Bigg Bossನಂಥ ಷೋ ಸಹವಾಸವೇ ಬೇಡ, 20 ಕೋಟಿ ಕೊಟ್ರೂ ಹೋಗಲ್ಲ ಎಂದ ಈ ಖ್ಯಾತ ನಟ!

Published : Jul 08, 2025, 01:59 PM ISTUpdated : Jul 08, 2025, 02:24 PM IST
Actor Ram Kapoor

ಸಾರಾಂಶ

ಬಿಗ್​ಬಾಸ್​​ ಹವಾ ಜೋರಾಗಿದೆ. ಇತ್ತ ಕನ್ನಡದಲ್ಲಿ, ಅತ್ತ ಹಿಂದಿಯಲ್ಲಿ ಇನ್ನೇನು ಹೊಸ ಸೀಸನ್​ ಶುರುವಾಗಲಿದೆ. ಇದರ ನಡುವೆಯೇ ಇಂಥ ಷೋಗೆ 20 ಕೋಟಿ ರೂ. ಕೊಟ್ಟರೂ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ ನಟ. ಅವರು ಯಾರು? ಹೀಗೆ ಹೇಳಿದ್ದೇಕೆ? 

ಸದ್ಯ ಬಿಗ್​ಬಾಸ್​​ ಹವಾ ಜೋರಾಗಿದೆ. ಕನ್ನಡದಲ್ಲಿ ಸೀಸನ್​ 12 ಬರುತ್ತಿದ್ದರೆ, ಅತ್ತ ಹಿಂದಿನಲ್ಲಿ ಸೀಸನ್​ 19 ಶುರುವಾಗಲಿದೆ. ಇದಾಗಲೇ ಯಾವ್ಯಾವ ಸೆಲೆಬ್ರಿಟಿಗಳು ಷೋಗೆ ಹೋಗಬಹುದು ಎನ್ನುವ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಹಲವರು ವಿಶ್ಲೇಷಿಸುತ್ತಿದ್ದಾರೆ. ಇವರು ಇರಬಹುದಾ, ಅವರು ಇರಬಹುದಾ ಎಂಬೆಲ್ಲಾ ಲೆಕ್ಕಾಚಾರ ಪ್ರತಿಭಾಷೆಯ ಬಿಗ್​ಬಾಸ್​​ ಶುರುವಾದಾಗಲೆಲ್ಲಾ ನಡೆಯುತ್ತಲೇ ಇರುತ್ತದೆ. ಆದರೆ ಬಿಗ್​ಬಾಸ್​ ರಿಯಾಲಿಟಿ ಷೋ ಇಷ್ಟಪಡುವವರು ಎಷ್ಟು ಮಂದಿ ಇದ್ದಾರೋ, ಇಷ್ಟಪಡದ ದೊಡ್ಡ ವರ್ಗವೇ ಇದೆ. ಅದಕ್ಕೆ ಅವರದ್ದೇ ಆದ ಕಾರಣಗಳು ಇವೆ. ಇದಾಗಲೇ ಕೆಲವು ಭಾಷೆಗಳ ಈ ಷೋನಲ್ಲಿ ಅಶ್ಲೀಲತೆಯ ಪರಮಾವಧಿಯನ್ನೂ ನೋಡಿಯಾಗಿದೆ. ಹೀಗೆ ಮಾಡಿದರೇನೇ ಟಿಆರ್​ಪಿ ಹೆಚ್ಚು ಬರುತ್ತದೆ ಎನ್ನುವ ಕಾರಣಕ್ಕೆ, ಅದನ್ನು ಸ್ಪರ್ಧಿಗಳಿಂದ ಉದ್ದೇಶಪೂರ್ವಕವಾಗಿಯೇ ಮಾಡಿಸಲಾಗುತ್ತದೆ ಎಂಬ ಆರೋಪಗಳೂ ಇದೆ. ಇದೇ ವೇಳೆ ಹೊರಗಡೆ ಕಾಂಟ್ರವರ್ಸಿಯಲ್ಲಿ ಸಿಲುಕಿದವರಿಗೆ ಆದ್ಯತೆ ಎನ್ನುವುದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

