ಸಿಂಹಾದ್ರಿ ಸಿಂಹನ ನೆರಳಲ್ಲಿ ರಾಜಾ ಸಿಂಹ

By Suvaran Web DeskFirst Published Feb 2, 2018, 10:29 PM IST
Highlights

ಚಿತ್ರದ ಈ ಇಡೀ ಕತೆ ಸಾಗುವುದು ಸಿಂಹಾದ್ರಿ ಸಿಂಹ ನರಸಿಂಹೇಗೌಡನ ನೆರಳಲ್ಲಿ. ಆ ನರಸಿಂಹೇಗೌಡನ ಅಮೂರ್ತ ರೂಪವೇ ಸಾಹಸ ಸಿಂಹ ವಿಷ್ಣುವರ್ಧನ್. ವಿಷ್ಣುವರ್ಧ'ನ್ ಅಭಿನಯದ ಸಿಂಹಾದ್ರಿಯ ಸಿಂಹಚಿತ್ರದ ಮುಂದುವರಿಕೆಯೇ ಎಂಬಂತೆ ಕಾಣಿಸುವ ಕತೆಯಿದು.ಆ ಚಿತ್ರದ ಕೆಲವು ದೃಶ್ಯಗಳನ್ನು ಇಲ್ಲಿ ಗ್ರಾಫಿಕ್ಸ್ ಮೂಲಕ ಮರು ಸೃಷ್ಟಿಸಿಕೊಳ್ಳಲಾಗಿದೆ.

ಚಿತ್ರ : ರಾಜಾ ಸಿಂಹ

ತಾರಾಗಣ: ಅನಿರುದ್ಧ , ನಿಖಿತಾ ತುಕ್ರಾಲ್,  ‘ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಬುಲೆಟ್ ಪ್ರಕಾಶ್

ನಿರ್ದೇಶನ: ರವಿ ರಾಮ್

ಸಂಗೀತ: ಜೆಸ್ಸಿ ಗಿಪ್ಟ್

ಛಾಯಾಗ್ರಹಣ:  ವಿಷ್ಣುವ‘ರ್ನ್

ನಿರ್ಮಾಣ : ಸಿ.ಡಿ ಬಸಪ್ಪ

ಸಿಂಹಾದ್ರಿ ಎನ್ನುವುದೊಂದು ಊರು. ಆ ಊರಿಗೆ ನೀರಿನದ್ದೇ ಬರ. ಹೇಗಾದ್ರೂ ಕೆರೆ ಕಟ್ಟಿಸಿ, ಊರಿನ ನೀರಿನ ದಾಹ ಇಂಗಿಸುವ ಆಸೆ ಆ ಊರಿನ ಯಜಮಾನ ನರಸಿಂಹೇ ಗೌಡನದು. ಆದರೆ, ನರಸಿಂಹೇಗೌಡನ ಆ ಹಂಬಲಕ್ಕೆ ಆತನ ಸಹೋದರ ರುದ್ರೇಗೌಡನೇ ಶತ್ರು. ಕೆರೆಕಟ್ಟಿಸಿ ಊರಿನ ನೀರಿನ ದಾಹ ಇಂಗಿದರೆ ನರಸಿಂಹೇಗೌಡ ಜನ ನಾಯಕ ಆಗುತ್ತಾನೆ. ತಾನೂ ಕೂಡ ಆತನ ಹಂಗಿನಲ್ಲಿರಬೇಕಾಗುತ್ತದೆ ಎನ್ನುವ ಸಂಕಟ ಆತನದ್ದು. ನರಸಿಂಹೇಗೌಡ ಇರಬಾರದು, ಸಿಂಹಾದ್ರಿಯ ನೀರಿನ ದಾಹ ಇಂಗಬಾರದು ಅಂತ ಸಂಚು ರೂಪಿಸಿ, ನರಸಿಂಹೇಗೌಡನ ಕುಟುಂಬವನ್ನೆ  ಮುಗಿಸಿ ಬಿಡುತ್ತಾನೆ ರುದ್ರೇಗೌಡ. ಅಲ್ಲಿಂದ ಸಿಂಹಾದ್ರಿಗೆ ಆತನೇ ಅಧಿಪತಿ. ಅಲ್ಲಿ ಅವನದ್ದೇ ಸರ್ವಾಧಿಕಾರ. ಆದರೆ, ಕೆಟ್ಟದ್ದರ ನಾಶಕ್ಕೂ ಒಂದು ಸಮಯ ಬರುತ್ತೆ. ಹಾಗಂತ ಸಿಂಹಾದ್ರಿಯ ಜನ ಕಾಯುತ್ತಿರುತ್ತಾರೆ. ಆ ಹೊತ್ತಿಗೆ ಸಿಂಹಾದ್ರಿಗೆ ಯುವರಾಜನ(ಅನಿರುದ್ಧ್) ರೂಪದಲ್ಲಿ ದೇವರಾಗಿ ಬಂದವನು ಚಿತ್ರದ ಕಥಾ ನಾಯಕ.

