
ಮುಂಬೈ(ಸೆ.26): ಹಿಂದಿಯ ಚಾಕ್ಲೆಟ್ ಹೀರೋ ರಣಬೀರ್ ಕಪೂರ್ ಅವರನ್ನು ಎಲ್ಲರೂ ಜೋಕರ್ ಮಾಡಲು ಹೊರಟಿದ್ದಾರೆ. ಇದಕ್ಕೆ ಕಾರಣ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರ. ಇದರಲ್ಲಿ ಐಶ್ವರ್ಯಾ ರೈ ಜೊತೆ ರಣಬೀರ್ ರೊಮ್ಯಾನ್ಸ್ ಮಾಡ್ತಿರೋದು ಅನೇಕರಿಗೆ ಸಹಿಸಲಾಗ್ತಿಲ್ಲ. 42 ವರ್ಷದ ಐಶ್ವರ್ಯಾ ರೈಯನ್ನು 33 ವರ್ಷದ ನಟ ಮುದ್ದಿಸುತ್ತಾನೆ ಎನ್ನುವುದೇ ಇದಕ್ಕೆ ಕಾರಣ. ರಣಬೀರ್‌ಗೆ ಯಾಕೆ ಯಾವಾಗ್ಲೂ ಹಿರಿಯರ ನಟಿಯರೇ ರೊಮ್ಯಾನ್ಸ್‌ಗೆ ಸಿಗ್ತಾರೆ ಎಂಬುದೇ ಗಾಸಿಪ್ ಗಲ್ಲಿಯ ಹಾಟ್ ಪ್ರಶ್ನೆ.
ಇದು ಸತ್ಯ ಕೂಡ. ‘ಯೇ ದಿಲ್ ಹೈ ಮುಷ್ಕಿಲ್’ ಸೇರಿದರೆ ರಣಬೀರ್‌ಗೆ ಇಂಥ ಅವಕಾಶ ಸಿಗ್ತಿರೋದು 6ನೇ ಸಲ! ಮೊದಲು ‘ಬಚ್ನಾ ಯೇ ಹಸೀನೋ’ದಲ್ಲಿ ರಣಬೀರ್‌ಗೆ ಜೊತೆಯಾಗಿದ್ದು ಬಿಬಾಶಾ ಬಸು. ಇಲ್ಲಿ ಐದಾರು ದೃಶ್ಯಗಳಲ್ಲಿ ಬಿಪಾಶಾ, ರಣಬೀರ್ ಜೊತೆ ಬೋಲ್ಡ್ ಆಗಿ ನಟಿಸಿದ್ದು ಗೊತ್ತೇ ಇದೆ. ಅಚ್ಚರಿಯಾದರೂ ನಂಬ್ಲೇಬೇಕು, ಬಿಪಾಶಾ ಈ ನಟನಿಗಿಂತ 4 ವರ್ಷ ದೊಡ್ಡವರು!
ಇನ್ನು ‘ವೇಕ್ ಅಪ್ ಸಿದ್’ ಚಿತ್ರಕ್ಕೆ ಬನ್ನಿ. ಇಲ್ಲಿ ರಣಬೀರ್ ಜೊತೆ ಆಯೇಷಾ ಪಾತ್ರದಲ್ಲಿ ನಟಿಸಿರೋದು ಕೊಂಕಣಾ ಸೇನ್. ಚಾಕ್ಲೆಟ್ ಹೀರೋಗಿಂತ 3 ವರ್ಷ ಹಿರಿಯ ಕಲಾವಿದೆ ಕೊಂಕಣಾ! ಬಳಿಕ ರಣಬೀರ್ ಪಯಣ ‘ರಾಜ್‌ನೀತಿ’ಗೆ ಬಂದರೆ ಅಲ್ಲಿ ಸಾರಾ ಥಾಮ್ಸನ್ ಜೊತೆಯಾಗ್ತಾರೆ. ಅಮೆರಿಕದ ಈ ಚೆಲುವೆ, ನಮ್ಮ ಬಾಲಿವುಡ್‌ನ ಮುದ್ದಿನ ಹುಡುಗನಿಗಿಂತ 3 ವರ್ಷ ದೊಡ್ಡವರು! ಇನ್ನು ರಾಕ್‌ಸ್ಟಾರ್‌ನಲ್ಲಿ ನಟಿಸಿರುವ ನರ್ಗೀಸ್ ಖ್ರೀ ಕೂಡ ರಣ್ಬೀಗಿಂತ 3 ವರ್ಷ ಹಿರಿಯ ಕಲಾವಿದೆಯೇ! ಕೊನೆಯ ಉದಾಹರಣೆ ಕೊಡೋದಾದ್ರೆ, ‘ಯೇ ಜವಾನಿ ಹೈ ದೀವಾನಿ’ ಚಿತ್ರ ಕಾಣಿಸುತ್ತದೆ. ಇಲ್ಲಿ ರಣ್ಬೀ ಜೊತೆ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದು ಮಾಧುರಿ ದೀಕ್ಷಿತ್! ಒಂದೂ ಅಲ್ಲ, ಎರಡೂ ಅಲ್ಲ, ಬರೋಬ್ಬರಿ 16 ವರ್ಷದ ಹಿರಿಯ ನಟಿ ಮಾಧುರಿ! ರಣಬೀರ್ ಕಪೂರ್ ಹುಟ್ಟಿದ ಮರುವರ್ಷ ಮಾಧುರಿಯ ಅಬೋಧ್ ಸಿನಿಮಾ ತೆರೆಕಂಡಿತ್ತು!
ಇಷ್ಟೊಂದು ಲಕ್ ಬಾಲಿವುಡ್‌ನಲ್ಲಿ ಬೇರಾರಿಗೂ ಸಿಗ್ಲಿಲ್ಲ ಅನ್ನೋದೇ ಕೆಲವರ ಹೊಟ್ಟೆಕಿಚ್ಚಿಗೆ ಕಾರಣವಂತೆ! ಅಂದಹಾಗೆ, ಈ ಒಗಟಿಗೆ ಬರ್ಫೀ ಹುಡುಗನ ಬಳಿಯೂ ಉತ್ತರವಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.