ರಜಿನಿ ನಂಬಿರೋ ಬಾಬಾ ಯಾರು? ರಾಜಕೀಯದ ಬಗ್ಗೆ ಗೆಳೆಯ ಬರಬೇಕೆ? ಪ್ರಾಣ ಸ್ನೇಹಿತ ರಾಜ್ ಬಹುದ್ದೂರ್ ಬಿಚ್ಚಿಟ್ಟ ಸೀಕ್ರೇಟ್

By Suvarna Web DeskFirst Published May 19, 2017, 6:42 PM IST
Highlights

ತಾವು ನಂಬಿರೋ ಬಾಬಾ ಆದೇಶಿಸಿದರೆ ಇಂದೇ ತಮಿಳು'ನಾಡಿನ ಜನರ ಜೊತೆ ಬೆರೆಯುವೆ ಎಂಬುದಾಗಿ ಈಗಾಗಲೇ ಹೇಳಿದ್ದು, ಅಷ್ಟಕ್ಕೂ ರಜಿನಿ ನಂಬಿರುವ ಬಾಬಾ ಯಾರೆಂಬುದಕ್ಕೆ ಸಾವಿರಾರು ವದಂತಿಗಳು ಮಾಧ್ಯಮಗಳಲ್ಲಿ, ಅಭಿಮಾನಿಗಳ ಬಾಯಲಿ ಆಗಾಗ ಕೇಳಿಬರುತ್ತಿವೆ. ಈ ಬಗ್ಗೆ ಹಾಗೂ ರಜಿನಿ ರಾಜಕೀಯ ಪ್ರವೇಶದ ಬಗ್ಗೆ ಬೆಂಗಳೂರಿನಲ್ಲಿರುವ ಅವರ ಪ್ರಾಣ ಸ್ನೇಹಿತ ರಾಜ್ ಬಹುದ್ದೂರ್ ಸತ್ಯ ಬಿಚ್ಚಿಟ್ಟಿದ್ದಾರೆ.

ರಜಿನಿ ರಾಜಕೀಯ ಪ್ರವೇಶಕ್ಕೆ ಶೀಘ್ರದಲ್ಲೇ ವೇದಿಕೆ ರೆಡಿಯಾಗಲಿದೆ. ಜಯಲಲಿತಾ ಸಾವಿನ ನಂತರ ತಮಿಳುನಾಡಿನ ರಾಜಕೀಯದಲ್ಲಿ ಉಂಟಾಗಿರುವ ರಾಜಕೀಯ ಅಸ್ತಿರತೆಗೆ ಸೂಪರ್ ಸ್ಟಾರ್ ಎಂಟ್ರಿ ಟಾನಿಕ್ ಆಗುವುದು ಖಂಡಿತಾ. ಈಗಾಗಲೇ ಕಳೆದ 3 ದಿನಗಳಿಂದ ಅಭಿಮಾನಿಗಳೊಂದಿಗೆ ಫೋಟೊ ಸೆಷನ್ ಆರಂಭಿಸಿರುವ ರಜಿನಿ ತಾವು ಪಾಲಿಟಿಕ್ಸ್'ಗೆ ಬರುವುದು ಖಚಿತ ಎಂಬ ಸಂದೇಶ ನೀಡುತ್ತಿದ್ದಾರೆ.

ತಾವು ನಂಬಿರೋ ಬಾಬಾ ಆದೇಶಿಸಿದರೆ ಇಂದೇ ತಮಿಳು'ನಾಡಿನ ಜನರ ಜೊತೆ ಬೆರೆಯುವೆ ಎಂಬುದಾಗಿ ಈಗಾಗಲೇ ಹೇಳಿದ್ದು, ಅಷ್ಟಕ್ಕೂ ರಜಿನಿ ನಂಬಿರುವ ಬಾಬಾ ಯಾರೆಂಬುದಕ್ಕೆ ಸಾವಿರಾರು ವದಂತಿಗಳು ಮಾಧ್ಯಮಗಳಲ್ಲಿ, ಅಭಿಮಾನಿಗಳ ಬಾಯಲಿ ಆಗಾಗ ಕೇಳಿಬರುತ್ತಿವೆ. ಈ ಬಗ್ಗೆ ಹಾಗೂ ರಜಿನಿ ರಾಜಕೀಯ ಪ್ರವೇಶದ ಬಗ್ಗೆ ಬೆಂಗಳೂರಿನಲ್ಲಿರುವ ಅವರ ಪ್ರಾಣ ಸ್ನೇಹಿತ ರಾಜ್ ಬಹುದ್ದೂರ್ ಸತ್ಯ ಬಿಚ್ಚಿಟ್ಟಿದ್ದಾರೆ.

