
ಮುಂಬೈ: ಬಿಗ್ ಬಾಸ್ 19ರ ಇತ್ತೀಚಿನ ಸಂಚಿಕೆಯಲ್ಲಿ ಸ್ಪರ್ಧಿ ಕುನಿಕಾ ಸದಾನಂದ್ ಅವರ ಮಗ ಅಯಾನ್ ಲಾಲ್ ಅನಿರೀಕ್ಷಿತವಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ಈ ವೇಳೆ ಕುನಿಕಾ ಮಗನನ್ನು ನೋಡಿ ಭಾವುಕರಾಗಿ ಅತ್ತರೆ, ಶೋ ನಿರೂಪಕ ಹಾಗೂ ಖ್ಯಾ ನಟ ಸಲ್ಮಾನ್ ಖಾನ್ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಕುನಿಕಾ ಅವರ ಪುತ್ರ ಅಯಾನ್ ಅನಿರೀಕ್ಷಿತವಾಗಿ ಪ್ರವೇಶಿಸಿ, ‘ಇಂದು ಇಡೀ ಭಾರತ ನಿಮ್ಮನ್ನು ನೋಡುತ್ತಿದೆ. ನಿಮ್ಮಿಣದಾಗಿ ನಾನು ಈ ಜಗತ್ತಿನಲ್ಲಿದ್ದೇನೆ’ ಎಂದು ತಾಯಿಗೆ ಹೇಳಿದ. ಆಗ ಕುನಿಕಾ ಅತ್ತರು. ಈ ಕ್ಷಣದಲ್ಲಿ ತಾಯಿ-ಮಗನ ಅನ್ಯೋನ್ಯತೆ ನೋಡಿ ಸಲ್ಮಾನ್ ಕೂಡ ಕಣ್ಣೀರು ಹಾಕಿದರು.
ಕೆಲಸ ಬಿಟ್ಟು ರಿಯಾಲಿಟಿ ಶೋಗೆ ಹೋಗೋದೇ ಬೆಸ್ಟ್,
ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್ ಶೋನ 19ನೇ ಆವೃತ್ತಿ ಈಗಾಗಲೇ ಪ್ರಸಾರ ಆರಂಭವಾಗಿದೆ. ಇಲ್ಲಿಯವರೆಗೂ ಅದರಲ್ಲಿನ ಸ್ಪರ್ಧಿಗಳು ತಮ್ಮ ಡ್ರಾಮಾ ಕಾರಣದಿಂದಾಗಿ ಮಾತ್ರವೇ ಸುದ್ದಿಯಾಗುತ್ತಿದ್ದರು. ಈ ಬಾರಿ ಅವರಿಗೆ ನೀಡಲಾಗುತ್ತಿರುವ ವೇತನದ ಕಾರಣಕ್ಕಾಗಿಯೂ ಸುದ್ದಿಯಲ್ಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಕಾರ್ಯಕ್ರಮಕ್ಕೆ ತಕ್ಕುದಾದ ಕಂಟೆಂಟ್‌ಅನ್ನು ಹೊರಜಗತ್ತಿಗೆ ನೀಡುತ್ತಿದ್ದಾರೆ. ಜಗಳಗಳಿಂದ ಹಿಡಿದು ಸುಂದರ ಸ್ನೇಹದವರೆಗೂ 19ನೇ ಆವೃತ್ತಿಯ ಬಿಗ್ ಬಾಸ್ ಸೀಸನ್ ಗಮನಸೆಳೆಯುತ್ತಿದೆ.
ಗೌರವ್ ಖನ್ನಾ ದುಬಾರಿ ಸ್ಪರ್ಧಿ
ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್‌ನಲ್ಲಿ ಗರಿಷ್ಠ ಸಂಭಾವನೆ ಪಡೆಯುತ್ತಿರುವ ಆರ್ಟಿಸ್ಟ್‌ಗಳ ಪಟ್ಟಿ ಹೊರಬಿದ್ದಿದೆ. ಅದರ ಪ್ರಕಾರ, ಅನುಪಮಾ ಟಿವಿ ಸೀರಿಯಲ್ ಮೂಲಕ ಪ್ರಖ್ಯಾತರಾದ ಗೌರವ್ ಖನ್ನಾ ಅತ್ಯಂತ ದುಬಾರಿ ಸ್ಪರ್ಧಿ ಎನ್ನಲಾಗಿದೆ. ಗೌರವ್ ಖನ್ನಾ ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಕಳೆದರೆ ವಾಹಿನಿಯಿಂದ 17.5 ಲಕ್ಷ ರೂಪಾಯಿ ಸಂದಾಯವಾಗಲಿದೆ. ಅದರರ್ಥ ದಿನಕ್ಕೆ 2.5 ಲಕ್ಷ ರೂಪಾಯಿ. ಇದರಿಂದಾಗಿ ಅವರು ಬಿಗ್‌ಬಾಸ್‌ನ ಅತ್ಯಂತ ಗರಿಷ್ಠ ವೇತನ ಪಡೆದ ಸ್ಪರ್ಧಿ ಎನಿಸಿದ್ದಾರೆ. ಹಾಗಂತ ಬಿಗ್‌ಬಾಸ್ 19ಗೆ ಮಾತ್ರವಲ್ಲ, ಇಲ್ಲಿಯವರೆಗೂ ಎಲ್ಲಾ ಬಿಗ್‌ಬಾಸ್ ಇತಿಹಾಸದ ಅತ್ಯಂತ ಗರಿಷ್ಠ ಸಂಭಾವನೆ ಪಡೆದ (ಪೂರ್ಣ ಪ್ರಮಾಣದ ಸ್ಪರ್ಧಿಯಾಗಿ) ಸ್ಪರ್ಧಿಯೂ ಇವರಾಗಿದ್ದಾರೆ.
ಇಲ್ಲಿಯವರೆಗಿನ ಬಿಗ್‌ಬಾಸ್‌ನ ಅತ್ಯಂತ ದುಬಾರಿ ಸ್ಪರ್ಧಿ ಹಾಲಿವುಡ್ ನಟಿ ಪಮೇಲಾ ಆಂಡರ್ಸನ್. ಕೇವಲ ಮೂರು ದಿನ ಈ ಶೋನಲ್ಲಿ ಇದ್ದ ಕಾರಣಕ್ಕೆ 2.5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು. ಬಿಗ್‌ಬಾಸ್-4ನಲ್ಲಿ ಭಾಗವಹಿಸಿದ್ದ ಈಕೆ ಕೇವಲ ಮೂರೇ ದಿನ ಮನೆಯಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.