
ಬೆಂಗಳೂರು(ಅ.17): ಡಾ. ರಾಜ್ ಕುಮಾರ್ ಮಕ್ಕಳು. ಆಸ್ತಿಯನ್ನ ಹಂಚಿಕೊಂಡಿದ್ದಾರೆ. ಸಮ ಪಾಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ರಾಜ್ ಫ್ಯಾಮಿಲಿ ಡಿವೈಡ್ ಆಗಿದೆ. ಇಂತಹ ಸುದ್ದಿಗಳೂ ಹರಿದಾಡುತ್ತಿವೆ.
ಈ ಒಂದು ಬೆಳವಣಿಗೆಗೆ ಕಾರಣವೂ ಇದೆ. ಗಾಂಧಿನಗರದ ವಜ್ರೇಶ್ವರಿ ಆಫೀಸ್ ರಿನೋವೇಷನ್ ನಡೆಯುತ್ತಿದೆ. ಅದಕ್ಕೆ ಈ ಮಾತು ಕೇಳಿಬರುತ್ತಾ ಇದೆ. ಇಂದು ತಾಳವಾಡಿಯ ಸಬ್ ರಿಜಿಸ್ಟ್ರಾರ್ ಆಫೀಸ್` ಗೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ತೆರೆಳಿದ್ದರು. ಇದರಿಂದ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಆದರೆ, ರಾಘವೇಂದ್ರ ರಾಜ್ ಕುಮಾರ್ ಹೇಳೊದೇ ಬೇರೆ. ತಾಳವಾಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದು ನಿಜ, ಆಸ್ತಿ ಪಾಲು ಮಾಡಿಕೊಳ್ಳಲು ಅಲ್ಲ. ನಮ್ಮ ಮಧ್ಯೆ ಯಾವುದೇ ತೊಂದರೆ ಇಲ್ಲ. ಒಗ್ಗಟ್ಟಿನಿಂದಲೇ ಇದ್ದೇವೆ. ಅಷ್ಟೇ ಚೆನ್ನಾಗಿಯೂ ಇದ್ದೇವೆ ಆಂತಾ ಸುವರ್ಣ ನ್ಯೂಸ್`ಗೆ ಪೋನ್ ಮೂಲಕ ಹೇಳಿಕೆ ಕೊಟ್ಟಿದ್ದಾರೆ ರಾಘವೇಂದ್ರ ರಾಜ್ ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.