ರಾಮಾಯಣ 9 ದಿನದಲ್ಲಿ 1,100 ಕೋಟಿ ಗಳಿಕೆ ಮೂಲಕ ದಾಖಲೆ, ಆದರೆ ಕೈಗೆ ಬಂದ ದುಡ್ಡೆಷ್ಟು?

Published : Nov 14, 2026, 01:48 PM IST
Ramayana

ಸಾರಾಂಶ

ರಾಮಾಯಣ ಸಿನಿಮಾ 9 ದಿನದಲ್ಲಿ ಬರೋಬ್ಬರಿ 1,100 ಕೋಟಿ ರೂಪಾಯಿ ಗಳಿಕೆ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ ರಾಮಾಯಣ ಸಿನಿಮಾದ ಗಳಿಕೆಯಲ್ಲಿ ಕೈಬಂದ ದುಡ್ಡೆಷ್ಟು? ಜಾಗತಿಕವಾಗಿ ಒಟ್ಟು ಗಳಿಕೆ ಎಷ್ಟು?

ಮುಂಬೈ (ನ.14) ರಾಮಾಯಣ ಸಿನಿಮಾ ಬಿಡುಗಡೆಯಾದ 9 ದಿನಕ್ಕೆ ಭಾರತ ಸೇರಿದಂತೆ ವಿಶ್ವಾದ್ಯಂತ ಬರೋಬ್ಬರಿ 1,100 ಕೋಟಿ ರೂಪಾಯಿ ಗಳಿಗೆ ಕಂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆ ಬರೆದಿದೆ. ವಿಶೇಷ ಅಂದರೆ ಕೆಜಿಎಫ್ 2 ಬಳಿಕ ಯಶ್ ಸಿನಿಮಾ ಮತ್ತೆ 1000 ಕೋಟಿ ರೂಪಾಯಿ ಗಡಿ ದಾಟಿದೆ. ಹೊಸ ದಾಖಲೆ ಬರೆಯುತ್ತಿರುವ ರಾಮಾಯಣ ಸಿನಿಮಾ ಒಟ್ಟು 1100 ಕೋಟಿ ರೂಪಾಯಿ ಗಳಿಸಿದರೂ, ಭಾರತದಲ್ಲಿ ಕೈಗೆ ಬಂದ ದುಡ್ಡು 600 ಕೋಟಿ ರೂಪಾಯಿ.

ರಾಮಾಯಣ ಸಿನಿಮಾ ಕಲೆಕ್ಷನ್

ರಾಮಾಯಣ ಸಿನಿಮಾ ಜಾಗತಿಕವಾಗಿ ಗ್ರಾಸ್ ಕಲೆಕ್ಷನ್ 1,100 ಕೋಟಿ ರೂಪಾಯಿ. ಆದರೆ ಭಾರತದಲ್ಲಿ ನೆಟ್ ಕಲೆಕ್ಷನ್ 600 ಕೋಟಿ ರೂಪಾಯಿ. ಸಿನಿಮಾ ಬಿಡುಗಡೆಯಾದ 9ನೇ ದಿನಕ್ಕೆ 47.85 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ಪೈಕಿ ಹಿಂದಿ ವರ್ಶನ್ ರಾಮಾಯಣ ಗರಿಷ್ಠ ಕಲಕ್ಷೆನ್ ಮಾಡಿದೆ. ಹಿಂದಿ ವರ್ಶನ್ ರಾಮಾಯಣ 36.25 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಮಲೆಯಾಳಂ ವರ್ಶನ್ ಸಿನಿಮಾ 3.75 ಕೋಟಿ ರೂಪಾಯಿ ಗಳಿಸಿದರೆ, ಕನ್ನಡ ವರ್ಶನ್ ಸಿನಿಮಾ 3 ಕೋಟಿ ರೂಪಾಯಿ ಗಳಿಸಿದೆ. ಕನ್ನಡದಲ್ಲಿ 850 ಶೋಗಳಿವೆ. ತಮಿಳಿನಲ್ಲಿ 2.75 ಕೋಟಿ ರೂಪಾಯಿ, ತೆಲುಗಿನಲ್ಲಿ 2.60 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ವಿದೇಶದಲ್ಲಿ 9ನೇ ದಿನ 25 ಕೋಟಿ ರೂಪಾಯಿ ಕಲೆಕ್ಷನ್

