
ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರದ ದಾಖಲೆಯನ್ನು ಮುರಿದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ ಪ್ರತಿಕಾರ' ಸಿನಿಮಾ ಹೊಸ ಇತಿಹಾಸ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ ₹1783 ಕೋಟಿ ಗಳಿಕೆ ಕಂಡಿದೆ. ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ 'ಧುರಂಧರ್ ಪ್ರತಿಕಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ, ಬಿಡುಗಡೆಯಾಗಿ 30 ದಿನ ಕಳೆದರೂ ತನ್ನ ನಾಗಾಲೋಟ ಮುಂದುವರಿಸಿದೆ.
ಭಾರತದಲ್ಲೇ ₹1000 ಕೋಟಿ ನೆಟ್ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ 'ಧುರಂಧರ್ ಪ್ರತಿಕಾರ' ಪಾತ್ರವಾಗಿದೆ. ಬಿಡುಗಡೆಯಾದ ಒಂದು ತಿಂಗಳಲ್ಲಿ ಈ ಚಿತ್ರ ವಿಶ್ವಾದ್ಯಂತ ಬರೋಬ್ಬರಿ ₹1783 ಕೋಟಿ ಬಾಚಿಕೊಂಡಿದೆ. ಭಾರತದಿಂದಲೇ ಚಿತ್ರದ ನೆಟ್ ಕಲೆಕ್ಷನ್ ₹1153 ಕೋಟಿ ದಾಟಿದೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲೂ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ದಾಖಲೆಯನ್ನೂ ಈ ಚಿತ್ರ ತನ್ನದಾಗಿಸಿಕೊಂಡಿದೆ.
ಈ ಹಿಂದೆ ಈ ದಾಖಲೆ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರದ ಹೆಸರಲ್ಲಿತ್ತು. ಚಿತ್ರದ ನಿರ್ಮಾಪಕರು ಭಾರತದ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದ್ದಾರೆ. ಅದರಂತೆ, ಮೊದಲ ವಾರ (8 ದಿನ) ₹690 ಕೋಟಿ, ಎರಡನೇ ವಾರ ₹271 ಕೋಟಿ, ಮೂರನೇ ವಾರ ₹120 ಕೋಟಿ ಹಾಗೂ ನಾಲ್ಕನೇ ವಾರ ₹58 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.
ಐದನೇ ವೀಕೆಂಡ್‌ನಲ್ಲೂ ಚಿತ್ರ ಉತ್ತಮ ಗಳಿಕೆ ಕಂಡಿದೆ. ಶುಕ್ರವಾರ (30ನೇ ದಿನ) ₹3 ಕೋಟಿ, ಶನಿವಾರ ₹5 ಕೋಟಿ ಹಾಗೂ ಭಾನುವಾರ ₹5.50 ಕೋಟಿ ಗಳಿಸಿದೆ. ಒಟ್ಟಾರೆ ಐದನೇ ವೀಕೆಂಡ್‌ನಲ್ಲಿ ₹13.50 ಕೋಟಿ ಕಲೆಕ್ಷನ್ ಆಗಿದೆ. 32 ದಿನಗಳಲ್ಲಿ ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ₹1153 ಕೋಟಿ ಆಗಿದ್ದು, ಒಟ್ಟು ಗ್ರಾಸ್ ಕಲೆಕ್ಷನ್ ₹1360 ಕೋಟಿ ಆಗಿದೆ. ವಿದೇಶಗಳಿಂದ ಚಿತ್ರ ₹423 ಕೋಟಿ ಗಳಿಸಿದೆ. ಇದರೊಂದಿಗೆ, ಚಿತ್ರದ ವಿಶ್ವಾದ್ಯಂತ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ₹1783 ಕೋಟಿ ದಾಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.