ಹೀರೋ ಆದರೆ ರಿಸ್ಕ್ ಜಾಸ್ತಿ ಎಂದ ಚಿಕ್ಕಣ್ಣ! ಕೊಟ್ಟ ಕಾರಣವೇನು ಗೊತ್ತಾ?

Published : Jul 17, 2017, 01:49 PM ISTUpdated : Apr 11, 2018, 12:41 PM IST
ಹೀರೋ ಆದರೆ ರಿಸ್ಕ್ ಜಾಸ್ತಿ ಎಂದ ಚಿಕ್ಕಣ್ಣ! ಕೊಟ್ಟ ಕಾರಣವೇನು ಗೊತ್ತಾ?

ಸಾರಾಂಶ

ಸದ್ಯ ಬಹು ಬೇಡಿಕೆಯ ಸ್ಟಾರ್ ಹಾಸ್ಯ ನಟ ಅಂದರೆ ಚಿಕ್ಕಣ್ಣ ಎನ್ನುವಂತಾಗಿದೆ. ಎರಡ್ಮೂರು ವರ್ಷಗಳ ಹಿಂದೆಯಷ್ಟೆ ಕೈಯಲ್ಲಿ ತಮ್ಮದೇ ಫೋಟೋ ಆಲ್ಬಂ ಹಿಡಿದು ಓಡಾಡುತ್ತಿದ್ದ ಚಿಕ್ಕಣ್ಣ ಈಗ ತಿಂಗಳಿಗೆ 5 ದಿನ ಮಾತ್ರ ಫ್ರೀ ಇರುತ್ತಾರೆ. ಇಂಥ ಚಿಕ್ಕಣ್ಣನಿಗೂ ಒಂದು ಕಾಲದಲ್ಲಿ ಲವ್ ಮಾಡಬೇಕು ಅಂತ ತುಂಬಾ ಆಸೆ ಇತ್ತಂತೆ. ಆದರೆ, ಅವರು ಆಗ ಯಾರೂ ಅಂತಾನೂ ಗೊತ್ತಿರಲಿಲ್ಲ.

ಸದ್ಯ ಬಹು ಬೇಡಿಕೆಯ ಸ್ಟಾರ್ ಹಾಸ್ಯ ನಟ ಅಂದರೆ ಚಿಕ್ಕಣ್ಣ ಎನ್ನುವಂತಾಗಿದೆ. ಎರಡ್ಮೂರು ವರ್ಷಗಳ ಹಿಂದೆಯಷ್ಟೆ ಕೈಯಲ್ಲಿ ತಮ್ಮದೇ ಫೋಟೋ ಆಲ್ಬಂ ಹಿಡಿದು ಓಡಾಡುತ್ತಿದ್ದ ಚಿಕ್ಕಣ್ಣ ಈಗ ತಿಂಗಳಿಗೆ 5 ದಿನ ಮಾತ್ರ ಫ್ರೀ ಇರುತ್ತಾರೆ. ಇಂಥ ಚಿಕ್ಕಣ್ಣನಿಗೂ ಒಂದು ಕಾಲದಲ್ಲಿ ಲವ್ ಮಾಡಬೇಕು ಅಂತ ತುಂಬಾ ಆಸೆ ಇತ್ತಂತೆ. ಆದರೆ, ಅವರು ಆಗ ಯಾರೂ ಅಂತಾನೂ ಗೊತ್ತಿರಲಿಲ್ಲ. ಅಲ್ಲದೆ ನೋಡಕ್ಕೆ ಬೇರೆ ಗ್ಯಾರಂಟಿ ಕಲರ್. ಹೀಗಾಗಿ ತಮ್ಮನ್ನು ಯಾವ ಹುಡುಗಿ ಒಪ್ಪುತ್ತಾಳೆಂಬ ಹಿಂಜರಿಕೆ ಇತ್ತಂತೆ. ಜತೆಗೆ ಕೈಯಲ್ಲಿ ಬಿಡಿಗಾಸು ಇರಲಿಲ್ಲ.

ಈಗ ಚಿಕ್ಕಣ್ಣ ಸ್ಟಾರ್ ನಟ. ಪ್ರಪೋಸ್ ಮಾಡಿದರೆ ಹುಡುಗಿಯರು ಒಪ್ಪಿಕೊಳ್ಳುತ್ತಾರೆ. ಜತೆಗೆ ಕೈ ತುಂಬಾ ಸಂಪಾದನೆ. ತಿಂಗಳಿಗೆ ಕೇವಲ 5 ದಿನ ಮಾತ್ರ ಬಿಡುವು ಅಂದರೆ ಚಿಕ್ಕಣ್ಣನ ಸಂಪಾದನೆ ಕೇಳಬೇಕಿಲ್ಲ. ಈಗ ಕಾಸು ಇದೆ, ಹೆಸರು ಇದೆ. ಆದರೆ, ಟೈಮ್ ಇಲ್ಲ. ಹೀಗಾಗಿ ಚಿಕ್ಕಣ್ಣ ಸದ್ಯಕ್ಕೆ ಯಾವ ಹುಡುಗಿ ಯನ್ನು ಲವ್ ಮಾಡುತ್ತಿಲ್ಲವಂತೆ.  ಆದರೆ, ಮನೆಯಲ್ಲಿ ಹುಡುಗಿಯನ್ನು ಹುಡುಕುತ್ತಿದ್ದಾರಂತೆ. ಮನೆಯಲ್ಲಿ ತೋರಿಸಿದ ಹುಡುಗಿಯನ್ನು ಮದುವೆ ಆಗುವ ತಯಾರಿಯಲ್ಲಿದ್ದಾರೆ. ಮನೆಯವರು ಕೂಡ ಚಿಕ್ಕಣ್ಣನಿಗಾಗಿ ಹುಡುಗಿಯನ್ನು ಹುಡುಕುತ್ತಿದ್ದಾರೆ.