ರಾಮಾಯಣ ಸಿನಿಮಾ 9ನೇ ದಿನ ವಿದೇಶಗಳಲ್ಲಿ 25 ಕೋಟಿ ರೂಪಾಯಿ ಗಳಿಸಿದೆ. ಇದುವರೆಗೆ ವಿದೇಶಗಳಲ್ಲಿ ರಾಮಯಣ ಸಿನಿಮಾ ಒಟ್ಟ ಗಳಿಕೆ 378.50 ಕೋಟಿ ರೂಪಾಯಿ. ವಿದೇಶದಲ್ಲೂ ರಾಮಾಯಣ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಛಾವಾ, ಆನಿಮಲ್ ಸಿನಿಮಾ ಹಿಂದಿಕ್ಕಿದ ರಾಮಾಯಣ

ಹಿಂದಿ ಸಿನಿಮಾಗಳಲ್ಲಿ ಕಳೆದ ವರ್ಷ ಅದ್ಬುತ ನೆಟ್ ಗಳಿಕೆ ಮಾಡಿದೆ ಕೆಲ ಸಿನಿಮಾಗಳ ದಾಖಲೆಯನ್ನು ರಾಮಾಯಣ ಮುರಿದಿದೆ. ಛಾವಾ ಸಿನಿಮಾ 601.57 ಕೋಟಿ ರೂಪಾಯಿ ನೆಟ್ ಗಳಿಕೆ ಕಂಡಿತ್ತು. ರಣಬೀರ್ ಕಪೂರ್ ಆ್ಯನಿಮಲ್ ಸಿನಿಮಾ 556.36 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು. ಶಾರುಖ್ ಖಾನ್ ಪಠಾಣ್ ಸಿನಿಮಾ 544.28 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

1000 ಕೋಟಿ ರೂ ದಾಟಿದ ರಣಬೀರ್ ಕಪೂರ್ ಮೊದಲ ಸಿನಿಮಾ

ರಣಬೀರ್ ಕಪೂರ್ ಸಿನಿಮಾ ಇತಿಹಾಸದಲ್ಲಿ 1000 ಕೋಟಿ ರೂಪಾಯಿ ದಾಟಿದ ಮೊದಲ ಸಿನಿಮಾ ಇದು. ಇದಕ್ಕೂ ಮೊದಲು ಸಂದೀಪ್ ವಂಗಾ ರೆಡ್ಡಿ ನಿರ್ಮಾಣದ ಆ್ಯನಿಮಲ್ ಸಿನಿಮಾ ಗ್ರಾಸ್ 915 ಕೋಟಿ ರೂಪಾಯಿ ಮಾಡಿತ್ತು. ಇದೀಗ ಈ ದಾಖಲೆಯನ್ನು ರಾಮಾಯಣ ಸಿನಿಮಾ ಮುರಿದಿದೆ.

ರಾಮಾಯಣ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗುತ್ತಿದೆ. ಮೊದಲ ಭಾಗದಲ್ಲಿ ಸೀತಾ ಅಪಹರಣವರೆಗೆ ನೀಡಲಾಗಿದೆ. ಇನ್ನುಳಿದ ರಾಮಾಯಣ ಮಹಾಕಾವ್ಯದ ಭಾಗವನ್ನು ಸಿನಿಮಾದ 2ನೇ ಭಾಗದಲ್ಲಿ ನೀಡಲಾಗುತ್ತದೆ. ಮುಂದಿನ ವರ್ಷ 2ನೇ ಭಾಗ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಯ ಬಾರಿಗೆ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ಅಮೃತಧಾರೆ: ಜೈದೇವ್ ಕಥೆ ಏನಾಗಲಿದೆ?
'ಟಾಕ್ಸಿಕ್' ಚಿತ್ರದಿಂದ ಲಾಭವೇ ಆಗಿದೆ, ನಷ್ಟ ಅಲ್ಲ.. ಪೇಯ್ಡ್ ಪ್ರಮೋಷನ್ ಗುಟ್ಟು ಬಿಟ್ಟುಕೊಡದ ದಿಲ್ ರಾಜು!