
ಇತ್ತೀಚಿಗೆ ರಾಕಿ ಭಾಯ್ ಕೊಟ್ಟಿರುವ ಈ ಒಂದು ಹೇಳಿಕೆ ಹಾಲಿವುಡ್ ಮಾಧ್ಯಮಗಳಲ್ಲಿ ಭಾರಿ ಸದ್ದು ಸುದ್ದಿ ಮಾಡುತ್ತಿದೆ. ಹಾಲಿವುಡ್ ಅಂಗಳದಲ್ಲಿ ರಾಮಾಯಣ ಪ್ರಚಾದ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಜಪವನ್ನೆ ಮಾಡಿದ್ದಾರೆ. ವೀಕ್ಷಕರು ಚಿತ್ರಮಂದಿರದಿಂದ ಹೊರಬರುವಾಗ ಪೂರ್ತಿಯಾಗಿ ತೃಪ್ತರಾಗಿ, ರೋಮಾಂಚನಗೊಳ್ಳಲಿದ್ದಾರೆ ಎಂಬ ದೃಢವಾದ ನಂಬಿಕೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.
ಇನ್ನು 'ಟಾಕ್ಸಿಕ್' ಸಿನಾಮಾವನ್ನ ಅತ್ಯಂತ ರೋಮಾಂಚನಕಾರಿ, ಸಾಹಸಮಯ, ವೈಲ್ಡ್, ಬಂಡಾಯದ ಮನೋಭಾವವನ್ನೋಳಗೊಂಡಿದ್ದಾಗಿದೆ. ಹಾಗೂ ಅದ್ದೂರಿ ಕ್ಯಾನ್ವಾಸ್‌ನ ಸಿನಿಮಾವಾಗಿದೆ ಎಂದಿದ್ದಾರೆ.ಜೊತೆಗೆ ಅತ್ಯಂತ ಭಾವನಾತ್ಮಕ ಮತ್ತು ನೈಜತೆಗೆ ಹತ್ತಿರವಾಗಿರುವ ಸಿನಿಮಾ ಎಂದು ಯಶ್ ವರ್ಣಿಸಿದ್ದಾರೆ.
ಇನ್ನು ಸಿನಿಮಾ ಮೇಲಿನ ಪ್ರೀತಿ ಹಾಗೆ ಭರವಸೆಯನ್ನ ವ್ಯಕ್ತಪಡಿಸುತ್ತಾ ಯಶ್ ಸಾಹಸ ಪ್ರಧಾನ ಸಿನಿಮಾಗಳ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸಿದ್ಧ ಹಾಲಿವುಡ್ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ (JJ Perry) ಅವರೊಂದಿಗೆ ಕೆಲಸ ಮಾಡಿದ್ದು ಅತ್ಯುತ್ತಮ ಅನುಭವವಾಗಿತ್ತು ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.
ಜೊತೆಗೆ 'ಜಾನ್ ವಿಕ್' (John Wick) ನಂತಹ ಉನ್ನತ ಮಟ್ಟದ ಸಿನಿಮಾಗಳಿಂದ ಪ್ರೇರಿತವಾಗಿ ಈ ಚಿತ್ರದ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ. ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಪ್ರತಿಯೊಂದು ಆಕ್ಷನ್ ದೃಶ್ಯವೂ ಕೇವಲ ಸಾಹಸಕ್ಕಾಗಿ ಇರದೆ, ಆಳವಾದ ಭಾವನೆಗಳಿಂದ ಕೂಡಿರುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನ್ನಲ್ಲಿ ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಭದಲ್ಲಿಯೂ ಯಶ್ ಟಾಕ್ಸಿಕ್ ಸಿನಿಮಾದ ಜಪವನ್ನೆ ಮಾಡಿದ್ದು, 'ಟಾಕ್ಸಿಕ್' ಕುರಿತಾದ ಯಶ್ ಹೇಳಿಕೆ ಹಾಲಿವುಡ್ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.