ಸಮಂತಾಳಿಗೆ 'Your Fan' ಎಂದ ರಶ್ಮಿಕಾ ಮೇಲೆ ಫ್ಯಾನ್ಸ್ ಗರಂ ?

Published : Apr 29, 2019, 03:36 PM IST
ಸಮಂತಾಳಿಗೆ 'Your Fan' ಎಂದ ರಶ್ಮಿಕಾ ಮೇಲೆ ಫ್ಯಾನ್ಸ್ ಗರಂ ?

ಸಾರಾಂಶ

ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾಗಿರುವ ಸ್ಯಾಂಡಲ್‌ವುಡ್ ಕ್ರಷ್‌ ರಶ್ಮಿಕಾ ಮಂದಣ್ಣ ನಟಿ ಸಮಂತಾಳ ಬಗ್ಗೆ ಟ್ಟೀಟ್ ಮಾಡಿರುವುದಕ್ಕೆ ಸಮಂತಾ ಫ್ಯಾನ್ಸ್‌ ಶಾಕ್ ಆಗಿದ್ದಾರೆ ಯಾಕೆ ಗೊತ್ತಾ? ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಕಾಲ್ ಶೀಟ್ ಖಾಲಿ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ಸ್ಟಾರ್‌ ನಟರೊಂದಿಗೆ ಸಿನಿಮಾ ಮಾಡುತ್ತಾ ಬಿಗ್ ಹಿಟ್ ನೀಡುತ್ತಿದ್ದಾರೆ. ತೆರೆ ಕಂಡ ಸಿನಿಮಾಗಳೆಲ್ಲಾ ಫುಲ್ ಹಿಟ್. ಈ ನಡುವೆ ರಶ್ಮಿಕಾ ಸಮಂತಾಳ ಬಗ್ಗೆ ಮಾಡಿರುವ ಟ್ಟೀಟ್ ವೊಂದು ವೈರಲ್ ಆಗಿದೆ.

ಹೌದು ಏಪ್ರಿಲ್ 28 ರಂದು ಸಮಂತಾ ಹುಟ್ಟುಹಬ್ಬದ ಪ್ರಯುಕ್ತ ಟ್ಟೀಟರ್‌ನಲ್ಲಿ 'ಹ್ಯಾಪಿ ಹ್ಯಾಪಿ ಬರ್ತಡೇ ಸಮಂತಾ ಮ್ಯಾಮ್. ನಿಮ್ಮ ಜೀವನ ಹೆಚ್ಚು ಸಂತೋಷ ಹಾಗೂ ಕೇಕ್‌ಗಳಿಂದ ತುಂಬಿರಲಿ. ನಿಮ್ಮ ಅಭಿಮಾನಿ ರಶ್ಮಿಕಾ' ಎಂದು ಬರೆದುಕೊಂಡಿದ್ದರು.

 

ಫೇಮಸ್ ನಟಿಯಾಗಿ ಮತ್ತೊಬ್ಬ ನಟಿಗೆ ಫ್ಯಾನ್‌ ಆಗುವುದೆಂದರೆ ದೊಡ್ಡ ವಿಚಾರ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ Your Fan ಎಂದು ಬರೆದುಕೊಂಡಿರುವುದು ಸಮಂತಾ ಫ್ಯಾನ್ಸ್‌ಗೆ ಬಿಗ್ ಶಾಕ್ ನೀಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS
ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!