ಚಿತ್ರದ ಈ ಇಡೀ ಕತೆ ಸಾಗುವುದು ಸಿಂಹಾದ್ರಿ ಸಿಂಹ ನರಸಿಂಹೇಗೌಡನ ನೆರಳಲ್ಲಿ. ಆ ನರಸಿಂಹೇಗೌಡನ ಅಮೂರ್ತ ರೂಪವೇ ಸಾಹಸ ಸಿಂಹ ವಿಷ್ಣುವರ್ಧನ್. ವಿಷ್ಣುವ‘ರ್ಧ'ನ್ ಅಭಿನಯದ ‘ಸಿಂಹಾದ್ರಿಯ ಸಿಂಹ’ ಚಿತ್ರದ ಮುಂದುವರಿಕೆಯೇ ಎಂಬಂತೆ ಕಾಣಿಸುವ ಕತೆಯಿದು.ಆ ಚಿತ್ರದ ಕೆಲವು ದೃಶ್ಯಗಳನ್ನು ಇಲ್ಲಿ ಗ್ರಾಫಿಕ್ಸ್ ಮೂಲಕ ಮರು ಸೃಷ್ಟಿಸಿಕೊಳ್ಳಲಾಗಿದೆ. ಜತೆಗೊಂದು ವಿಷ್ಣುವ‘ರ್ಧ'ನ್ ಅವರ ಕಂಚಿನ ಪ್ರತಿಮೆ. ಹಾಗಂತ ಕತೆಯಲ್ಲಿ ಯಾವುದೇ ವಿಶೇಷತೆಗಳಿಲ್ಲ. ರವಷ್ಟು ಗಟ್ಟಿತನವೂ ಇಲ್ಲ. ಹೊಂದಿಕೆಯೇ ಆಗದ ಬಿಡಿ ಬಿಡಿಯಾದ ಆ್ಯಕ್ಷನ್, ಸೆಂಟಿಮೆಂಟ್ ಹಾಗೂ ರೊಮ್ಯಾನ್ಸ್  ದೃಶ್ಯಗಳ ಮೂಲಕ ಅಭಿಮಾನಿಗಳಲ್ಲಿರುವ ವಿಷ್ಣುವ‘ರ್ಧ'ನ್ ಅವರ ಜಾಗಕ್ಕೆ ಅನಿರುದ್ಧ್ ಅವರನ್ನು ತಂದು ಕೂರಿಸುವ ಸಣ್ಣದೊಂದು ಪಟ್ಟಾಭಿಷೇಕ ಸಮಾರಂ‘ಭದ ಹಾಗಿದೆ ಈ ಚಿತ್ರದ ಒಟ್ಟು ಪಯಣ. ಹಾಗಂತ ಅನಿರುದ್ಧ್ ಅವರನ್ನು ವಿಷ್ಣುವ‘ರ್ಧ'ನ್ ಬಿಟ್ಟು ಹೋದ ಜಾಗದಲ್ಲಿ ಕಲ್ಪಿಸಿಕೊಳ್ಳಲು ಸಾ‘ಧ್ಯವೇ? ಅದು ಕೊನೆಯಲ್ಲಿ ಕಾಡುವ ಯಕ್ಷ ಪ್ರಶ್ನೆ.

