
ಬಾಲಿವುಡ್ ಗಲ್ಲಿಬಾಯ್ ರಣವೀರ್ ಸಿಂಗ್ ಸೆನ್ಸಾರ್ ಇಲ್ಲದೇ ಇದ್ದಿದ್ದನ್ನು ಇದ್ದ ಹಾಗೇ ಹೇಳುವ ನಟ. ಇವರ ಬಳಿ ಯಾವುದಕ್ಕೂ ಮುಚ್ಚುಮರೆ ಇಲ್ಲ. ಇವರ ಹೇಳಿಕೆಗಳು ಆಗಾಗ ಸುದ್ಧಿಯಾಗುತ್ತಿರುತ್ತದೆ.
ರಣವೀರ್ ಸಿಂಗ್ ತಮ್ಮ ಸೆಕ್ಷುವಲ್ ಲೈಫ್ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಿದ್ದಾರೆ. ‘ನಾನು ಬಹುಬೇಗನೇ ಎಲ್ಲವನ್ನೂ ಶುರುಮಾಡಿದೆ. ನಿಜ. ಸೆಕ್ಸನ್ನೂ ಸೇರಿಸಿ ಎಲ್ಲವನ್ನೂ! ನಾನು ಸ್ಕೂಲಿಗೆ ಹೋಗುವಾಗ ಸ್ನೇಹಿತರ ಅಮ್ಮಂದಿರೆಲ್ಲಾ ನನ್ನನ್ನು ತಮ್ಮ ಮಕ್ಕಳನ್ನು ಹಾಳು ಮಾಡುತ್ತೇನೆಂದು ಬೈಯುತ್ತಿದ್ದರು’ ಎಂದು ಹೇಳಿದ್ದಾರೆ.
ಅಜಯ್ ದೇವಗನ್‌ಗೆ ಜೋಡಿಯಾಗಲು ಬಾಲಿವುಡ್‌ಗೆ ಹಾರಿದ ಕನ್ನಡದ ’ಪೊರ್ಕಿ’ ಹುಡುಗಿ!
ತಮ್ಮ ಬಾಲ್ಯದ ಕಥೆಯನ್ನು ಹೇಳುತ್ತಾ, ಲೈಂಗಿಕ ಜೀವನದ ಬಗ್ಗೆಯೂ ಹೇಳಿದ್ದಾರೆ. ‘ನಾನು 12 ನೇ ವಯಸ್ಸಿನಲ್ಲಿದ್ದಾಗಲೇ ಲೈಂಗಿಕ ಜೀವನ ಶುರು ಮಾಡಿದೆ. ನನಗಿಂತ ದೊಡ್ಡ ಯುವತಿ ಜೊತೆ ಸೆಕ್ಸ್ ನಡೆಸಿದ್ದೇನೆ’ ಎಂದಿದ್ದಾರೆ.
ಲೈಂಗಿಕತೆ ಬಗ್ಗೆ, ಕಾಂಡೋಮ್ ಬಗ್ಗೆ ಸಮಾಜ ತೋರುವ ಮಡಿವಂತಿಕೆ ಬಗ್ಗೆ ರಣವೀರ್ ಮಾತನಾಡಿದ್ದಾರೆ. ‘ನಾನು ಕಾರಿನಲ್ಲಿ ಹೋಗುವಾಗ ಅದು, ಇದು ಮಾರಾಟ ಮಾಡುವುದನ್ನು ನೋಡಿದಾಗ ಯಾಕೆ ಯಾರೂ ಕೂಡಾ ಕಾಂಡೋಮ್ ಮಾರಾಟ ಮಾಡುತ್ತಿಲ್ಲ ಎಂದೆನಿಸಿತು. ಇದರ ಬಗ್ಗೆ ನಮಗಿರುವ ಮನಸ್ಥಿತಿ ಬದಲಾಗಬೇಕು. ಮುಕ್ತವಾಗಿ ಮಾತನಾಡಬೇಕು. ಇದನ್ನೊಂದು ನಿಷೇಧದ ವಸ್ತುವಾಗಿ ನೋಡಬಾರದು’ ಎಂದಿದ್ದಾರೆ.
‘ಸೈರಾ’ ಅಡ್ಡಕ್ಕೆ ರಾಕಿಭಾಯ್ ಎಂಟ್ರಿ ಕೊಟ್ಟಾಯ್ತು; ಶುರುವಾಗಲಿದೆ ಹವಾ!
ಹಾಗಾಗಿಯೇ ನಾನು ಡುರೆಕ್ಸ್ ಕಾಂಡೋಮ್ ನವರನ್ನು ಸಂಪರ್ಕಿಸಿದೆ. ಇದೊಂದು ರಿಸ್ಕ್ ಎಂದು ಗೊತ್ತಿತ್ತು. ಒಂದೋ ಜನ ನನಗೆ ಹೊಡೆಯಬಹುದು ಇಲ್ಲವೇ ಬೆನ್ನು ತಟ್ಟಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಡುರೆಕ್ಸ್ ಜಾಹಿರಾತು ಹಿಟ್ ಆಯಿತು’ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.