ಅಂದ ಹಾಗೆ ಚಿಕ್ಕಣ್ಣ ಮಾಲಾಶ್ರೀ ಅವರ ದೊಡ್ಡ ಅಭಿಮಾನಿಯಂತೆ. ಮೊಟ್ಟ ಮೊದಲ ಬಾರಿಗೆ ಥಿಯೇಟರ್‌ನಲ್ಲಿ ನೋಡಿದ ಸಿನಿಮಾ ಮಾಲಾಶ್ರೀ ಅವರದ್ದೇ. ಯಾರ ಅಭಿಮಾನಿಯಾಗಿದ್ದೀನೋ ಅವರದ್ದೇ ಮನೆಯವರ ಬ್ಯಾನರ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ತಮ್ಮ ಪುಣ್ಯ ಎನ್ನುವುದು ಚಿಕ್ಕಣ್ಣ ಮಾತು. ‘ನಾನು ಮಾಲಾಶ್ರೀ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡುತ್ತಿದ್ದೆ. ಆಗಲೇ ಕೋಟಿ ನಿರ್ಮಾಪಕ ರಾಮು ಅವರ ಹೆಸರು ಕೇಳಿದ್ದೆ. ಚಿತ್ರರಂಗಕ್ಕೆ ಬಂದ ನಂತರ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುವಾಗಲೂ ನನಗೆ ರಾಮು ಅವರ ಬ್ಯಾನರ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಗಲಿಲ್ಲ. ಈಗ ‘ರಾಜ್ ವಿಷ್ಣು’ ಮೂಲಕ ಸಿಕ್ಕಿದೆ. ತಮ್ಮ ನೆಚ್ಚಿನ ನಾಯಕಿಯ ಪ್ರೊಡಕ್ಷನ್ ಹೌಸ್‌ನಲ್ಲಿ ನಟಿಸುವ ಅಕಾಶ ಸಿಕ್ಕಿದೆ’ ಎಂದು ಸಂಭ್ರಮವ್ಯಕ್ತಪಡಿಸುತ್ತಾರೆ ಚಿಕ್ಕಣ್ಣ.

ಇನ್ನೂ ಚಿಕ್ಕಣ್ಣ ಹೀರೋ ಆಗುತ್ತಾರೆಂಬ ಸುದ್ದಿ ಇದೆ. ಆದರೆ, ಅವರು ಹೀರೋ ಆಗುತ್ತಿಲ್ಲವಂತೆ. ಸಾಕಷ್ಟು ಸಿನಿಮಾಗಳು ಹೀರೋ ಮಾಡುವುದಕ್ಕೆ ಮುಂದೆ ಬಂದರೂ ಬೇಡ ಅಂತ ಸುಮ್ಮನಿದ್ದಾರೆ. ‘ಬಿಡುಗಡೆಗೆ ನಾಲ್ಕೈದು ಸಿನಿಮಾಗಳು ಇವೆ. ಚಿತ್ರೀಕರಣದಲ್ಲಿ ಆರು ಚಿತ್ರಗಳಿವೆ. ಇದರ ಮಧ್ಯೆ ನನ್ನನ್ನೇ ನಾಯಕನನ್ನಾಗಿ ಮಾಡುವುದಕ್ಕೆ ಒಂದಿಷ್ಟು ಸಿನಿಮಾಗಳು ಮುಂದೆ ಬಂದವು. ಆದರೆ, ಹೀರೋ ಆದರೆ ರಿಸ್ಕ್ ಜಾಸ್ತಿ. ಸಿನಿಮಾ ಶುರುವಾದಾಗಿನಿಂದಲೂ ಅದು ಬಿಡುಗಡೆಯಾದ ಮೇಲೂ ಒತ್ತಡ ಇರುತ್ತದೆ. ರಿಸ್ಕ್ ಜತೆಗೆ ಜವಾಬ್ದಾರಿ ಕೂಡ

ಹೆಚ್ಚಿರುತ್ತದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವ ಬದಲು ಕಾಮಿಡಿ ನಟನಾಗಿಯೇ ಮುಂದುವರಿಯುತ್ತೇನೆ. ಮುಂದೆ ಶರಣ್ ಅವರ ಎಲ್ಲ ಚಿತ್ರಗಳಲ್ಲೂ ಇರುತ್ತೇನೆ. ಕೈ ತುಂಬಾ ಅವಕಾಶಗಳಿವೆ. ಹೀಗಾಗಿ ಹೀರೋ ಆಗುವುದರಿಂದ ಇವೆಲ್ಲ ಮಿಸ್ ಆಗುತ್ತವೆ’ ಎನ್ನುವುದು ಚಿಕ್ಕಣ್ಣ ಅವರ ಲೆಕ್ಕಾಚಾರ. ಆದರೂ ಅವರಿಗೂ ಥಿಯೇಟರ್ ಮುಂದೆ ಹೀರೋ ಅನಿಸಿಕೊಂಡು ಕಟೌಟ್ ಹಾಕಿಕೊಳ್ಳುವ ಆಸೆ ಇದೆ. ಅದು ಯಾವಾಗ ಈಡೇರಿಸಿಕೊಳ್ಳಬೇಕು ಎನ್ನುವ ಪ್ಲಾನ್ ಸದ್ಯಕ್ಕಿಲ್ಲವಂತೆ. ಈ ವಿಚಾರಗಳನ್ನು ‘ರಾಜ್ ವಿಷ್ಣು’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಚಿಕ್ಕಣ್ಣ ಸಿಕ್ಕಾಗ ಹೇಳಿಕೊಂಡ ಮಾತುಗಳು ಇವು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!