ಇದೇ ಕಾರಣಕ್ಕೆ ಒಳ್ಳೆಯ ಹೆಸರು ಮಾಡಿದ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಈ ಷೋಗೆ ಹೋಗಲು ನಿರಾಕರಿಸುವುದು ಇದೆ. ಅಂಥದ್ದೇ ಒಂದು ನಿರಾಕರಣೆ ಈಗ ಖ್ಯಾತ ನಟನೊಬ್ಬನಿಂದ ಬಂದಿದೆ. 20 ಕೋಟಿ ರೂಪಾಯಿ ಕೊಟ್ಟರೂ ಬಿಗ್​ಬಾಸ್​ ಷೋಗೆ ನಾನು ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಈ ನಟ. ಅಂದಹಾಗೆ ಇವರು, ನಟ ರಾಮ್ ಕಪೂರ್. ಇವರು ಹೇಳುತ್ತಿರುವುದು ಹಿಂದಿಯ ಬಿಗ್​ಬಾಸ್​ ಷೋ ಕುರಿತಾಗಿ. ಈ ಷೋಗಾಗಿ ಸ್ಪರ್ಧಿಗಳನ್ನು ನಿರ್ಮಾಪಕರು ಸಂಪರ್ಕಿಸುತ್ತಿದ್ದಾರೆ. ಆದಾಗ್ಯೂ, ಇನ್ನೂ ಯಾವುದೇ ಅಂತಿಮ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಏತನ್ಮಧ್ಯೆ, ರಾಮ್ ಕಪೂರ್ ಈ ಬಗ್ಗೆ ರಿಯಾಕ್ಟ್​ ಮಾಡಿದ್ದಾರೆ. 20 ಕೋಟಿ ರುಪಾಯಿ ಆಫರ್ ಬಂದರೂ ನಾನು ಈ ಕಾರ್ಯಕ್ರಮದ ಭಾಗವಾಗುವುದಿಲ್ಲ ಎಂದಿದ್ದಾರೆ.

 

