
ಬೆಂಗಳೂರು (ಮಾ. 29): ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳಲ್ಲಿ ಬರುವ ಹಾಡುಗಳಂತೆಯೇ ಅವರ ಕಾಸ್ಟ್ಯೂಮ್, ಅವರು ಬಳಸುವ ವಸ್ತುಗಳು ಕೂಡ ಚಿತ್ರ-ವಿಚಿತ್ರ ಹಾಗೂ ಕಲರ್‌ಫುಲ್ ಆಗಿರುತ್ತವೆ. ಅವರ ‘ಏಕಾಂಗಿ’ ಚಿತ್ರ ನೋಡಿದವರಿಗೆ ಅವರು ಬಳಸಿದ ಸ್ಯಾಂಟ್ರೋ ಕಾರು ನೆನಪಿರಬಹುದು. ಈಗ ಅಂಥದ್ದೇ ಭಿನ್ನ ರೀತಿಯ ಕಾರಿನ ಜತೆಗೆ ಮತ್ತೆ ಕ್ರೇಜಿಸ್ಟಾರ್ ಬರುತ್ತಿದ್ದಾರೆ.
ವಿನಯ್ ಕೃಷ್ಣ ನಿರ್ದೇಶಿಸಿ, ತ್ರಿವಿಕ್ರಮ್ ನಿರ್ಮಿಸಿರುವ, ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ‘ಸೀಜರ್’ ಚಿತ್ರದಲ್ಲಿ ರವಿಚಂದ್ರನ್ ಮುಖ್ಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಪಾತ್ರ ಹೇಗಿರುತ್ತದೆ ಎಂಬುದಕ್ಕೆ ಅವರ ಪಾತ್ರಕ್ಕೆ ವಿನ್ಯಾಸ ಮಾಡಿರುವ ಕಾರು ನೋಡಿದರೆ ಗೊತ್ತಾಗುತ್ತದೆ. ನಂಬರ್ ಪ್ಲೇಟ್- ಕೆಎ 01 ವೈ ಜೆಡ್, ಕಾರಿನ ಮುಂದೆ- ಕ್ರೇಜಿ ಸ್ಟಾರ್, ಕಾರಿನ ಗೇರನ್ನು ತಲೆಬುರುಡೆಯಲ್ಲಿ ವಿನ್ಯಾಸ ಮಾಡಲಾಗಿದೆ. ಕಾರಿನ ಹಿಂದೆ ಒಂದು ಸಾಲು- ಇನ್‌ಜೂರ್ಡ್ ಬೈ ಮಾಫಿಯಾ.
ಕಾರಿನ ಮೇಲೆ ಎರಡು ಬಂದೂಕಿನ ಚಿತ್ರಗಳು ಹಾಗೂ ಮೂರು ಆತ್ಮಗಳ ಆಕೃತಿಯನ್ನು ಹೋಲುವ ಚಿತ್ರಗಳು. ಇಷ್ಟೆಲ್ಲ ಭಿನ್ನತೆಯಿಂದ ಕೂಡಿರುವ ಕಪ್ಪು ಬಣ್ಣದ ಸ್ಯಾಂಟ್ರೋ ಕಾರನ್ನು ರವಿಚಂದ್ರನ್‌ಗಾಗಿಯೇ ವಿನ್ಯಾಸ ಮಾಡಲಾಗಿದೆಯಂತೆ. ಇಡೀ ಸಿನಿಮಾ ಕಾರ್ ಮಾಫಿಯಾ ಸುತ್ತ ಸಾಗುತ್ತದೆ. ಇಲ್ಲಿಯವರೆಗೂ ನೋಡಿರದ ಮಾಫಿಯಾದ ನೆರಳು ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಈಗಷ್ಟೇ ವಿಭಿನ್ನವಾಗಿ ವಿನ್ಯಾಸ ಮಾಡಿರುವ ಕಾರಿನ ಚಿತ್ರಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಿಂದೆ ‘ಪರಿ’ ಚಿತ್ರ ನಿರ್ಮಿಸಿದವರು ತ್ರಿವಿಕ್ರಮ್.
ಈಗ ‘ಸೀಜರ್’ನಂತಹ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಏಪ್ರಿಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಪಾರೂಲ್ ಯಾದವ್ ನಾಯಕಿ. ಚಿತ್ರದ ನಾಲ್ಕು
ಹಾಡುಗಳ ಪೈಕಿ ಮೂರು ಹಾಡುಗಳಿಗೆ ಸಾಹಿತ್ಯ ಬರೆಯುವ ಜತೆಗೆ ಸಂಗೀತ ಸಂಯೋಜನೆ ಮಾಡಿರುವುದು ಚಂದನ್ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.