ಸ್ಟಾರ್ ಆಗಲಿ, ಸ್ಟಾರ್ ಇಲ್ಲದೇ ಇರಲಿ‌ ಸಿನಿಮಾ‌ ದೊಡ್ಡದು: 'ಕಾಟೇರ' ಚಿತ್ರದ ಬಗ್ಗೆ ದರ್ಶನ್ ಹೀಗೆ ಹೇಳಿದ್ಯಾಕೆ?

By Govindaraj S  |  First Published Sep 11, 2023, 10:50 PM IST

‘ರಾಬರ್ಟ್​’ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ತರುಣ್​ ಸುಧೀರ್​ ಮತ್ತು ದರ್ಶನ್​ ಅವರು ಜೊತೆಯಾಗಿ ‘ಕಾಟೇರ’ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. 


ಬರೋಬ್ಬರಿ ಎರಡು ವರ್ಷಗಳ ನಂತರ ಮಾಧ್ಯಮಗಳ ಮುಂದೆ ನಟ ದರ್ಶನ್, ಮಾಧ್ಯಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಅಸಹ್ಯ ಪದಬಳಕೆ ಹಿನ್ನೆಲೆ ಮೀಡಿಯಾದಿಂದ ಬ್ಯಾನ್ ಆಗಿದ್ದರು. ಮಾಧ್ಯಮಗಳ ಸಪೋರ್ಟ್ ಇಲ್ಲದೆಯೇ ದರ್ಶನ್ ಕ್ರಾಂತಿ ಸಿನಿಮಾ ರಿಲೀಸ್ ಮಾಡಿದ್ದರು. ಇದೀಗ ಮಾಧ್ಯಮಗಳ ಎಡಿಟರ್ಸ್ ಜೊತೆ ಸಂಧಾನ‌ ಮಾತುಕತೆ ನಡೆಸಿದ್ದ ನಟ, ಎಲ್ಲಾ ಮಾಧ್ಯಮಗಳ ಎಡಿಟರ್ಸ್‌ಗೆ ಕ್ಷಮೆ ಯಾಚಿಸಿದ್ದರು. ಸದ್ಯ 56ನೇ ಚಿತ್ರ ಕಾಟೇರ ಶೂಟಿಂಗ್ ಸೆಟ್‌ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ತರುಣ್ ಸುಧೀರ್ ನಿರ್ದೇಶನದ ಸಿನಿಮಾ ಕಾಟೇರ. 

ಇಂದು ಶೂಟಿಂಗ್ ಮುಗಿಸಿ, ಮಾಧ್ಯಮಗಳ ವರದಿಗಾರರ ಜೊತೆ ಸುದ್ದಿಗೋಷ್ಠಿ ಮೂಲಕ ಭೇಟಿಯಾಗಿದ್ದು, ಎರಡು ವರ್ಷಗಳ ನಂತ್ರ ಇದೇ ಮೊದಲ ಬಾರಿ ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂದಿದ್ದಾರೆ. ಹೌದು! ಬೆಂಗಳೂರಿನ ಹೊರ ವಲಯ ಕಗ್ಗಲಿಪುರದ ಬಳಿ ಕಾಟೇರ ಸಿನಿಮಾದ ಸುದ್ದಿಗೋಷ್ಠಿ ನಡೆಯುತ್ತಿದ್ದು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌, ವಿನೋದ್ ಆಳ್ವಾ, ಕುಮಾರ್ ಗೋವಿಂದ್, ನಟಿ ಮಾಲಾಶ್ರೀ, ಆರಾಧನಾ ಮಾಲಾಶ್ರೀ, ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದಾರೆ.  ‘ರಾಬರ್ಟ್​’ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ತರುಣ್​ ಸುಧೀರ್​ ಮತ್ತು ದರ್ಶನ್​ ಅವರು ಜೊತೆಯಾಗಿ ‘ಕಾಟೇರ’ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. 100 ದಿನಗಳ ಕಾಲ ಶೂಟಿಂಗ್​ ಮಾಡಿರುವ ಈ ಚಿತ್ರತಂಡದವರು ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

Tap to resize

Latest Videos

14 ವರ್ಷಗಳಿಂದ ಭೇಟಿ ಮಾಡಲು ಕಾಯುತ್ತಿದ್ದ ಸುದೀಪ್; ಸಹಾಯ ಮಾಡಲು ಮುಂದಾದ ದರ್ಶನ್!