ಒಂದು ಲಾಂಗ್ ಗ್ಯಾಪ್ ನಂತರ ಅನಿರುದ್ಧ್  ಮತ್ತೆ ಅಭಿನಯಿಸಿದ ಚಿತ್ರವಿದು. ಮತ್ತೆ ತೆರೆ ಮೇಲೆ ಬರುವುದಕ್ಕೆ  ಮಾವ ವಿಷ್ಣುವ‘ರ್ಧ'ನ್ ಅವರ ನೆರಳನ್ನೇ ನಂಬಿಕೊಂಡಿದ್ದರೂ, ಗಟ್ಟಿಯಾದ ಕತೆ, ಪಕ್ವತೆಯ ಅಭಿನಯ, ವಿಷ್ಣು ತೋರುತ್ತಿದ್ದ ಖದರ್..ಹೀಗೆ  ಯಾವುದೂ ಇಲ್ಲಿ  ಪರಿಣಾಮಕಾರಿಯಾಗಿ ಕಾಣಿಸಿಕೊಂಡಿಲ್ಲ. ಈ ಮೈಯಲ್ಲಿ ಹರಿಯುತ್ತಿರುವುದು ಸಿಂಹದ ರಕ್ತ ಎಂದು ರೋಷವೇಷದಲ್ಲಿ  ಘರ್ಜಿಸುವ ಮಾತು, ಕೇವಲ ಮಾತಾಗಿ ಉಳಿದಿದೆ. ಇನ್ನು ವಿಷ್ಣುವರ್ಧ'ನ್  ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚಿಕೊಳ್ಳುವುದಕ್ಕಿಂತ ಮುಜುಗರಗೊಂಡು ಎದ್ದು ಹೋಗುವುದಕ್ಕೆ  ಅನಿರುದ್ಧ್- ಸಂಜನಾ ನಡುವಿನ ಮಸಾಲೆ ಹಾಡೊಂದೇ ಸಾಕು!

ಚಿತ್ರದಲ್ಲಿ ‘ಭಾರತಿ ವಿಷ್ಣುವ‘ರ್ಧ'ನ್ ಇದ್ದಾರೆ. ಅವರೇ ಇಲ್ಲಿ ನಾಯಕನ ಅಮ್ಮ. ಕತೆಯಲ್ಲಿ ಒಂದೊಮ್ಮೆ ಬಂದು ಕಾಣೆಯಾದವರು ಕೊನೆಯಲ್ಲಿ ಬಂದು ಅಚ್ಚರಿ ತರಿಸುವುದೇ ವಿಚಿತ್ರ. ಉಳಿದಂತೆ ನಾಯಕಿ ಪಲ್ಲವಿ ಪಾತ್ರದಲ್ಲಿ ನಿಖಿತಾ ತುಕ್ರಾಲ್, ಸಿಂಹಾದ್ರಿಯ ವಿಲನ್ ರುದ್ರೇಗೌಡನಾಗಿ ಶರತ್ ಲೋಹಿತಾಶ್ವ, ಆತನ ಮಗನ ಪಾತ್ರದಲ್ಲಿ ಅರುಣ್ ಸಾಗರ್, ಚೆಂಗಲರಾಯನ ಪಾತ್ರದಲ್ಲಿ ಬುಲೆಟ್ ಪ್ರಕಾಶ್ ಎಲ್ಲರ ಅಭಿನಯ ಸೊಗಸಾಗಿದೆ. ಆದರೂ, ಗಟ್ಟಿತನವಿಲ್ಲದ  ಕತೆಯಲ್ಲಿ ಅವರ ಅಭಿನಯ ಗಾಳಿಯಲ್ಲಿ ಗುದ್ದಾಡಿದಂತಿದೆ. ಜೆಸ್ಸಿ ಗಿಪ್ಟ್ ಸಂಗೀತವು ಹಾಡಿದ್ದೇ ಹಾಡೋ... ಎನ್ನುವ ಗಾದೆ ಮಾತು ನೆನಪಿಸುತ್ತದೆ. ಒಂದು ಹಾಡಂತೂ ತೆಲುಗಿನ ‘ಶ್ರೀಮಂತುಡು’ ಚಿತ್ರದ ಹಾಡಿನ ಯಥಾವತ್ ಧ್ವನಿ ಕೇಳಿಸುತ್ತದೆ. ವಿಷ್ಣುವ‘ರ್ಧ'ನ್ ಕ್ಯಾಮರಾ ಕಣ್ಣು  ತೋರಿಸಿದ್ದೇ ದೃಶ್ಯ. ಹೆಚ್ಚು ಕಸರತ್ತು ಇಲ್ಲದೆ ಗಟ್ಟಿ ಕತೆ ಮಾಡಿಕೊಳ್ಳದೆ ಅಬಿಮಾನದಲ್ಲಿಯೇ ಗೆದ್ದು ಬಿಡುತ್ತೇವೆ ಎನ್ನುವ ನಿರ್ದೇಶಕ ರವಿರಾಮ್ ನಂಬಿಕೆ ಕೈ ಕೊಟ್ಟಿದೆ ಅನ್ನೋದು ಈ ಚಿತ್ರ ನೋಡಿದಾಗ ಎನಿಸುತ್ತೆ.

 

- ದೇಶಾದ್ರಿ ಹೊಸ್ಮನೆ

- ರೇಟಿಂಗ್ 2

 

 

click me!