
ಮುಂಬೈ[ಜೂ.25]: ಹಿಂದಿ ಅವತರಣಿಕೆಯ ಜನಪ್ರಿಯ ಬಿಗ್‌ಬಾಸ್ ಕಾರ್ಯಕ್ರಮವನ್ನು ಈ ಬಾರಿಯೂ ಖ್ಯಾತ ನಟ ಸಲ್ಮಾನ್‌ಖಾನ್ ಅವರೇ ನಡೆಸಿಕೊಡುವುದು ಖಚಿತವಾಗಿದೆ. ಆದರೆ ಅದರ ಬೆನ್ನಲ್ಲೇ 13ನೇ ಸೀಸನ್‌ಗಾಗಿ ಸಲ್ಲು ಪಡೆಯುತ್ತಿದ್ದಾರೆ ಎನ್ನಲಾದ ಭರ್ಜರಿ ಸಂಭಾವನೆ ಎಲ್ಲರನ್ನೂ ದಂಗುಬಡಿಸಿದೆ.
ಮೂಲಗಳ ಪ್ರಕಾರ 26 ಎಪಿಸೋಡ್‌ಗಳ ಈ ಬಾರಿ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ 400 ಕೋಟಿ ರು.ಗೂ ಹೆಚ್ಚು. ಅಂದರೆ ಪ್ರತಿ ಎಪಿಸೋಡ್‌ಗೆ 30 ಕೋಟಿ ರು.ಗಿಂತ ಹೆಚ್ಚು. ಕಳೆದ ಸೀಸನ್‌ನಲ್ಲಿ ಸಲ್ಮಾನ್, ಪ್ರತಿ ಎಪಿಸೋಡ್‌ಗೆ 12-14 ಕೋಟಿ ರು. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಈ ನಡುವೆ ವರ್ಷ ವರ್ಷ ಕಾರ್ಯಕ್ರಮಕ್ಕೆ ಸಿಗುತ್ತಿರುವ ಜನಪ್ರಿಯತೆ ಏರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸಲ್ಲು ತಮ್ಮ ಸಂಭಾವನೆಯನ್ನು ಡಬಲ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಈ ಬಾರಿ ಸ್ವತಃ ಸಲ್ಮಾನ್ ಕಾರ್ಯಕ್ರಮದ ನಿರ್ಮಾಪಕರೂ ಆಗಿದ್ದಾರೆ ಎನ್ನಲಾಗಿದೆ.
ಸೆ.29ರಿಂದ ಈ ಬಾರಿಯ ಕಾರ್ಯಕ್ರಮ ಆರಂಭವಾಗಲಿದ್ದು, ಈ ಬಾರಿ ಕೇವಲ ಸೆಲೆಬ್ರೆಟಿಗಳು ಮಾತ್ರವೇ ಪಾಲ್ಗೊಳ್ಳಲಿದ್ದಾರೆ. ಜನಸಾಮಾನ್ಯರಿಗೂ ಅವಕಾಶ ನೀಡುವ ಸಂಪ್ರದಾಯವನ್ನು ಚಾನೆಲ್ ಕೈಬಿಟ್ಟಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.