
ಚೆನ್ನೈ(ಡಿ.30): ತಮಿಳುಚಿತ್ರರಂಗದ ಆರಾಧ್ಯದೈವ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತೊಮ್ಮೆ ಕನ್ನಡತನ ಪ್ರದರ್ಶಿಸಿದ್ದಾರೆ. ಮೊನ್ನೆಯಷ್ಟೆ ರಾಜ್ ಕುಮಾರ್ ಭೇಟಿಯ ಸಂದರ್ಭವನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದರು. ಇಂದು ಮತ್ತೆ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ ರಜಿನಿ ಸಿನಿಮಾ ಅವಕಾಶಕ್ಕಾಗಿ ತಮ್ಮ ಗುರು ಕೆ.ಬಾಲಚಂದರ್ ಮೊದಲ ಭೇಟಿಯನ್ನು ಹಂಚಿಕೊಂಡರು.
ಅವರು ಹೇಳಿ ಸಾರಾಂಶ ಹೀಗಿದೆ
'ನಾನು ಕಲಿತಿದ್ದು ಕನ್ನಡದಲ್ಲಿ, ಬೆಳೆದಿದ್ದು ಕರ್ನಾಟಕದಲ್ಲಿ. ನಾನು, ನನ್ನ ಕುಟುಂಬದವರು ಕನ್ನಡಿಗರು. ನನ್ನ ಕುಟುಂಬ, ಸಹೋದರರು ಕನ್ನಡದವರಾಗಿ ಬಾಳುತ್ತಿದ್ದಾರೆ. ನನಗೆ ಆರಂಭದಲ್ಲಿ ಸ್ಪಷ್ಟವಾಗಿ ತಮಿಳು ಭಾಷೆ ಬರುತ್ತಿರಲಿಲ್ಲ.
ಆದರೆ ತಮಿಳು ಚಿತ್ರರಂಗ ತಮಿಳು ಕಲಿಯುವಂತೆ ಮಾಡಿತು. ಮೊದಲ ಬಾರಿಗೆ ಗುರುಗಳಾದ ಕೆ.ಬಾಲಚಂದರ್ ಅವರನ್ನು ಭೇಟಿ ಮಾಡಿ, ನನಗೆ ತಮಿಳು ಬರುವುದಿಲ್ಲ. ಇಂಗ್ಲಿಷ್ ಕೂಡ ಬರುವುದಿಲ್ಲ. ನಾನು ಕನ್ನಡದವನು, ಪಾಲಿಕೆ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ್ದು. ನನ್ನ ಕುಟುಂಬದವರು ಕನ್ನಡಿಗರು. ಕನ್ನಡದವರಾಗಿ ಬಾಳುತ್ತಿದ್ದಾರೆ'ಎಂದೆ. ಪರವಾಗಿಲ್ಲ ಕನ್ನಡದಲ್ಲಿಯೇ ಅಭಿನಯ ಪ್ರದರ್ಶಿಸು'ಎಂದು ಹೇಳಿದರು. ಅಭಿನಯ ಮಾಡಿದ ನಂತರ ಮೆಚ್ಚಿಕೊಂಡ ಅವರು ತಮಿಳು ಕಲಿಯುವಂತೆ ಸಲಹೆ ನೀಡಿದರು. ಅವರ ಮಾರ್ಗದರ್ಶನದಲ್ಲಿ ತಮಿಳು ಕಲಿತು' ತಮಿಳಿನವನಾಗಿ' ನಿಮ್ಮೆಲ್ಲರ ದಯೆಯಿಂದ ಸೂಪರ್'ಸ್ಟಾರ್ ಕೂಡ ಆದೆ' ಎಂದು ಅಭಿಮಾನಿಗಳ ಜತೆ ಸಂವಾದದ ವೇಳೆ ತಿಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.