ಸ್ಟಾರ್ ಆಗಲಿ ಸ್ಟಾರ್ ಇಲ್ಲದೇ ಇರಲಿ‌ ಸಿನಿಮಾ‌ ದೊಡ್ಡದು. ನನ್ನ ಸಮಯ ಒಂದ್  ಸಿನಿಮಾಗೆ 85 ದಿನ ಮಾತ್ರ. ಸಿನಿಮಾದ 90% ಕೆಲಸ ಮುಗಿದಿದೆ. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ಬಾಂಧವ್ಯ ಬೆಳೆಯುತ್ತೆ. ರಚಿತಾ ರಾಮ್ ಲೆವೆಲ್‌ಗೆ ನಮ್ಮ ಸಿನಿಮಾದ ನಾಯಕಿ ಆರಾಧನ ನಿಲ್ತಾರೆ. ಗ್ಲಾಮರ್ ಪಾತ್ರವನ್ನ ಯಾರಾದ್ರು ಮಾಡಬಹುದು. ಆದರೆ ಕಾಟೇರ ಪಾತ್ರ ಮಾಡೋದು ಕಷ್ಟ. ಅದನ್ನ ಆರಾಧನಾ ಮಾಡಿದ್ದಾರೆ. ಇಡೀ ಸಿನಿಮಾಗೆ ನಿಮ್ಮ ಪ್ರೋತ್ಸಾಹ ಬೆಂಬಲ ಇರಲಿ ಎಂದು ದರ್ಶನ್ ಹೇಳಿದರು.

ಈಗ ನನ್ನ ಮಗಳ ಹೆಸರು ರಾಧನಾ ಅಲ್ಲ ಆರಾಧನಾ ಅಂತ. ದರ್ಶನ್ ಸರ್ ಹಾಗು ನಿರ್ದೇಶಕ ತರುಣ್ ನನ್ನ ಮಗಳಿಗೆ ನಟನೆ ಹೇಳಿಕೊಟ್ರು. ಒಳ್ಳೆ ಕೋ ಸ್ಟಾರ್ ಜೊತೆ ನನ್ನ ಮಗಳಿಗೆ ಅವಕಾಶ ಸಿಕ್ಕಿದೆ. ನನ್ನ ಮಗಳು ತುಂಬಾ ಚೆನ್ನಾಗಿ ಕಾಣಿಸ್ತಾಳೆ ಎಂದು ಮಾಲಾಶ್ರೀ ಹೇಳಿದರು.
 
ಇಂತಹ‌ ದೊಡ್ಡ ಅವಕಾಶ ಸಿಕ್ಕಿದ್ದು ನನಗೆ ಆಶ್ಚರ್ಯ ಆಗ್ತಿದೆ. ದರ್ಶನ್ ಸರ್ ನನಗೆ ಚಾಕಲೇಟ್ ಕೊಟ್ಟಿದ್ರು. ನಾನು ತುಂಬಾ ಕೆಲಸ ಕಲಿತಿದ್ದೇನೆ. ಪ್ರತಿ‌ ದಿನ ಹೊಸದನ್ನ ಕಲಿತಿದ್ದೇನೆ. ಹೇಗೆ ಡಿಸಿಪ್ಲೇನ್ ಆಗಿರೋದನ್ನ ಹೇಳಿಕೊಟ್ಟಿದ್ದಾರೆ. ನಾನು ಕಾಟೇರ ಸೆಟ್‌ನಲ್ಲಿ‌ ವಿಧ್ಯಾರ್ಥಿಯ ಹಾಗಿದ್ದೆ ಎಂದು ಆರಾಧನಾ ಮಾಲಾಶ್ರೀ ತಿಳಿಸಿದರು. 

ಮಾಧ್ಯಮದ ಹಿರಿಯ ಸಂಪಾದಕರಿಗೆ ಧನ್ಯವಾದ. ಅವರಿಂದ ಎಲ್ಲವೂ ಸರಿ ಹೋಗಿದೆ. ಇದು ನಮ್ಮೆಲ್ಲರಿಗೂ ಸಂತೋಷ ಆಗಿದೆ. ದರ್ಶನ್ ಅಭಿಮಾನಿಗಳಿಗೆ ಇದು ಹಬ್ಬ. ಒಂದು ಕುಟುಂಬದ ಹಾಗೆ ಸಾಗೋಣ ಎಂದು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದರು.

