ದೀಪಿಕಾ-ರಣವೀರ್ ಮದುವೆಗೆ ಡೇಟ್ ಫಿಕ್ಸ್, ಎಲ್ಲಿ? ಯಾವಾಗ?

By Web DeskFirst Published 12, Sep 2018, 4:22 PM IST
Highlights

ಬಾಲಿವುಡ್ ನ ಬ್ಯೂಟಿಫುಲ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯ ಡೆಟ್ ಫಿಕ್ಸ್ ಆಗಿದೆ. ನವೆಂಬರ್ ೧೨ ರಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ವರದಿಗಳು ಹೇಳಿವೆ. 

ಮುಂಬೈ[ಸೆ.12]  ದೂರದ ಇಟಲಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಖಾಸಗಿ ಸಮಾರಂಭ ನಡೆಯಲಿದ್ದು ಕೆಲವೆ ಕೆಲವು ಜನರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ರೀತಿಯಲ್ಲಿಯೇ ಈ ಸಮಾರಂಭ ಸಹ ನಡೆಯಲಿದೆ.  ಇನ್ನೊಂದು ಮಾಹಿತಿ ಹೇಳುವ ಪ್ರಕಾರ ನವೆಂಬರ್ 10  ರಂದೇ ಮದುವೆ ನಡೆಯಲಿದ್ದು 12 ರಂದು ಆರತಕ್ಷತೆಯ ರೀತಿಯ ಕಾರ್ಯಕ್ರಮ ನಡೆಯಲಿದೆ. ಗಣ್ಯರಿಗೂ ಸಹ ತಮ್ಮ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿಲ್ಲ.

ಮುಂಬೈನ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಬಳಿ ಮದುವೆಯ ಬಗ್ಗೆ ಪ್ರಶ್ನೆ ಮಾಡಿದ್ದ ವರದಿಗಾರನೊಬ್ಬ ದೀಪೀಕಾ ಕೋಪ ನೋಡುವ ಪರಿಸ್ಥಿತಿ ಎದುರಾಗಿತ್ತು.

 

Last Updated 19, Sep 2018, 9:24 AM IST