ಜಾತಿ, ಮತ ಹಾಗೂ ಧರ್ಮ ಭೇದವಿಲ್ಲದೆ ದುಡಿದ ಚೇತನ: ರವಿ ಚನ್ನಣ್ಣನವರ್

By Web Desk  |  First Published Jan 21, 2019, 5:02 PM IST

ಶತಾಯುಷಿ, ನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ದಗಂಗಾ ಶಿವಕುಮಾರ ಶ್ರೀಗಳ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಎಲ್ಲ ಕ್ಷೇತ್ರಗಳ ಗಣ್ಯರೂ ಶ್ರೀಗಳು ಲಿಂಗೈಕ್ಯರಾಗಿರುವುದಕ್ಕೆ ಕಂಬನಿ ಮಿಡಿದಿದ್ದಾರೆ.


ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಸಹ ತಮ್ಮ ಟ್ವಿಟರ್ ಖಾತೆಯಲ್ಲಿ ಅಗಲಿದ ಮಾಣಿಕ್ಯನಿಗೆ ಕಂಬನಿ ಮಿಡಿದಿದ್ದಾರೆ.

'ಲಿಂಗೈಕರಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇವೆ. ದುಃಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾವು ಸಹ ಭಾಗಿ. ಜಾತಿ, ಮತ, ಧರ್ಮಗಳ ಭೇದವಿಲ್ಲದೇ ಎಲ್ಲರ ಹಿತಕ್ಕಾಗಿ ದುಡಿದ ಮಹಾನ್ ಚೇತನ ನಡೆದಾಡುವ ದೇವರು...' ಎಂದು ಟ್ವೀಟ್ ಮಾಡಿದ್ದಾರೆ.

Tap to resize

Latest Videos

 

ಲಿಂಗೈಕರಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. 💐

ದು:ಖದಲ್ಲಿರುವ ಸಮಸ್ತ ಭಕ್ತಾಭಿಮಾನಿಗಳ ಶೋಕದಲ್ಲಿ ನಾವು ಸಹ ಭಾಗಿ.

ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರ ಹಿತಕ್ಕಾಗಿ ದುಡಿದ ಮಹಾನ್ ಚೇತನ ನಡೆದಾಡುವ ದೇವರು
Shri 🙏🏻 pic.twitter.com/ozZD4ck2I4

— Ravi D Channannavar, IPS (@DCPWestBCP)

ಕಾಯಕಯೋಗಿ ಶಿವೈಕ್ಯರಾಗಿರುವುದಕ್ಕೆ ದೇಶದ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜಕಾರಣಿಗಳು, ಸಿನಿ ಪ್ರಮುಖರು ಸೇರಿ ದೇಶ ವಿದೇಶಗಳಿಂದಲೂ ಶ್ರೀಗಳು ಚಿರಿ ನಿದ್ರೆಗೆ ಜಾರಿದ್ದಕ್ಕೆ ಭಕ್ತರು ಮಮ್ಮುಲ ಮರುಗಿದ್ದಾರೆ.

ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು

click me!