ವಿಶ್ವಸಂಸ್ಥೆಯಲ್ಲಿ ಕನ್ನಡ ಹಾಡು ಹಾಡಿದ ರಿಕ್ಕಿಕೇಜ್‌!

By Web DeskFirst Published Nov 11, 2018, 8:03 AM IST
Highlights

ಸ್ವಿಜರ್‌ಲೆಂಡ್‌ನ ಜಿನೆವಾವಾದ ವಿಶ್ವಸಂಸ್ಥೆ ಕಚೇರಿಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ವಾಯುಮಾಲಿನ್ಯ ಮತ್ತು ಆರೋಗ್ಯ ಕುರಿತು ಆಯೋಜಿಸಿದ್ದ ಮೊದಲ ಜಾಗತಿಕ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್‌ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

ಬೆಂಗಳೂರು[ನ.11]: ಇದೇ ಮೊಟ್ಟಮೊದಲ ಬಾರಿಗೆ ಕನ್ನಡದ ಗೀತೆಯೊಂದನ್ನು ವಿಶ್ವಸಂಸ್ಥೆಯ ಕಚೇರಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಕನ್ನಡದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಗಾಯಕ ರಿಕ್ಕಿ ಕೇಜ್‌ ಯಶಸ್ವಿಯಾಗಿದ್ದಾರೆ.

ಸ್ವಿಜರ್‌ಲೆಂಡ್‌ನ ಜಿನೆವಾವಾದ ವಿಶ್ವಸಂಸ್ಥೆ ಕಚೇರಿಯಲ್ಲಿ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ವಾಯುಮಾಲಿನ್ಯ ಮತ್ತು ಆರೋಗ್ಯ ಕುರಿತು ಆಯೋಜಿಸಿದ್ದ ಮೊದಲ ಜಾಗತಿಕ ಸಮ್ಮೇಳನದಲ್ಲಿ ಸಂಗೀತ ನಿರ್ದೇಶಕ ಹಾಗೂ ಗಾಯಕ ರಿಕ್ಕಿ ಕೇಜ್‌ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ‘ಎಲ್ಲಿ ನನ್ನ ಕಾಮನಬಿಲ್ಲು’ ಎಂಬ ಪರಿಸರ ಜಾಗೃತಿ ಮೂಡಿಸುವ ಕನ್ನಡ ಹಾಡನ್ನು ಕರ್ನಾಟಕದ ಖ್ಯಾತ ಗಾಯಕಿ ಮತ್ತು ಕೊಳಲು ವಾದಕಿ ವಾರಿಜಾಶ್ರೀ ಹಾಡಿದರು. ವಿಶ್ವಮಟ್ಟದ ಈ ಸಮಾರಂಭದಲ್ಲಿ ವಿಶ್ವದ ಅಗ್ರಗಣ್ಯ ನಾಯಕರು, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಚುನಾಯಿತ ಪ್ರತಿನಿಧಿಗಳು, ಮುಖ್ಯಸ್ಥರು ಮತ್ತು ಜಗತ್ತಿನ ಅನೇಕ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

click me!