
Shocking-Accident for Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾಗೆ ಬಿಗ್ ಶಾಕ್: ಶೂಟಿಂಗ್ ಸೆಟ್‌ನಲ್ಲಿ ಅನಾಹುತ; 6 ವಾರಗಳ ಕಾಲ ಮನೆಯಲ್ಲೇ ಇರಲಿದ್ದಾರೆ ಸಾನ್ವಿ!
ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ತನ್ನ ನಗು ಮತ್ತು ನಟನೆಯಿಂದ ಕಿಚ್ಚು ಹಚ್ಚಿರೋ 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಈಗ ಅಕ್ಷರಶಃ ಬರಸಿಡಿಲು ಬಡಿದಂತಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾರುತ್ತಾ ಶೂಟಿಂಗ್‌ನಲ್ಲಿ ತೊಡಗಿದ್ದ ರಶ್ಮಿಕಾ ಅವರಿಗೆ ಈಗ ಅನಿರೀಕ್ಷಿತ 'ಬ್ರೇಕ್' ಬಿದ್ದಿದೆ. ಹೌದು, ಶೂಟಿಂಗ್ ಸೆಟ್‌ನಲ್ಲಿ ನಡೆದ ಅವಘಡವೊಂದು ಕೊಡಗಿನ ಬೆಡಗಿಯನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಿದೆ.
ಸಿನಿಮಾವೊಂದರ ಅದ್ದೂರಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಹೈ-ಎನರ್ಜಿ ಸ್ಟೆಪ್‌ಗಳನ್ನು ಹಾಕುತ್ತಾ ರಶ್ಮಿಕಾ ಮಂದಣ್ಣ ಕ್ಯಾಮರಾ ಮುಂದೆ ಮಿಂಚುತ್ತಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು. ಡ್ಯಾನ್ಸ್ ಮಾಡುವ ಬರದಲ್ಲಿ ರಶ್ಮಿಕಾ ಆಯತಪ್ಪಿ ಜೋರಾಗಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ಸೊಂಟದ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು, ತಕ್ಷಣವೇ ಚಿತ್ರತಂಡ ಅವರನ್ನು ಆಸ್ಪತ್ರೆಗೆ ರವಾನಿಸಿದೆ. ವೈದ್ಯರ ತಪಾಸಣೆ ಬಳಿಕ ತಿಳಿದು ಬಂದ ವಿಷಯವೇನೆಂದರೆ, ಗಾಯ ತೀವ್ರವಾಗಿದ್ದು, ರಶ್ಮಿಕಾ ಅವರಿಗೆ ಕನಿಷ್ಠ 6 ವಾರಗಳ ಕಾಲ ಕಟ್ಟುನಿಟ್ಟಿನ ಬೆಡ್ ರೆಸ್ಟ್ ಅಗತ್ಯವಿದೆ!
ಟಾಲಿವುಡ್‌ನ 'ಗಾಯ'ದ ಟ್ರೆಂಡ್!
ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ಗ್ರಹಚಾರ ಸರಿ ಇಲ್ಲದಂತಿದೆ. ರಾಮ್ ಚರಣ್, ನಂದಮೂರಿ ಬಾಲಕೃಷ್ಣ ಮತ್ತು ಜೂನಿಯರ್ ಎನ್‌ಟಿಆರ್ ಕೂಡ ಶೂಟಿಂಗ್ ವೇಳೆ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗ ಆ ಪಟ್ಟಿಗೆ ರಶ್ಮಿಕಾ ಮಂದಣ್ಣ ಕೂಡ ಸೇರ್ಪಡೆಯಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. "ಏನಿದು ದೃಷ್ಟಿ ತಗುಲಿದೆಯೇ?" ಎಂದು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಚರ್ಚಿಸುತ್ತಿದ್ದಾರೆ.
ರಶ್ಮಿಕಾ ಕೈಯಲ್ಲಿ ಈಗ ಡಜನ್ ಗಟ್ಟಲೆ ಸಿನಿಮಾಗಳಿವೆ. ರವೀಂದ್ರ ಫುಲ್ಲೆ ನಿರ್ದೇಶನದ 'ಮೈಸಾ' ಚಿತ್ರದಲ್ಲಿ ಬುಡಕಟ್ಟು ಮಹಿಳೆಯಾಗಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಇತ್ತೀಚೆಗಷ್ಟೇ ಸಾಹಸ ದೃಶ್ಯಗಳ ಚಿತ್ರೀಕರಣ ಮುಗಿಸಿದ್ದರು. ಇನ್ನು ವಿಜಯ್ ದೇವರಕೊಂಡ ಜೊತೆಗಿನ 'ರಣಬಾಲಿ' ಚಿತ್ರದ ಮೇಲೂ ದೊಡ್ಡ ನಿರೀಕ್ಷೆ ಇದೆ. ಆದರೆ ಈಗ ಈ ಎಲ್ಲಾ ಸಿನಿಮಾಗಳ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆಕ್ಷನ್ ಮತ್ತು ಡ್ಯಾನ್ಸ್ ದೃಶ್ಯಗಳನ್ನು ರಶ್ಮಿಕಾ ಗುಣಮುಖರಾಗುವವರೆಗೆ ಚಿತ್ರೀಕರಿಸಬಾರದು ಎಂದು ನಿರ್ದೇಶಕರು ನಿರ್ಧರಿಸಿದ್ದಾರೆ.
ಅಭಿಮಾನಿಗಳ ಹಾರೈಕೆ:
ರಶ್ಮಿಕಾ ಅವರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ "ಗೆಟ್ ವೆಲ್ ಸೂನ್ ರಶ್ಮಿ" (Get Well Soon Rashmika) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. "ನಮ್ಮ ಶ್ರೀವಲ್ಲಿ ಬೇಗ ಗುಣಮುಖರಾಗಿ ಬರಲಿ, ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲಿ" ಎಂದು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಒಟ್ಟಿನಲ್ಲಿ, ಸದಾ ಲವಲವಿಕೆಯಿಂದ ಓಡಾಡುತ್ತಿದ್ದ ರಶ್ಮಿಕಾ ಈಗ ಮನೆಯ ನಾಲ್ಕು ಗೋಡೆಗಳ ಮಧ್ಯೆ ವಿಶ್ರಾಂತಿ ಪಡೆಯುವಂತಾಗಿದೆ. ಚಿಕಿತ್ಸೆ ಫಲಕಾರಿಯಾಗಿ ಅವರು ಆದಷ್ಟು ಬೇಗ ಚೇತರಿಸಿಕೊಂಡು, ಮತ್ತೆ ತಮ್ಮ ಅದ್ಭುತ ನೃತ್ಯ ಮತ್ತು ನಟನೆಯ ಮೂಲಕ ನಮಗೆಲ್ಲಾ ರಂಜನೆ ನೀಡಲಿ ಎಂಬುದೇ ನಮ್ಮ ಆಶಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.