ರೂಮ್‌ಮೇಟ್ಸ್ TO ಜಗದ್ಧಾತ್ರಿ, ಕನ್ನಡ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದುಮಾಡುತ್ತಿರುವ 5 ಸಿರೀಸ್

Published : Oct 17, 2026, 06:53 PM IST
Must Watch Series Trending on Kannada OTT Platforms

ಸಾರಾಂಶ

ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ಭಾಷೆಯ ಉತ್ತಮ ಸಿರೀಸ್‌ಗಳು ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಈ ಬಾರಿ ಕನ್ನಡದ ಕೆಲ ಸಿರೀಸ್ ಭಾರಿ ಸಂಚಲನ ಸೃಷ್ಟಿಸಿದೆ. ಹೀಗೆ ಕನ್ನಡ ಸೇರಿದಂತೆ ಇತರ ಭಾಷೆಯ ಪ್ರೇಕ್ಷಕರ ಸೆಳೆದ 5 ಕನ್ನಡ ಒಟಿಟಿ ಸಿರಿಸ್ ಇಲ್ಲಿದೆ.

ಬೆಂಗಳೂರು (ಅ.17) ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವು ಭಾಷೆಯ ಸಿರೀಸ್‌ಗಳು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದೀಗ ಕನ್ನಡ ಕೆಲ ಸಿರಿಸ್ ಅಬ್ಬರಿಸುತ್ತಿದೆ. ಕಳೆದ ಕೆಲ ತಿಂಗಳಲ್ಲಿ ಬಡುಗಡೆಯಾಗಿರುವ ಒಟಿಟಿ ಸಿರಿಸ್ ಕನ್ನಡ ಪ್ರೇಕ್ಷಕರು ಮಾತ್ರವಲ್ಲ, ಹಲವು ಭಾಷೆಯ ಪ್ರೇಕ್ಷಕರ ಗಮನಸೆಳೆದಿದೆ. ಜಗದ್ಧಾತ್ರಿಯಿಂದ ಹಿಡಿದು ರೂಮ್‌ಮೇಟ್ಸ್ ಸೇರಿದಂತೆ ಪ್ರಮುಖ ಸಿರಿಸ್ ಅಬ್ಬರಿಸುತ್ತಿದೆ. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡ ಒಟಿಟಿ ಥ್ರಿಲ್ಲರ್ ಸಿರೀಸ್

ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಹಲವು ಸಿರೀಸ್ ಪೈಕಿ ಜಗದ್ಧಾತ್ರಿ ಆ್ಯಕ್ಷನ್ ಥ್ರಿಲ್ಲರ್ ಸಿರೀಸ್. ವಿಜಯ್ ಸೂರ್ಯ ಹಾಗೂ ಮೋಕ್ಷಿತಾ ಪೈ ಅಭಿನಯದ ಈ ಸಿರೀಸ್ ಹಲವು ಟ್ವಿಸ್ಟ್ ನೀಡಲಿದೆ. ಇನ್ನು ರೋಮ್‌ಮೇಟ್ಸ್ ಕನ್ನಡ ಸಿರೀಸ್. ಝೀ5ನಲ್ಲಿ ಪ್ರಸಾರಗೊಂಡ ಈ ಸಿರಿಸ್ ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸಸ್ಪೆನ್ಸ್ ಸಿರೀಸ್ ಇಷ್ಟಪಡುವ ಮಂದಿಗೆ ರಾಕ್ಷಸ ಉತ್ತಮವಾಗಿದೆ. ಝೀ5ನಲ್ಲಿರುವ ಸಿರೀಸ್ ಸಪ್ಸೆನ್ಸ್ ಕೆಟಗರಿಯಲ್ಲಿ ಲಭ್ಯವಿದೆ. ಇತ್ತ ಡ್ರಾಮಾ ಆಧಾರಿತ ಹಾಗೂ ರೋಚಕ ಘಟನೆಗಳ ಸಿರೀಸ್‌ಗೆ ಮ್ಯಾಂಗೋ ಪಚ್ಚಉತ್ತಮ ಸಿರೀಸ್ ಆಗಿದೆ. ವಿವೇಕ್ ನಿರ್ದೇಶನದ ಮ್ಯಾಂಗೋ ಪಚ್ಚ ಸಂಚಿತ್ ಸಂಜೀವ್ ನಟನೆಯ ಸಿರೀಸ್. ಆ್ಯಕ್ಷನ್ ಡ್ರಾಮ ಸಿರೀಸ್ ಹಲವು ಆಯಾಮಗಳನ್ನು ಹೊಂದಿದೆ.

ಅಕ್ಟೋಬರ್ 23ರಂದು ಐಯನ ಮನೆ ಸೀಸನ್ 2 ರಿಲೀಸ್ ಆಗಲಿದೆ. ಝೀ5ನಲ್ಲಿ ಸೀಸನ್‌ನ 2 ಮೊದಲ ಸಂಚಿಕೆ ಪ್ರದರ್ಶಗೊಳ್ಳಲಿದೆ. ಐಯನ ಮನೆ ಮೊದಲ ಸೀಸನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ 2ನೇ ಸೀಸನ್ ತೀವ್ರ ಕುತೂಹಲ ಕೆರಳಿಸಿದೆ.

ಹಿಂದಿ ಒಟಿಟಿ ಸಿರೀಸ್

ಹಿಂದಿ ಒಟಿಟಿ ಸಿರೀಸ್‌ಗಳಲ್ಲಿ ಇತ್ತೀಚೆಗೆ ಹಲವು ಅಬ್ಬರಿಸಿದೆ. ಈ ಪೈಕಿ ದಡಕಪುರ ಹಳ್ಳಿಯ ಮತದಾರರ ಪಟ್ಟಿಯ ವಿವಾದ ಆಧರಿಸಿ ನಿರ್ದೇಶಿಸಿರುವ ಡುಪಹಿಯಾ ಸೀಸನ್ 2 ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಹಾಸ್ಯದ ಜೊತೆ ಗಂಭೀರ ವಿಷಯವನ್ನು ಈ ರಿಸೀಸ್ ಪ್ರಸ್ತುತಪಡಿಸುತ್ತದೆ. ಮುಂಬೈನಲ್ಲಿ ನೆಲೆಸಿರುವ ಕುಟುಂಬಗಳ ಆಧರಿಸಿದ ಚುಂಬಕ್ ಸಿರೀಸ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಂಕಾದ್ ದಿ ಡೋರ್, ಶಯದ್ ಯಹಿ ಹೈ ಪ್ಯಾರ್ ಸೇರಿದಂತೆ ಹಲವು ಸಿರೀಸ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡೇಂಜರ್ ಝೋನ್‌ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕೆರಿಯರ್: ಬೋಲ್ಡ್ ಸಿನಿಮಾಗಳೇ ಈಗ ಕೊನೆಯ ಆಯ್ಕೆಯೇ?
ಬಂಧನದ ಬಳಿಕ ಮೊದಲ 'ಸಾರ್ವಜನಿಕ ದರ್ಶನ'.. ಈ ನಟಿಯ ನೋಡಲು ಸಾಲುಗಟ್ಟಿ ನಿಂತ ಜನ!