
ಕರಾಚಿ(ಫೆ.3): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಸೆಕೆಂಡ್ ಇನಿಂಗ್ಸ್ ಎಂಬಂತೆ ಸಿನಿಮಾ ಕ್ಷೇತ್ರದತ್ತ ದೃಷ್ಠಿ ಹಾಯಿಸಿದ್ದಾರೆ.
ಅದರಂತೆ ತಾವೇ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಅವರೇ ನಾಯಕರಾಗಬೇಕು. ಇನ್ನು ನಾಯಕಿಯಾಗಿ ಬಾಲಿವುಡ್ ನಟಿ ಕತ್ರೀನಾ ಕೈಫ್ ಅಥವಾ ಪಾಕಿಸ್ತಾನ ನಟಿ ಮಹಿರಾ ಖಾನ್ ಸೂಕ್ತ ಎಂದು ರಮೀಜ್ ಜಿಯೊ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಟಿ ಮಹಿರಾ ಖಾನ್ ಮತ್ತು ಕತ್ರೀನಾ ಕೈಫ್ ಪ್ರತಿಭಾನ್ವಿತ ನಟಿಯರಾಗಿದ್ದಾರೆ ಎಂದಿರುವ ಅವರು, ಕ್ರಿಕೆಟ್ ಆಟದಲ್ಲಿ ಭಯೋತ್ಪಾದಕರ ಕೈವಾಡ ಎನ್ನುವ ವಿಷಯವನ್ನಾಧಾರಿತ ಸಿನಿಮಾ ಇದಾಗಿದೆ ಎಂದು ರಮೀಜ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.