
ಒಂದು ಕಡೆ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಬಹುನಿರೀಕ್ಷಿತ ಚಿತ್ರಗಳ ಸಾಲು ಮತ್ತೊಂದು ಕಡೆ ತೆಲುಗಿನಲ್ಲೂ ಬ್ಯುಸಿಯಾಗಿದ್ದ ಚೆಲುವೆ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಾಗ ಟೈಟಲ್ ಇನ್ನೂ ಅಂತಿಮವಾಗಿರಲಿಲ್ಲ. ಈಗ ‘ವೃತ್ರ’ ಟೈಟಲ್ ಫಿಕ್ಸ್ ಆಗಿದೆ. ರಶ್ಮಿಕಾ ಚಿತ್ರದಲ್ಲಿ ಚೆಸ್ ಪ್ಲೇಯರ್ ಆಗಿ ಕಾಣಿಸಿಕೊಂಡು ನೂತನವಾದ ಮೈಂಡ್ ಗೇಮ್ ಚಿತ್ರವನ್ನು ಮಾಡುವ ಆಶಯ ಹೊಂದಿದ್ದಾರೆ. ಚಿತ್ರ ಘೋಷಣೆಯಾಗುತ್ತಿದಂತೆಯೇ ‘ತಂದೆಯವರಿಗೆ ತನ್ನನ್ನು ಪೊಲೀಸ್ ಅಧಿಕಾರಿಯಾಗಿ ನೋಡುವ ಆಸೆ ಇತ್ತು. ಅವರಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದಿದ್ದ ರಶ್ಮಿಕಾ ಈಗ ‘ಇನ್ವೆಸ್ಟಿಗೇಟಿಂಗ್ ಆಫೀಸರ್ ಆ ವರ್ಡ್ ಕೇಳುದ್ರೆ ಏನೋ ಕಡಕ್ ಫೀಲ್ ಬರುತ್ತೆ. ಸಿಕ್ಕಿರುವ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
ಈ ಮೊದಲು ರಕ್ಷಿತ್ ಶೆಟ್ಟಿ ಜೊತೆಗೆ ಕೆಲಸ ಮಾಡಿರುವ ಗೌತಮ್ ಅಯ್ಯರ್ ‘೭೭೭ ಚಾರ್ಲಿ’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಕತೆಯನ್ನು ಸಿದ್ಧಮಾಡಿಕೊಂಡು ತೆರೆಗೆ ತರಲು ಮುಂದಾಗಿದ್ದ ಗೌತಮ್ ಅಯ್ಯರ್ ರಶ್ಮಿಕಾ ಅವರನ್ನು ಆಫೀಸರ್ ಪಾತ್ರದಲ್ಲಿ ತೆರೆಗೆ ತರುವ ಮೊದಲ ಪ್ರಯತ್ನವಾಗಿ ಫಸ್ಟ್‌ಲುಕ್ ಅನ್ನು ವಾರದ ಹಿಂದೆ ಬಿಡುಗಡೆ ಮಾಡಿದ್ದರು. ಈಗ ಚಿತ್ರದ ಟೈಟಲ್ ಅಂತಿಮವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.