
ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಪತಿ, ನಟ ವಿಜಯ್ ದೇವರಕೊಂಡ ಅವರೊಂದಿಗಿನ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಎದುರಾಗುವ ನೋವು ಮತ್ತು ಭಾವನಾತ್ಮಕ ಏರಿಳಿತಗಳ ಸಂದರ್ಭದಲ್ಲಿ ವಿಜಯ್ ಹೇಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. ಈ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿವೆ.
ಮುಟ್ಟಿನ ನೋವಿನ ಸಮಯದಲ್ಲಿ ವಿಜಯ್ ಸಾಥ್ ಹೇಗಿರುತ್ತೆ?
ಮಿಡ್-ಡೇ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ, ತಮ್ಮ ಮುಟ್ಟು ಸಮೀಪಿಸುತ್ತಿರುವಾಗ ವಿಜಯ್ಗೆ ಮೊದಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತನಗೆ ಹೆಚ್ಚಿನ ಪ್ರೀತಿ, ಕಾಳಜಿ ಮತ್ತು ಬೆಂಬಲದ ಅಗತ್ಯವಿರುತ್ತದೆ ಎಂಬುದನ್ನು ಪತಿಗೆ ಸ್ಪಷ್ಟವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
"ನಾನು ಯಾವ ಪರಿಸ್ಥಿತಿಯಲ್ಲಿದ್ದೇನೆ ಮತ್ತು ಏಕೆ ಹೀಗೆ ಭಾವಿಸುತ್ತಿದ್ದೇನೆ ಎಂಬುದು ಅವರಿಗೆ ಅರ್ಥವಾಗುತ್ತದೆ. ನಾನೂ ನನ್ನ ಭಾವನೆಗಳನ್ನು ಮುಕ್ತವಾಗಿ ಹೇಳುವ ವ್ಯಕ್ತಿ" ಎಂದು ರಶ್ಮಿಕಾ ಹೇಳಿದ್ದಾರೆ.
ಮುಟ್ಟಿನ ಸಮಯದಲ್ಲಿ ತಮಗೆ ನೋವು ಅಥವಾ ಬೇಸರವಾದಾಗ ವಿಜಯ್ ತಮ್ಮನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ ಎಂದು ನಟಿ ವಿವರಿಸಿದ್ದಾರೆ. ಹೊಟ್ಟೆಯನ್ನು ನಿಧಾನವಾಗಿ ಸವರಿ ನೋವು ಕಡಿಮೆ ಮಾಡಲು ಪ್ರಯತ್ನಿಸುವುದರ ಜೊತೆಗೆ, ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
"ಒಬ್ಬ ಪುರುಷನಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಗರ್ಭಕೋಶವನ್ನು ತೆಗೆದುಹಾಕಲು ಸಾಧ್ಯವಿಲ್ಲವಲ್ಲ. ಆದರೆ ಅವರು ನನ್ನ ಜೊತೆಗಿದ್ದಾರೆ ಎಂಬ ಭಾವನೆಯೇ ಸಮಾಧಾನ ನೀಡುತ್ತದೆ" ಎಂಬರ್ಥದಲ್ಲಿ ರಶ್ಮಿಕಾ ಮಾತನಾಡಿದ್ದಾರೆ.
ಪತಿಯ ಈ ಕಾಳಜಿ ಮುಟ್ಟಿನ ಸಮಯದಲ್ಲಿ ತಮಗೆ ಮಾನಸಿಕ ನೆಮ್ಮದಿ ನೀಡುತ್ತದೆ ಎಂಬುದನ್ನು ಅವರ ಮಾತುಗಳು ತೋರಿಸಿವೆ.
'ಕಾಫಿ ವಿತ್ ಕರಣ್' ಶೋ ಬಳಿಕ ಜೋಡಿ ಬಗ್ಗೆ ಚರ್ಚೆ
ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು 'ಕಾಫಿ ವಿತ್ ಕರಣ್' ಸೀಸನ್ 9ರಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿ, ಸಂಬಂಧ ಮತ್ತು ಮದುವೆಯ ಪಯಣದ ಬಗ್ಗೆ ಮಾತನಾಡಿದ್ದರು.
ತಮ್ಮ ಸಂಬಂಧದ ಆರಂಭದ ದಿನಗಳನ್ನು ನೆನಪಿಸಿಕೊಂಡ ವಿಜಯ್, ಕಷ್ಟದ ಸಂದರ್ಭಗಳಲ್ಲಿಯೂ ಪರಸ್ಪರ ಹೇಗೆ ಜೊತೆಯಾಗಿರುತ್ತೇವೆ ಎಂಬುದನ್ನು ಅರಿತುಕೊಂಡ ನಂತರ ಮದುವೆಯ ನಿರ್ಧಾರಕ್ಕೆ ಬಂದಿದ್ದಾಗಿ ವಿವರಿಸಿದ್ದರು. ರಶ್ಮಿಕಾ ಕೂಡ ಮದುವೆಯ ವಿಷಯವನ್ನು ಸುಮಾರು ಒಂದು ವರ್ಷದಿಂದ ಪ್ರಸ್ತಾಪಿಸುತ್ತಿದ್ದೆ ಎಂದು ಹೇಳಿದ್ದರು.
ಆದರೆ ಕಾರ್ಯಕ್ರಮದ ಕೆಲವು ಮಾತುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ವಿಜಯ್ ಅವರ ಕೆಲವು ಹೇಳಿಕೆಗಳು ಅಹಂಕಾರದಿಂದ ಕೂಡಿವೆ ಮತ್ತು ರಶ್ಮಿಕಾ ಅವರಿಗೆ ಅಗೌರವ ತೋರಿಸುತ್ತವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.
ಮದುವೆಯ ಬಳಿಕ ಮತ್ತೆ ತೆರೆಮೇಲೆ ಒಂದಾದ ಜೋಡಿ
ರಶ್ಮಿಕಾ ಮತ್ತು ವಿಜಯ್ ಅವರು 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳ ಮೂಲಕ ಜನಪ್ರಿಯ ಜೋಡಿಯಾಗಿದ್ದರು. ಇತ್ತೀಚೆಗೆ ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರ 'ರಣಬಾಲಿ' ಚಿತ್ರದಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ನಡೆದ ಮದುವೆಯ ಬಳಿಕ ಇದು ಅವರ ಮೊದಲ ಆನ್ಸ್ಕ್ರೀನ್ ಜೋಡಿ ಎನ್ನಲಾಗಿದೆ.
ವೈಯಕ್ತಿಕ ಜೀವನದ ಬಗ್ಗೆ ರಶ್ಮಿಕಾ ಹಂಚಿಕೊಂಡಿರುವ ಈ ಮಾತುಗಳು ಇದೀಗ ಮತ್ತೆ ವಿಜಯ್ ಮತ್ತು ರಶ್ಮಿಕಾ ಜೋಡಿಯ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿವೆ. ಟೀಕೆಗಳ ನಡುವೆಯೂ ತಮ್ಮ ಪತಿಯ ಕಾಳಜಿ ಮತ್ತು ಬೆಂಬಲದ ಬಗ್ಗೆ ನಟಿ ಮುಕ್ತವಾಗಿ ಮಾತನಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.