ಚಮಕ್: ರಶ್ಮಿಕಾ ಅಭಿನಯಕ್ಕೆ ರಕ್ಷಿತ್ ಹೇಳಿದ್ದೇನು?

Published : Dec 29, 2017, 06:57 PM ISTUpdated : Apr 11, 2018, 12:47 PM IST
ಚಮಕ್: ರಶ್ಮಿಕಾ ಅಭಿನಯಕ್ಕೆ ರಕ್ಷಿತ್ ಹೇಳಿದ್ದೇನು?

ಸಾರಾಂಶ

- ಗಣೇಶ್, ರಶ್ಮಿಕಾ ಅಭಿನಯದ ಚಮಕ್ ಬಿಡುಗಡೆ - ಚಿತ್ರ ಅದ್ಭುತವೆಂದ ರಕ್ಷಿತ್ ಶೆಟ್ಟಿ - ಗಣೇಶ್ ನಟನೆ, ಸಿಂಪಲ್ ಸುನಿ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ನೀಡಿದ ಕಿರಿಕ್ ನಟ.

ಬೆಂಗಳೂರು: ಬಹು ನಿರೀಕ್ಷಿತ 'ಚಮಕ್' ಚಿತ್ರ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆ ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಕಿರಿಕ್ ಪಾರ್ಟಿ' ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಶ್ಮಿಕಾ, ಅದೇ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಚಿತ್ರದ ಬಗ್ಗೆ ರಕ್ಷಿತ್ ಅಭಿಪ್ರಾಯವೇನು ಎಂಬ ಕುತೂಹಲ ಎಲ್ಲರಿಗೂ ಸಹಜ.

'ರಶ್ಮಿಕಾ ಬೆರಗುಗೊಳಿಸುವಂತೆ ಕಾಣಿಸುತ್ತಿದ್ದು, ಅಭಿನಯವೂ ಚೆನ್ನಾಗಿದೆ,' ಎಂದು ರಕ್ಷಿತ್, ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ.

 

ಚಿತ್ರದ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, 'ಅದ್ಭುತ,' ಎಂದ ರಕ್ಷಿತ್, ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿಂಪಲ್ ಸುನಿಯವರ ಬೆಸ್ಟ್ ಫಿಲ್ಮ್ ಎಂದೂ ಹೇಳಿರುವ ಕಿರಿಕ್ ನಟ, ಅತ್ಯುತ್ತಮ ಕೌಟುಂಬಿಕ ಮನೋರಂಜನೆ ನೀಡುವ ಈ ಚಿತ್ರವನ್ನು ತಪ್ಪದೇ ನೋಡಿ ಎಂದಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

60ರ ಹರೆಯದಲ್ಲಿ 3ನೇ ಹಿಂದೂ ಸ್ತ್ರೀ ಎಂಟ್ರಿ ಕೊಟ್ಟಾಗ ಆಮೀರ್​ ಖಾನ್​ಗೆ ಆಗಿದ್ದೇನು? ನಟನ ಬಾಯಲ್ಲೇ ಕೇಳಿ
ಸದ್ಯ ಸಿನಿಮಾಗಳನ್ನು ಮಾಡದೆ, ರಶ್ಮಿಕಾ ಮಂದಣ್ಣರನ್ನೇ ಬೀಟ್‌ ಮಾಡಿದ ಸೌಥ್‌ ನಟಿ ಯಾರು?