ಗುರು ಶಿಷ್ಯರು ಕೆಲಸ ಮಾಡುವಾಗ ಈ ಕಥೆ ಶುರುವಾಯ್ತು. ರಾಬರ್ಟ್ ಸಮಯದಲ್ಲಿ ಮುಂದೆ ಮತ್ತೆ ಒಂದು ಸಿನಿಮಾ ಮಾಡೋಣ ಅಂದಿದ್ರು. ಲಾಕ್‌ಡೌನ್ ಸಮಯದಲ್ಲಿ ಈ ಕಥೆ ಹುಟ್ಟಿಕೊಳ್ತು. ಇದು ತುಂಬಾ ಚಾಲೇಂಜಿಂಗ್ ಸ್ಕ್ರಿಪ್ಟ್ ಇದು. ಹಲವಾರು ನೈಜ ಘಟನೆ ಸುತ್ತಾ ಈ ಸಿ‌ನಿಮಾ ಮಾಡಿದ್ದೇನೆ. ಕಾಟೇರ ಕಥೆ ಹುಟ್ಟಿದ್ದು ಲಾಕ್ ಡೌನ್ ಸಮಯದಲ್ಲಿ. ಒಂದು‌ ವರ್ಷ ಸಿನಿಮಾದ ಕಥೆ ಕೆಲಸ ಆಗಿದೆ. 70 ರ ದಶಕದಲ್ಲಿ ನಡೆಯೋ ಕಥೆ ಕಾಟೇರ. ವೆಂಕಟೇಶ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕ ತರುಣ್ ಸುಧೀರ್ ತಿಳಿಸಿದರು.

ರಾಕ್ ಲೈನ್ ವೆಂಕಟೇಶ್ ಹಳೆ ಒಡನಾಟ. ಒಬ್ಬ ಕಮರ್ಷಿಯಲ್ ಹೀರೋಗೆ ಸ್ಕ್ರಿಪ್ಟ್ ಮಾಡೋದು ತುಂಬಾ ಕಷ್ಟ. ತರುಣ್ ಈ ಸಿನಿಮಾವನ್ನ ವಿಭಿನ್ನವಾಗಿ‌ ಮಾಡಿದ್ದಾರೆ. ದರ್ಶನ್ ಅವರಿಗೆ ಇದು ವಿಶೇಷವಾದ ಪಾತ್ರ. ಮಾಲಾಶ್ರೀ ಅವರ ಜೊತೆ ತುಂಬಾ ಸಿನಿಮಾ ಮಾಡಿದ್ದೇನೆ. ಈಗ ಅವರ ಮಗಳು ಬಂದಿದ್ದಾರೆ.  ಮಾಲಾಶ್ರೀ ಅವರ ಹಾಗೆ ಮಿಂಚುತ್ತಾರೆ ಅಂತ ಭಾವಿಸುತ್ತೇನೆ ಎಂದು ನಟ ಅವಿನಾಶ್ ಹೇಳಿದರು.

'ಪುಷ್ಪ-2' ಸಿನಿಮಾ ರಿಲೀಸ್​ಗೆ ಡೇಟ್ ಫಿಕ್ಸ್: ಎಲ್ಲರ ಕಣ್ಣು ಅಲ್ಲು ಅರ್ಜುನ್ ಕಿರುಬೆರಳಿನ ಮೇಲೆ ಬಿದ್ದಿರೋದ್ಯಾಕೆ?

ತುಂಬಾ ದಿನ‌ ಆದ ಮೇಲೆ ಕನ್ನಡದಲ್ಲಿ ಒಳ್ಳೆ ರೋಲ್ ಮಾಡಿದ್ದೇನೆ. ದರ್ಶನ್ ತಂದೆ ಜೊತೆಗೂ ನಟಿಸಿದ್ದೇನೆ. ಈಗ ದರ್ಶನ್ ಜೊತೆಗೂ ಸಿನಿಮಾ ಮಾಡಿದ್ದೇನೆ. ಕಾಟೇರ ನನ್ನ ಬೆಸ್ಟ್ ಸಿನಿಮಾ. ಈ‌ ಸಿನಿಮಾಗೆ ಮಾಧ್ಯಮದ ಸಪೋರ್ಟ್ ಬೇಕು. ನೀವೆಲ್ಲಾ ಬೆಂಬಲ ಕೊಡಬೇಕು ಎಂದು ವಿನೋದ್ ಆಳ್ವಾ ತಿಳಿಸಿದರು.

click me!