ಬಹಳ ದಿನಗಳಿಂದ, ರಾಮ್ ಕಪೂರ್ ಅವರ ಹೆಸರೂ ಕಾರ್ಯಕ್ರಮದ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅವರ ಜೊತೆಗೆ, ಅವರ ಪತ್ನಿ ಗೌತಮಿ ಕಪೂರ್ ಅವರ ಹೆಸರೂ ಸಹ ಕೇಳಿಬರುತ್ತಿದೆ. ಆದರೆ ವರದಿಗಳ ಪ್ರಕಾರ, ಇದಾಗಲೇ ಬಿಗ್​ಬಾಸ್​ನ ಆಫರ್​ ಅನ್ನು ಇವರು ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ನಟ, ನನಗೆ 20 ಕೋಟಿ ಆಫರ್ ನೀಡಿದರೂ ನಾನು ಎಂದಿಗೂ ಬಿಗ್ ಬಾಸ್‌ಗೆ ಬರುವುದಿಲ್ಲ. ಅಂತಹ ಕಾರ್ಯಕ್ರಮಗಳು ನನಗಲ್ಲ. ಇದು ಯಶಸ್ವಿ ಕಾರ್ಯಕ್ರಮ ಎಂದು ನನಗೆ ತಿಳಿದಿದೆ, ಆದರೆ ನಾನು ನನ್ನನ್ನು ನಟ ಎಂದು ಪರಿಗಣಿಸುತ್ತೇನೆ ಮತ್ತು ಅಂತಹ ಕಾರ್ಯಕ್ರಮಗಳಿಗಾಗಿ ನಾನು ರಚಿಸಲ್ಪಟ್ಟಿಲ್ಲ ಎಂದು ಬಿಗ್​ಬಾಸ್​ ಯಾವ ರೀತಿಯ ಕಾರ್ಯಕ್ರಮ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಬಿಗ್ ಬಾಸ್ ಅಥವಾ ಯಾವುದೇ ರೀತಿಯ ರಿಯಾಲಿಟಿ ಶೋನಲ್ಲಿ, ನೀವು ನಿಮ್ಮ ಪ್ರತಿಭೆಯನ್ನು ತೋರಿಸುವುದಿಲ್ಲ ಆದರೆ ಪರಸ್ಪರರ ಜೀವನದಲ್ಲಿ ಇಣುಕುತ್ತೀರಿ. ನಾನು ಇದನ್ನು ಮಾಡಲು ಸಾಧ್ಯವಿಲ್ಲ. ಇದು ವೃತ್ತಿಪರವಾಗಿ ನನಗೆ ಏನನ್ನೂ ನೀಡುವುದಿಲ್ಲ ಎಂದಿದ್ದಾರೆ. ಈ ಹಿಂದೆ ಹಿಂದಿಯ ಬಿಗ್ ಬಾಸ್ 19 ಜುಲೈ ಅಂತ್ಯದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ಹೇಳಲಾಗಿತ್ತು, ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಕಾರ್ಯಕ್ರಮವು ಈಗ ಆಗಸ್ಟ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಆದಾಗ್ಯೂ, ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಶೀಘ್ರದಲ್ಲೇ ಬಿಗ್ ಬಾಸ್ 19 ರ ಪ್ರೋಮೋವನ್ನು ಚಿತ್ರೀಕರಿಸಲಿದ್ದಾರೆ. ಈ ಕಾರ್ಯಕ್ರಮವು ಐದೂವರೆ ತಿಂಗಳುಗಳ ಕಾಲ ನಡೆಯಲಿದೆ ಎಂದು ಮೊದಲೇ ಹೇಳಲಾಗಿತ್ತು, ಆದರೆ ಈಗ ಮೂರುವರೆ ತಿಂಗಳು ಎನ್ನಲಾಗುತ್ತಿದೆ. ಈ ಬಾರಿ ಸೀಕ್ರೆಟ್ ರೂಮ್ ಟ್ವಿಸ್ಟ್ ಕೂಡ ಅದರಲ್ಲಿ ಮತ್ತೆ ಬರುತ್ತಿದೆ.

ಬಿಗ್ ಬಾಸ್ 19 ಗಾಗಿ ಇಲ್ಲಿಯವರೆಗೆ ಹೊರಬಂದಿರುವ ಭಾಗವಹಿಸುವವರ ಹೆಸರುಗಳು ಧೀರಜ್ ಧೂಪರ್, ಮಿಕ್ಕಿ ಮೇಕ್ ಓವರ್, ರಾಜ್ ಕುಂದ್ರಾ, ಮುನ್ಮುನ್ ದತ್ತಾ, ಗೌರವ್ ತನೇಜಾ ಅಕಾ ಫ್ಲೈಯಿಂಗ್ ಬೀಸ್ಟ್, ಕನಿಕಾ ಮನ್, ಅಪೂರ್ವ ಮುಖಿಜಾ ಅಕಾ ರೆಬೆಲ್ ಕಿಡ್, ಡೈಸಿ ಶಾ, ಹೈದರಾಬಾದ್ ಕಿರ್ಕ್ ಖಲಾ ಅಕಾ ಪ್ರಿಯಾ ರೆಡ್ಡಿ, ಅಲಿಶಾ ಪನ್ವರ್, ಫೈಸಲ್ ಶೇಖ್ ಅಕಾ ಮಿಸ್ಟರ್ ಫೈಸು, ಖುಷಿ ದುಬೆ, ಅರಿಷ್ಫಾ ಖಾನ್, ಶರದ್ ಮಲ್ಹೋತ್ರಾ, ತನುಶ್ರೀ ದತ್ತಾ, ಪರಾಸ್ ಕಲ್ನಾವತ್, ಮಮತಾ ಕುಲಕರ್ಣಿ, ಮೂನ್ ಬ್ಯಾನರ್ಜಿ, ಶಶಾಂಕ್ ವ್ಯಾಸ್. ಆದಾಗ್ಯೂ, ಇವರಲ್ಲಿ ಯಾರ ಹೆಸರೂ ಇನ್ನೂ ಅಂತಿಮವಾಗಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep