
ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 6 ಕಾರ್ಯಕ್ರಮ ಸದ್ಯ 3 ವಾರ ಕಳೆದಿದೆ.
ಮೊದಲ ವಾರದಲ್ಲಿ ಕ್ರಿಕೆಟರ್ ರಕ್ಷಿತಾ ರೈ ಔಟ್ ಆಗಿದ್ದು, 2ನೇ ವಾರ ಬಿಗ್ ಬಾಸ್ ಮನೆಯಿಂದ ಸಾಫ್ಟ್ ವೇರ್ ಹುಡುಗಿ ರೀಮಾ ಎಲಿಮಿನೇಟ್ ಆಗಿದ್ದರು. ಆದ್ರೆ, ಈ ವಾರ ಯಾರು ಔಟ್ ಆಗುತ್ತಾರೆ ಎಂಬ ಭಾರೀ ಕುತೂಹಲ ಮೂಡಿಸಿತ್ತು.
ಅದಕ್ಕೆ ಇದೀಗ ತೆರೆಬಿದ್ದಿದ್ದು, 3ನೇ ವಾರದ ಬಿಗ್ ಬಾಸ್ ಮನೆಯಿಂದ ನಟಿ ಹಾಗೂ ನೃತ್ಯ ಸಂಯೋಜಕಿ ಸ್ನೇಹ ಆಚಾರ್ಯ ಎಲಿಮಿನೇಟ್ ಆಗಿದ್ದಾರೆ. ಸ್ನೇಹ 'ಬಿಗ್ ಬಾಸ್' ಮೊದಲನೇ ಸಂಚಿಕೆಯಲ್ಲಿ ಸ್ನೇಹ ಆಚಾರ್ಯ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಅಷ್ಟಕ್ಕೂ, ಯಾರೀ ಸ್ನೇಹ ಆಚಾರ್ಯ ?
ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸ್ನೇಹ ಆಚಾರ್ಯ. 'ಕೃಷ್ಣ ಲೀಲಾ', 'ಆಕೆ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸ್ನೇಹ ಆಚಾರ್ಯ ಅಭಿನಯಿಸಿದ್ದಾರೆ.
ಅಷ್ಟೇ ಅಲ್ಲ ಡ್ಯಾನ್ಸ್ ಮಾಡುವುದರಲ್ಲಿಯೂ ಮುಂದಿರುವ ಸ್ನೇಹ, ಮುಂಬೈನಲ್ಲಿ ನೃತ್ಯ ಸಂಯೋಜಕಿಯೂ ಆಗಿದ್ದಾರೆ. ಬಾಲಿವುಡ್ ನಟ ಗೋವಿಂದಾ, ಶಾಹಿದ್ ಕಪೂರ್, ಪ್ರಭುದೇವ, ಪ್ರಿಯಾಂಕಾ ಛೋಪ್ರಾ ಗೆ ಕೋರಿಯೋಗ್ರಫಿ ಮಾಡುವ ತಂಡದಲ್ಲಿ ಸ್ನೇಹ ಆಚಾರ್ಯ ಕೂಡ ಇದ್ದಾರೆ.
ಇದೇ ತಿಂಗಳು ಮದುವೆ ನ್ಯೂಯಾರ್ಕ್ ಮೂಲದ ರಾಯನ್ ಜೊತೆಗೆ ಈಗಾಗಲೇ ಸ್ನೇಹ ಆಚಾರ್ಯಗೆ ನಿಶ್ಚಿತಾರ್ಥ ಆಗಿದ್ದು, ಇದೇ ನವೆಂಬರ್ 24-25 ರಂದು ಸ್ನೇಹ ಆಚಾರ್ಯ-ರಾಯನ್ ಮದುವೆ ಫಿಕ್ಸ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.