
ಬೆಂಗಳೂರು (ಅ.24) ನಟ ದರ್ಶನ್ ಆಪ್ತ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಜಗಳ ಬೀದಿ ರಂಪಾಟವಾಗಿದೆ. ದರ್ಶನ್ ಬಿಡುಗಡೆಗೆ ಹೇಳಿಕೊಳ್ಳುವವರು ಪ್ರಯತ್ನಿಸುತ್ತಿಲ್ಲ. ದರ್ಶನ್ ಪರ ನಿಂತಿರುವ ನನ್ನ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಟ ಧನ್ವೀರ್ ಹೇಳಿದ್ದಾರೆ. ಇದೇ ವೇಳೆ ವಿಜಯಲಕ್ಷ್ಮಿ ಮ್ಯಾನೇಜರ್ ಜೊತೆ ಮಾತನಾಡಿರುವ ಆಡಿಯೋ ಕುರಿತು ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ. ಫುಲ್ ಆಡಿಯೋ ಬಿಡಲಿ ಅವರು, ಯಾಕೆ ಕಟ್ ಕಟ್ ಮಾಡಿ ಆಡಿಯೋ ರಿಲೀಸ್ ಮಾಡುತ್ತಿದ್ದಾರೆ. ಎಲ್ಲಾ ನಾಟಕಗಳನ್ನು, ಮುಖವಾಡಗಳನ್ನು ಶೀಘ್ರದಲ್ಲೇ ಕಳಚುತ್ತೇನೆ ಎಂದು ಧನ್ವೀರ್ ಹೇಳಿದ್ದಾರೆ.
ವಿಜಯಲಕ್ಷ್ಮಿ ಅವರ ತಂಗಿ ಗಂಡ ನನಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. ದರ್ಶನ್ ಪರವಾಗಿ ನಿಂತರೆ ದರ್ಶನ್ ಆಗಿರುವ ಗತಿನೇ ಮಾಡಿಸ್ತೀವಿ ಎಂದು ಧಮ್ಕಿ ಹಾಕಿದ್ದಾರೆ. ನಾನು ದರ್ಶನ್ ಪರವಾಗಿ ನಿಂತಿದ್ದೇನೆ ಎಂದು ನಟ ಧನ್ವೀರ್ ಹೇಳಿದ್ದಾರೆ. ಆದರೆ ನನ್ನನ್ನೇ ಇದೀಗ ದರ್ಶನ್ ಭೇಟಿ ಮಾಡಲು ಬಿಡುತ್ತಿಲ್ಲ. ನಟ ದರ್ಶನ್‌ಗೆ ಎಲ್ಲವೂ ಗೊತ್ತಿದೆ. ಯಾರೆಲ್ಲಾ ಏನೇನು ಮಾಡುತ್ತಿದ್ದಾರೆ, ಯಾರು ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಧನ್ವೀರ್ ಹೇಳಿದ್ದಾರೆ. ಯಾರು ಏನು ಮಾಡುತ್ತಿದ್ದಾರೆ, ಯಾರು ನಾಟಕ ಮಾಡುತ್ತಿದ್ದಾರೆ ಎಲ್ಲವೂ ದರ್ಶನ್‌ಗೆ ಗೊತ್ತಿದೆ ಎಂದು ಧನ್ವೀರ್ ಹೇಳಿದ್ದಾರೆ.
ದರ್ಶನ್ ಕುರಿತು ಕೆಲ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಇವೆಲ್ಲವೂ ಸಂಪೂರ್ಣ ಸುಳ್ಳು. ಅವರೆಲ್ಲಾ ನಾಟಕ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾಕ್ಷ್ಯ ನಾಶ ವಿಚಾರದಲ್ಲಿ ಡಿ ಕಂಪನಿ ಪುನೀತ್ ಸೇರಿದಂತೆ ಕೆಲವರನ್ನು ಅರೆಸ್ಟ್ ಮಾಡಲಾಗುತ್ತದೆ. ಈ ಕೇಸ್‌ನ ತನಿಖೆ ಆಗುತ್ತೆ. ಈ ಪ್ರಕರಣದಲ್ಲಿ ಎಫ್ಎಸ್ಎಲ್ ರಿಪೋರ್ಟ್ ಕೂಡ ಬಂದಿದೆ. ಆದರೆ ಈ ರಿಪೋರ್ಟ್ ಬಂದ ಬಳಿಕ ಎಲ್ಲವೂ ಮುಚ್ಚಿ ಹೋಯಿತು. ಇದನ್ನು ಬಹಿರಂಗ ಪಡಿಸಲಿದೆ. ಯಾಕೆ ಇದು ಮುಚ್ಚಿ ಹೋಯಿತು. ಇದರಲ್ಲಿ ಕೆಲವರ ಹೆಸರು ಇದೆ. ಅದೇ ಕಾರಣಕ್ಕೆ ಈ ಪ್ರಕರಣ ಮುಚ್ಚಿ ಹೋಯಿತು ಎಂದು ಧನ್ವೀರ್ ಹೇಳಿದ್ದಾರೆ.
ಮಾಫಿ ಸಾಕ್ಷಿ ಪ್ರದೋಷ್ ಫೋನ್‌ನಲ್ಲಿ ಮಾತನಾಡಿದ್ದಾರೆ ಅನ್ನೋದು ಪ್ರಕರಣ ದಾಖಲಾಗಿದೆ. ಇಬ್ಬರು ವ್ಯಕ್ತಿಗಳ ಜೊತೆ ಮಾತನಾಡಿದ್ದಾರೆ ಎಂಬ ಆರೋಪವಿದೆ. ಆ ವ್ಯಕ್ತಿಗಳು ಯಾರು, ಅದನ್ನು ಬಹಿರಂಗಪಡಿಸಿ. ಇವೆಲ್ಲವನ್ನು ನೋಡಿದ್ದೇವೆ. ದರ್ಶನ್‌ಗಾಗಿ ನಾನು ಎಲ್ಲವನ್ನು ತಡೆದುಕೊಂಡಿದ್ದೆ. ಆದರೆ ಪ್ರತಿ ದಿನ ಈ ರೀತಿ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ನಾನು ಇದೀಗ ಮಾತನಾಡುತ್ತಿದ್ದೇನೆ ಎಂದು ಧನ್ವೀರ್ ಹೇಳಿದ್ದಾರೆ.
ಹೊರಗಡೆ ಒಂದು ಹೇಳುತ್ತಾರೆ, ಜೈಲಿಗೆ ಹೋಗಿ ಇನ್ನೊಂದು ಮಾಕನಾಡುತ್ತಾರೆ. ದರ್ಶನ್ ರಿಲೀಸ್‌ಗೆ ಹೇಳಿಕೊಳ್ಳುವವರು ಯಾರು ಪ್ರಯತ್ನ ಮಾಡುತ್ತಿಲ್ಲ. ದರ್ಶನ್‌ಗೆ ಅನ್ಯಾಯವಾಗುತ್ತಿದೆ. ಆದರೆ ನಾನು ದರ್ಶನ್ ಪರ ನಿಂತಿದ್ದೇನೆ,ಈ ನಿಲುವಿನಲ್ಲಿ ಯಾವುದೇ ಅನುಮಾನವಿಲ್ಲ. ನನ್ನ ಮೇಲೆ ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಧನ್ವೀರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.