
ಬೆಂಗಳೂರು[ಜು.21] ಬಾಲಿವುಡ್ ಬೆಡಗಿ ರೀಚಾ ಛಡ್ಡಾ ಸಾಹಸವೊಂದಕ್ಕೆ ಮುಂದಾಗಿದ್ದಾರೆ. ಶಕೀಲಾ ಜೀವನದ ಕತೆ ಆಧರಿತ ಸಿನಿಮಾದಲ್ಲಿ ಶಕೀಲಾ ಪಾತ್ರ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಟಿ ಶಕೀಲಾ ಅವರನ್ನು ಭೇಟಿ ಮಾಡಿದ್ದಾರೆ. ಕೇವಲ ಭೇಟಿ ಮಾಡಿದ್ದಲ್ಲದೇ ಅನೇಕ ವಿಚಾರಗಳ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ರಾಜಕಾರಣ ಮತ್ತು ಸಿನಿಮಾ ರಂಗದಲ್ಲಿ ಮಹಿಳೆಯರನ್ನು ಹೇಗೆ ತುಳಿಯಲಾಗುತ್ತಿದೆ ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ.
ಅಡಲ್ಟ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಶಕೀಲಾ ಜೀವನದ ಕತೆ ಆಧರಿತ ಸಿನಿಮಾ ತೆರಗೆ ಬರಲಿದೆ. ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿ ಮಾಡುವ ರೀಚಾ ಛಡ್ಡಾ ಈ ಪಾತ್ರದಲ್ಲಿ ಹೇಗೆ ತೊಡಗಿಕೊಳ್ಳಿದ್ದಾರೆ ಎಂದು ಬಾಲಿವುಡ್ ಮಾತ್ರ ಅಲ್ಲ ದಕ್ಷಿಣ ಭಾರತದ ಚಿತ್ರರಂಗ ಸಹ ಎದುರು ನೋಡುತ್ತಿದೆ.
ತಮ್ಮ 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ ನಟಿ ಶಕೀಲಾ ಅವರು ಅರೇ ನೀಲಿ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದರು. ಕನ್ನಡದ ನಿರ್ದೇಶಕ ಇಂದ್ರಜೀತ್ ಲಂಕೇಶ್ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.