Latest Videos

ಚಿತ್ರನಟ ದೊಡ್ಡಣ್ಣ ಅಸ್ವಸ್ಥ: ಚಿತ್ರೀಕರಣ ಸ್ಥಳದಿಂದ ನೇರ ಹಾಸ್ಪಿಟಲ್'ಗೆ

By Suvarna Web DeskFirst Published May 18, 2017, 11:16 PM IST
Highlights

ಚಿತ್ರನಟ ದೊಡ್ಡಣ್ಣ ಅಸ್ವಸ್ಥ: ಚಿತ್ರೀಕರಣ ಸ್ಥಳದಿಂದ ನೇರ ಹಾಸ್ಪಿಟಲ್'ಗೆ

ವಿಜಯಪುರ(ಮೇ.18):ಡಿಹೈಡ್ರೇಷನ್ ನಿಂದ ಬಳಲುತ್ತಿರುವ ದೊಡ್ಡಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಲುಗು ಚಿತ್ರದ ಚಿತ್ರೀಕರಣದ ಸಲುವಾಗಿ ನಿನ್ನೆ ಬೆಂಗಳೂರಿನಿಂದ ವಿಜಯಪುರಕ್ಕೆ ಚಿತ್ರೀಕರಣಕ್ಕೆ ಬಂದಿದ್ದರು.

ನಗರದಿಂದ 40 ಕಿಮೀ ದೂರದ ಸೊಲ್ಹಾಪುರ ರಸ್ತೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು.  ಚಿತ್ರೀಕರಣದ ವೇಳೆ ಅಲ್ಪ ಉಪಹಾರ ಸೇವಿಸಿದ್ದಾರೆ. ಆಹಾರ ಪಚನವಾಗದೆ ಬೇದಿಯಾಗಿದೆ ಜೊತೆಗೆ ಕಾಲುಗಳು ಊತುಕೊಂಡವು. ಪ್ರಸ್ತುತ ನಗರದ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಏರ್ ಅಂಬ್ಯಲೆನ್ಸ್ ನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ದೊಡ್ಡಣ್ಣ ಸಂಬಂಧಿಗಳ ಜತೆ ವೈದ್ಯರು ಚರ್ಚೆ ನಡೆಸುತ್ತಿದ್ದಾರೆ.

click me!