗಳೇ. ಆದರೆ ಆ್ಯಕ್ಷನ್‌ ಜತೆಗೆ ಕತೆಯೇ ಪ್ರಧಾನ ಎನ್ನುವ ಕಾರಣಕ್ಕಾಗಿ ಐದಕ್ಕೂ ಹೆಚ್ಚು ಸಿನಿಮಾಗಳನ್ನು ಕತೆ ಕೇಳಿ ತಿರಸ್ಕರಿಸಿದ್ದಾರೆ. ಈಗ ನಿರ್ದೇಶಕ ಕಾಡು ಶಿವು ಸೇರಿ ಮತ್ತೊಬ್ಬರ ಹೊಸಬರ ಜತೆಗಿನ ಎರಡು ಸಿನಿಮಾಗಳಿಗೆ ಓಕೆ ಹೇಳಿದ್ದು, ಆ ಸಿನಿಮಾಗಳು ಮೇ ತಿಂಗಳಿನಿಂದ ಶುರುವಾಗಲಿದೆ.

ಮಂಗಳವಾರ ‘ರಗಡ್‌’ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ನಟ ವಿನೋದ್‌ ಪ್ರಭಾಕರ್‌ ಈ ವಿಚಾರ ಹಂಚಿಕೊಂಡರು. ‘ರಗಡ್‌ ಚಿತ್ರದಲ್ಲಿ ಆ್ಯಕ್ಷನ್‌ ಮತ್ತು ಲವ್‌ ಸೀನ್‌ಗಳ ಬಗ್ಗೆ ಜನ ಮೆಚ್ಚುಗೆ ಹೇಳುತ್ತಿದ್ದಾರೆ. ಅದರಲ್ಲೂ ಎಂಟು ಫ್ಯಾಕ್‌ ಮೂಲಕ ಫೈಟ್ಸ್‌ ಮಾಡಿದ್ದು ಸಿನಿಮಾ ಮಂದಿಗೂ ಇಷ್ಟವಾಗಿದೆ. ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಪಕ್ಕಾ ಆ್ಯಕ್ಷನ್‌ ಸಿನಿಮಾಕ್ಕೆ ನೀವೇ ಬೇಕು ಎಂದಿದ್ದಾರೆ. ಆದರೆ ನನಗೆ ಆ್ಯಕ್ಷನ್‌ ಜತೆಗೆ ಕತೆಯೂ ಮುಖ್ಯ ಎಂದು ಅವರಿಗೆ ಹೇಳಿದ್ದೇನೆ’ಎಂದರು ವಿನೋದ್‌ ಪ್ರಭಾಕರ್‌.

ಸದ್ಯ ಅವರು ಉದಯ್‌ ಪ್ರಕಾಶ್‌ ನಿರ್ದೇಶನದ ‘ವರದ’ಹೆಸರಿನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಅದಕ್ಕೆ ಒಂದು ಹಂತದ ಚಿತ್ರೀಕರಣ ಮೈಸೂರು, ಮೇಲುಕೋಟೆಯಲ್ಲಿ ನಡೆದಿದೆ. ಇದಾದ ನಂತರ ಮೇ ತಿಂಗಳಲ್ಲಿ ಹೊಸ ಸಿನಿಮಾಗಳು ಶುರುವಾಗುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ: Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!
Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!