''ಬಾಬಾ ಇರುವುದು ಹಿಮಾಲಯ ಪರ್ವತದ ಮೇಲೆ ಒಂದು ಗುಹೆಯಿದೆ. ಒಬ್ಬ ಮನುಷ್ಯ ನುಸುಳಿಕೊಂಡು ಹೋಗಬೇಕು ಆ ರೀತಿ ಗುಹೆಯಿದೆ. ಆ ಗುಹೆಯಿಂದ ಎಷ್ಟೋ ದೂರ ತೆವಳಿಕೊಂಡು ಹೋದ ನಂತರ ಬಾಬಾ ದರ್ಶನವಾಗುತ್ತದೆ. ತಾವು ರಜಿನಿ ಜೊತೆಗೆ ಹೋಗಿದ್ದಾಗ ಈ ಅನುಭವವಾಗಿದೆ. ಇದು ಘಟಿಸಿದ್ದು 20 ವರ್ಷಗಳ ಹಿಂದೆ. ಸೂಪರ್ ಸ್ಟಾರ್ ಆಗಿದ್ದವನು ವಿಶ್ವಮಟ್ಟದಲ್ಲಿ ಗುರುತಿಸುವಂತ ನಟ ಆಗಿರುವುದಕ್ಕೆ ಆ ಬಾಬಾ ಅವರ ಆಶೀರ್ವಾದವೇ ಕಾರಣ.

ರನಿಜಿ ಯಾವುದೇ ಶುಭ ಕಾರ್ಯ ಕೈಗೊಳ್ಳಬೇಕಾದರೆ ಬಾಬಾ ಅವರ ಅಪ್ಪಣೆಯಿಲ್ಲದೆ ಮುಂದೋಗುವುದಿಲ್ಲ. ಸೂಪರ್'ಸ್ಟಾರ್ ಕಿವಿಗೆ ಸಂದೇಶಗಳನ್ನು ಅವರು ಹೇಳುತ್ತಿರುತ್ತಾರೆ. ಈಗಾಗಲೇ ಪರೋಕ್ಷ ನಿರ್ದೇಶನ ನೀಡಿಯಾಗಿದೆ. ಇನ್ನೇನಿದ್ದರೂ ನೇರ ಆದೇಶವಷ್ಟೆ. ತಮಿಳುನಾಡಿನ ಜನ ಕಷ್ಟದಲ್ಲಿದ್ದಾರೆ. ನೀನು ಹೋಗಿ ಅವರ ಸೇವೆಯನ್ನು ಮಾಡು ಎಂದು ಹೇಳಿದ ಮಾರನೆ ದಿನವೇ ಪ್ರಚಾರ ಕಾರ್ಯ ಪಕ್ಕವಾಗುತ್ತದೆ. ಶೀಘ್ರದಲ್ಲಿ ಆ ಕನಸು ನನಸಾಗಲಿದೆ'

ರಾಜಕೀಯಕ್ಕೆ ಬರಬೇಕು

'10 ದಿನಗಳ ಮುಂಚೆ ನಾನು ಅವನು(ರಜಿನಿ) ಭೇಟಿ ಮಾಡಿದ್ದೆವು. ಸುಮಾರು 4 ಗಂಟೆ ಬರಿ ರಾಜಕೀಯದ ಬಗ್ಗೆ ಚರ್ಚೆ ಮಾಡಿದೆವು. ಈ ಮೊದಲು ರಾಜಕೀಯದ ಬಗ್ಗೆ ಆತನಿಗೆ ಇಷ್ಟು ಆಸಕ್ತಿಯಿರಲಿಲ್ಲ. ರಾಜಕೀಯಕ್ಕೆ ಬರಲು ಹೆಚ್ಚು ಕೆಚ್ಚು ಬಂದಿದ್ದು ಜಯಲಲಿತಾ ಅವರು ನಿಧನರಾದ ಮೇಲೆ. ಜಯ ಅವರು ರಾಜಕೀಯದಲ್ಲಿದ್ದಾಗ ತಮಿಳುನಾಡು ಸರ್ಕಾರ ಉತ್ತಮವಾಗಿ ನಡೆದುಕೊಂಡು ಹೋಗುತ್ತಿತ್ತು. ಜನರಿಗೆ ಅಂತಹ ತೊಂದರೆಯಾಗುತ್ತಿರಲಿಲ್ಲ. ಬಡವರಿಗೂ ಅನುಕೂಲವಾಗಿತ್ತು.

