ಸೂಪರ್‌ ಸಂಡೆಗೆ ರಾಕೇಶ್ ಬರಲೇ ಇಲ್ಲ.. ಕಿಚ್ಚನೇ ಎಲ್ಲ!

Published : Jan 20, 2019, 11:03 PM ISTUpdated : Jan 20, 2019, 11:09 PM IST
ಸೂಪರ್‌ ಸಂಡೆಗೆ ರಾಕೇಶ್ ಬರಲೇ ಇಲ್ಲ.. ಕಿಚ್ಚನೇ ಎಲ್ಲ!

ಸಾರಾಂಶ

ಮನೆಯಿಂದ ರಾಕೇಶ್ ಹೊರಬಂದಿದ್ದಾರೆ. ಈ ಬಾರಿಯ ಸೂಪರ್ ಸಂಡೇ ವಿತ್ ಸುದೀಪ್‌ ಕಾರ್ಯಕ್ರಮದಲ್ಲಿ ರಾಕೇಶ್ ವೇದಿಕೆ ಹತ್ತಲಿಲ್ಲ. ಬದಲಾಗಿ  ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಬಂದರು.

ಕಿಚ್ಚ ಸುದೀಪ್ ಮನೆಯೊಳಗೆ ಹೋಗಿದ್ದೆ ಸ್ಪರ್ಧಿಗಳು ಅವರನ್ನು ಮುತ್ತಿಕೊಂಡರು. ಸುದೀಪ್ ಅವರ ಜತೆ ಹರಟೆ ಹೊಡೆದರು. ಹಾಡು ಹೇಳಿದರು.

ಬಿಗ್‌ ಬಾಸ್ ನೀಡಿದ ಟಾಸ್ಕ್‌ನಂತೆ ಆ್ಯಂಡಿ , ಧನರಾಜ್ ಮತ್ತು ನವೀನ್ ಮಾಡಿದ್ದ ಅಡುಗೆಯನ್ನು ಕಿಚ್ಚ ಸವಿದರು. ಕೊನೆಯಲ್ಲಿ ಈ ಅಡುಗೆ ವಿವರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದ್ದು 3 ಲಕ್ಷ ರೂ. ಬಹುಮಾನ ಇದೆ ಎಂದು ಹೇಳಲಾಯಿತು. ಪ್ರತಿಯೊಬ್ಬರು ತಾವು ಮಾಡಿದ ಅಡುಗೆ ಹೊಗಳಿದ್ದಲ್ಲದೆ ಓಟ್ ಮಾಡುವಂತೆ ಮನವಿ ಮಾಡಿಕೊಂಡರು.

‘ಕ್ಯಾಮರಾ ಇದೆ ಅಂಥ ಜೀವನ ಮಾಡ್ತಿರೋರು ಒಳಗೆ ಇದ್ದಾರೆ’

ಫಿನಾಲೆ ಹಂತಕ್ಕೆ ಬಿಗ್ ಬಾಸ್ ಬಂದಿದೆ. ಕಿಚ್ಚ ಸುದೀಪ್ ಪ್ರತಿಯೊಬ್ಬರಿಗೂ ಒಂದೊಂದು ಪತ್ರ ಬರೆದಿಟ್ಟು ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿ ಹೊರಕ್ಕೆ ಬಂದರು. ಸ್ಪರ್ಧಿಗಳು ಕಿಚ್ಚ ಸುದೀಪ್ ಹೇಳದೆ ಹೋಗಿದ್ದಕ್ಕೆ ನೊಂದುಕೊಂಡರು. ಆದರೆ ಪತ್ರ ನೋಡಿ ಖುಷಿ ಪಟ್ಟರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!