
ಹೈದರಾಬಾದ್: ಬಾಹುಬಲಿ ಸಿನಿಮಾ ತನ್ನ ವೈಭವೋಪೇತ ದೃಶ್ಯಗಳಿಂದ ಪ್ರತಿಯೊಬ್ಬ ಭಾರತೀಯನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಾಹುಬಲಿಯ 2ನೇ ಭಾಗದಲ್ಲಿ ಪ್ರತಿಯೊಂದು ದೃಶ್ಯವೂ ಕಲಾಕೆತ್ತನೆಯಂತೆ ಬಂದಿದೆ. ಭಾರತೀಯ ಚಿತ್ರರಂಗದ ಮಟ್ಟಿಗೆ ಅದ್ಭುತ ಎನಿಸುವಷ್ಟು ಯಥೇಚ್ಛವಾಗಿ ಗ್ರಾಫಿಕ್ಸ್, ಅನಿಮೇಶನ್ಸ್ ಬಳಸಲಾಗಿದೆ. ಹಲವೆಡೆ ರಿಯಲ್ ಸ್ಟಂಟ್ಸ್'ಗಳೂ ಒಳಗೊಂಡಿವೆ. ಬಾಹುಬಲಿಯ ಎರಡೂ ಭಾಗಗಳಲ್ಲಿ ರಾಯಲ್ ಎನ್'ಫೀಲ್ಡ್ ಬುಲೆಟನ್ನು ಬಳಸಲಾಗಿದೆ ಎಂದರೆ ನಂಬುತ್ತೀರಾ? ಬಾಹುಬಲಿಯ ಪ್ರೊಡಕ್ಷನ್ ಡಿಸೈನರ್ ಬಾಬು ಸಿರಿಲ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಬಾಹುಬಲಿಯ ಪ್ರಮುಖ ವಿಲನ್ ಬಲ್ಲಾಳದೇವ ಓಡಿಸುವ ರಥಕ್ಕೆ ಬುಲೆಟ್'ನ ಎಂಜಿನ್ ಅಳವಡಿಸಲಾಗಿದೆ. ಯುದ್ಧದ ರಥಕ್ಕೆ ಬೇಕಾದ ವೇಗ ನೀಡಲು ಬುಲೆಟ್ ಎಂಜಿನ್ ಬಳಕೆಯಾಗಿದೆ ಎಂದು ಬಾಬು ಸಿರಿಲ್ ಹೇಳಿದ್ದಾರೆ. ಈ ರಥದಲ್ಲಿ ಬುಲೆಟ್'ನ ಎಂಜಿನ್ನಷ್ಟೇ ಅಲ್ಲ, ಕಾರಿನ ಸ್ಟೀರಿಂಗ್ ಕೂಡ ಅವಳಡಿಸಲಾಗಿದೆ. ಮತ್ತು ಒಬ್ಬ ಕಾರ್ ಡ್ರೈವರ್ ಕೂಡ ರಥದಲ್ಲಿ ಕೂತು ಕಾರ್ಯನಿರ್ವಹಿಸಿದ್ದನಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.