
ಸಿನೆಮಾ ಪರದೆ ಮೇಲೆ ಜೋಡಿಯಾಗಿ ಕಾಣಿಸಿಕೊಂಡು, ಪ್ರೇಕ್ಷಕರ ಹೃದಯ ಕದ್ದ ಜೋಡಿಗಳು ರಿಯಲ್ ಲೈಫ್‌ನಲ್ಲೂ ಒಂದಾದರೆ ಆ ಸಂಭ್ರಮವೇ ಬೇರೆ. ಕಳೆದ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ರೌಡಿ ಬಾಯ್ ವಿಜಯ್ ದೇವರಕೊಂಡ ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು, ಈ ಜೋಡಿಯ ಕ್ಯೂಟ್ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ.
ವೇದಿಕೆ ಮೇಲೆಯೇ ಪತಿ ವಿಜಯ್ ದೇವರಕೊಂಡ ಅವರ ಮುಖದ ಬೆವರನ್ನ ಪ್ರೀತಿಯಿಂದ ಒರೆಸಿ, ಅವರ ಮೀಸೆಯನ್ನ ಸರಿಪಡಿಸುತ್ತಿರುವ ರಶ್ಮಿಕಾ ಅವರ ವಿಡಿಯೋ ಅಭಿಮಾನಿಗಳ ಹೃದಯ ಗೆಲ್ತಾ ಇದೆ. ಈ ನವದಂಪತಿಗಳ ನಡುವಿನ ಆಪ್ತತೆ ಮತ್ತು ಅತಿ ಮಧುರ ಪ್ರೀತಿಗೆ ಈ ವಿಡಿಯೋ ಸಾಕ್ಷಿಯಾಗಿದೆ. ಇದು ಕೇವಲ ಪ್ರೀತಿಯ ಪ್ರದರ್ಶನವಲ್ಲ, ಇದರ ಹಿಂದೆ ಒಂದು ದೊಡ್ಡ ಜವಾಬ್ದಾರಿ ಮತ್ತು ಕೊಟ್ಟ ಮಾತಿನ ಕಥೆಯಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗುವ ಕೆಲ ದಿನಗಳ ಮುನ್ನ, ವಿಜಯ್ ತಂದೆಯವರ ಹುಟ್ಟೂರಾದ ತೆಲಂಗಾಣದ ಅಚ್ಚಂಪೇಟೆ ಮಂಡಲದ ತುಂಬನಪೇಟ್ ಗ್ರಾಮದ ಕೆಲವು ವಿದ್ಯಾರ್ಥಿಗಳಿಗೆ ದೇವರಕೊಂಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆರವು ನೀಡಲಾಗಿತ್ತು. ಅಂದು ಅದೇ ವೇದಿಕೆಯಲ್ಲಿ ವಿಜಯ್ ಮತ್ತು ರಶ್ಮಿಕಾ ಒಂದು ಮಾತು ಕೊಟ್ಟಿದ್ದರು. 'ಮುಂದಿನ ದಿನಗಳಲ್ಲಿ ನಾವು ಈ ಗ್ರಾಮದ ಸರ್ಕಾರಿ ಶಾಲೆಯ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಪೂರ್ಣ ಕೈಲಾದ ಸಹಾಯ ಮಾಡುತ್ತೇವೆ' ಅಂತ ಭರವಸೆ ನೀಡಿದ್ದರು.
ಈಗ ಹೇಳಿದಂತೆಯೇ ಈ ತಾರಾ ದಂಪತಿ ತಮ್ಮ ಮಾತನ್ನ ಉಳಿಸಿಕೊಂಡಿದ್ದಾರೆ. 'ದಿ ದೇವರಕೊಂಡ ಫೌಂಡೇಶನ್' ಮೂಲಕ ಅಚ್ಚಂಪೇಟೆ ಮಂಡಲದ 9 ಮತ್ತು 10ನೇ ತರಗತಿಯ ಒಟ್ಟು 180 ಕಠಿಣ ಪರಿಶ್ರಮಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನ ವಿತರಿಸಿದ್ದಾರೆ. ವಿಜಯ್ ದೇವರಕೊಂಡ ತಮ್ಮ (X) ಖಾತೆಯಲ್ಲಿ ವಿದ್ಯಾರ್ಥಿಗಳ ಪಟ್ಟಿಯನ್ನ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. "ಈ ವಿದ್ಯಾರ್ಥಿವೇತನ ಬಹಳ ಚಿಕ್ಕದಾಗಿರಬಹುದು, ಆದರೆ ನನ್ನ ಗ್ರಾಮದಿಂದ ಆರಂಭವಾದ ಈ ಪ್ರಯತ್ನ ಮುಂದಿನ ದಿನಗಳಲ್ಲಿ ಇಡೀ ತೆಲಂಗಾಣದಾದ್ಯಂತ ವಿಸ್ತರಣೆಯಾಗಬೇಕು ಎಂಬುದು ನನ್ನ ಕನಸು" ಅಂತ ವಿಜಯ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಇದೇ ಕಾರ್ಯಕ್ರಮದ ಮಧ್ಯೆ, ಸುಡುವ ಬಿಸಿಲಿನಲ್ಲಿ ವಿಜಯ್ ದೇವರಕೊಂಡ ಮುಖದಲ್ಲಿ ಬೆವರು ಹನಿಗಳು ಮೂಡಿದಾಗ, ಪತ್ನಿಯಾಗಿ ರಶ್ಮಿಕಾ ತಕ್ಷಣವೇ ಸ್ಪಂದಿಸಿದ್ದಾರೆ. ಎಲ್ಲರ ಸಮ್ಮುಖದಲ್ಲೇ ವಿಜಯ್ ಬೆವರನ್ನ ಒರೆಸಿ, ಅವರ ಮೀಸೆಯನ್ನ ಪ್ರೀತಿಯಿಂದ ಸರಿಪಡಿಸಿದ್ದಾರೆ. ಈ ಸುಂದರ ಕ್ಷಣ ಈಗ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ರೀಲ್ ಲೈಫ್‌ನ ಸೂಪರ್ ಹಿಟ್ ಜೋಡಿ ರಿಯಲ್ ಲೈಫ್‌ನಲ್ಲೂ ಬೆಸ್ಟ್ ಕಪಲ್ಸ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.