ಅವರು ತೀರಿಕೊಂಡ ನಂತರ ತಮಿಳುನಾಡಿನ ರಾಜಕೀಯ ಸಂಪೂರ್ಣ ಹದೆಗೆಟ್ಟು ಹೋಗಿ ಬಡವರ ಗೋಳನ್ನು ಕೇಳುವವರೆ ಇಲ್ಲದಂತಾಗಿದೆ. ಬಡವರು ತುಂಬ ತೊಂದರೆಯಲಿದ್ದಾರೆ. ತಮಿಳು'ನಾಡಿನ 7.5 ಕೋಟಿ ಜನರ ಬೇಡಿಕೆ ರಜಿನಿ ರಾಜಕೀಯಕ್ಕೆ ಬರುವುದಾಗಿದೆ. ನೀವು ಬಂದರೆ ಮಾತ್ರ ನಮ್ಮ ಸಂಕಷ್ಟ ನಿವಾರಣೆಯಾಗುತ್ತದೆ. ಮುಖ್ಯಮಂತ್ರಿಯಾಗಿ ಬಂದು ನಮ್ಮ ಕಷ್ಟವನ್ನು ನಿವಾರಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

'ಸಿನಿಮಾ ರಂಗದಲ್ಲಿ ಮಹತ್ತರವಾದ ಎಲ್ಲವನ್ನು ಸಾಧಿಸಿಯಾಗಿದೆ. ಈಗೇನಿದ್ದರೂ ಬಡವರ ಸೇವೆಯ ಹಂಬಲ. ಮುಖ್ಯಮಂತ್ರಿಯಾದರೆ ಬಡವರ ಸಂಕಷ್ಟವನ್ನು ಹತ್ತಿರದಿಂದ ನೋಡಿ ಸಮಸ್ಯೆಯನ್ನು ನಿವಾರಿಸಬಹುದು. ಇದಕ್ಕೆ ರಜಿನಿ ತಯಾರಾಗಿದ್ದಾರೆ.

ಯಾವ ಪಕ್ಷ ಎಂಬುದು ನಿರ್ಧಾರವಾಗಿಲ್ಲ

ಮೋದಿ ಅವರು ಭೇಟಿಯಾಗಿದ್ದಾರೆ. ಆದರೆ ಬಿಜೆಪಿ ಅಥವಾ ಸ್ವಂತ ಪಕ್ಷವೆ ಎಂಬುದರ ಬಗ್ಗೆ ನನಗೆ ಹೇಳಿಲ್ಲ. ರಾಜಕೀಯಕ್ಕೆ ಬರುವುದಾಗಿ ಮಾತ್ರ ಹೇಳಿದ್ದಾನೆ. ಫೋಟೊ ಸೆಷನ್ ರಾಜಕೀಯಕ್ಕೆ ಬರುವ ಗಿಮ್ಮಿಕ್ ಅಲ್ಲ. ಅಭಿಮಾನಿಗಳೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವುದು ಆತನ ಪ್ರತಿ ವರ್ಷದ ಹಿಂದಿನ ಸಂಪ್ರದಾಯ. ಕಳೆದ 8 ವರ್ಷಗಳಿಂದ ಅನಾರೋಗ್ಯದ ಕಾರಣದಿಂದ ನಿಲ್ಲಿಸಿದ್ದ. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ಮತ್ತೆ ಶುರು ಹಚ್ಚಿಕೊಂಡಿದ್ದಾನೆ.

ವಿರೋಧಿಗಳಿಗೆ ಡೋಂಟ್ ಕೇರ್

ರಜಿನಿ ರಾಜಕೀಯಕ್ಕೆ ಬರುವುದಕ್ಕೆ ರಾಮದಾಸ್ ಸೇರಿದಂತೆ ಹಲವು ರಾಜಕೀಯ ಮುಖಂಡರು ವಿರೋಧಿಸುತ್ತಿದ್ದಾರೆ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ದೇವರ ಏನು ಹೇಳುತ್ತಾನೊ ಆತನ ಮಾತನ್ನು ಮಾತ್ರ ಕೇಳುತ್ತೇನೆ. ಈಗಾಗಲೆ ದೈವದ ಸೂಚನೆಯಾಗಿದೆ. ರಾಜಕೀಯಕ್ಕೆ ಬರಲು ಸಂಪೂರ್ಣ ಸಿದ್ದವಾಗಿದ್ದಾನೆ.

ರಜನಿ ಸಿಎಂ ಆದರೆ ಮೊದಲ ಕೆಲಸ

ರಜಿನಿ ಸಿಎಂ ಆದರೆ ಆತನ ಮೊದಲ ಕೆಲಸ ಭ್ರಷ್ಟಾಚಾರವನ್ನು ನಿಗ್ರಹಿಸುವುದು. ಕಪ್ಪು ಹಣವನ್ನು ತಡೆಯುವುದು. ಇದೇ ಹಣವನ್ನು ಬಡವರಿಗೆ ಹಂಚುವುದು ಹಾಗೂ ಅವರ ಸಬಲಿಕರಣ.

click me!