ರಚಿತಾ ರಾಮ್ ಈಗ ಮಂಡ್ಯ ಗರ್ಲ್!

Published : Aug 13, 2018, 02:06 PM ISTUpdated : Sep 09, 2018, 09:26 PM IST
ರಚಿತಾ ರಾಮ್ ಈಗ ಮಂಡ್ಯ ಗರ್ಲ್!

ಸಾರಾಂಶ

ಉಪೇಂದ್ರ ಲವ್ ಈಸ್ ನಥಿಂಗ್ ಬಟ್ ಸೆಕ್ಸ್ ಎಂದು ಹೇಳಿದಾಗ ನನಗೆ ಗಾಬರಿ ಆಯಿತು. ಆ ಮೇಲೆ ನಾನೂ ಯೋಚಿಸಿದರೆ ಹೌದಲ್ವಾ, ಮೊದಲು ಪ್ರೀತಿ ಅಂತ ಸುತ್ತಾಡುತ್ತೇವೆ. ಆಮೇಲೆ ಸೆಕ್ಸ್. ನೇರವಾಗಿ ಸೆಕ್ಸ್ ಕೇಳುವ ಬದಲು ಪ್ರೀತಿಯ ಸೋಗಿನಲ್ಲಿ ಸೇರುತ್ತೇವೆ ಅಲ್ವಾ ಅನಿಸಿದ್ದು- ರಚಿತಾ ರಾಮ್. 

ಬೆಂಗಳೂರು (ಆ. 13): ರಚಿತಾ ರಾಮ್ ಐದಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೇನು ಒಂದರ ನಂತರ ಒಂದು ಚಿತ್ರಮಂದಿರಕ್ಕೆ ಆಗಮಿಸಲಿದೆ. ಸದ್ಯ ನಿಖಿಲ್ ಕುಮಾರ್ ಜತೆ ‘ಸೀತಾರಾಮ ಕಲ್ಯಾಣ’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ
ಬ್ಯುಸಿಯಾಗಿರುವ ರಚಿತಾ, ಸದ್ಯದಲ್ಲೇ ಇದೇ ತಂಡದ ಜತೆ ಊಟಿಗೆ ಹೊರಡಲಿದ್ದಾರೆ.  ಈ ನಡುವೆ ಶೂಟಿಂಗ್ ಸೆಟ್‌ನಲ್ಲಿ ಸಿಕ್ಕ ಡಿಂಪಲ್ ಬ್ಯೂಟಿ ಹೇಳಿದ ಕತೆಗಳು ಇಲ್ಲಿವೆ.

ಬಹು ನಿರೀಕ್ಷೆಯ ಚಿತ್ರ ಅಯೋಗ್ಯ

ಇಲ್ಲಿವರೆಗೂ ನಾನು ಗ್ಲಾಮರ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದೇನೆ. ಆದರೆ, ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸುತ್ತಿರುವೆ. ಅಂಥ ಭಿನ್ನ ರೀತಿಯ ಪಾತ್ರ ಕೊಟ್ಟಿರುವುದು ‘ಅಯೋಗ್ಯ’ ಸಿನಿಮಾ. ಮಹೇಶ್ ಕುಮಾರ್ ಇಡೀ ಚಿತ್ರವನ್ನು ಮಂಡ್ಯದ ಹಳ್ಳಿಯೊಂದರ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ.  ಲಂಗ- ದಾವಣಿ ಹುಡುಗಿ ನಾನು. ಮಂಡ್ಯ ಭಾಷೆ ಕೇಳಕ್ಕೂ ಮತ್ತು ಹೇಳಕ್ಕೂ ಒಂದು ಮಜಾ. ಹೀಗಾಗಿ ನನ್ನ ಇಡೀ ಚಿತ್ರಕ್ಕೆ ಕೇವಲ ಮೂರು ಗಂಟೆಯಲ್ಲೇ ಡಬ್ಬಿಂಗ್ ಮುಗಿಸಿಕೊಟ್ಟೆ. ಅಷ್ಟು ಖುಷಿ ಕೊಟ್ಟ ಸಿನಿಮಾ ‘ಅಯೋಗ್ಯ’. ನನ್ನ ಮತ್ತು ಸತೀಶ್ ನೀನಾಸಂ ಜೋಡಿ ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ವರ್ಕ್ ಆಗಿದೆ. ಟಿಆರ್ ಚಂದ್ರಶೇಖರ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಊಟಿಯಲ್ಲಿ ಸೀತಾರಾಮ ಕಲ್ಯಾಣ

ನಿಖಿಲ್ ಅವರೊಂದಿಗೆ ನಟಿಸುತ್ತಿರುವ ಸೀತಾರಾಮ ಕಲ್ಯಾಣ ಸಿನಿಮಾ ಬಹುತೇಕ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. 35 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದು ಊಟಿಯಲ್ಲಿ ನಡೆಯಲಿದೆ. ಪ್ರಮುಖ ಕಲಾವಿದರೇ 35 ರಿಂದ 40 ಮಂದಿ ಇದ್ದಾರೆ. ಇದು ದೊಡ್ಡ ತಾರಾಬಳಗ ಇರುವ ಕಲ್ಯಾಣ ಸಿನಿಮಾ.

ಹುಚ್ಚಿಯಂತೆ ಕಾಣಿಸಿರುವ ಏಪ್ರಿಲ್

ನನ್ನ ಇಷ್ಟು ವರ್ಷಗಳ ಕೆರಿಯರ್‌ನಲ್ಲಿ ಒಪ್ಪಿಕೊಂಡಿರುವ ತುಂಬಾ ಡಿಫರೆಂಟ್ ಸಿನಿಮಾ ಏಪ್ರಿಲ್. ಕೆದರಿದ ತಲೆ ಕೂದಲು, ಹರಿದ ಬಟ್ಟೆ, ಮಾಸಿದ ಮುಖ, ನೋಡಕ್ಕೆ ಭಿಕ್ಷುಕಿಯಂತೆ, ಮಾನಸಿಕ ಅಸ್ವಸ್ಥತೆಗೆ ಒಳಗಾದ ಪಾತ್ರದಂತೆ ಇಲ್ಲಿ ಕಾಣಿಸಿಕೊಂಡಿದ್ದೇನೆ. ಬೇಡಿಕೆಯಲ್ಲಿರುವಾಗಲೇ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವುದು ಅಂದರೆ ಅದು ನಮ್ಮ ಅದೃಷ್ಟ. ಜೋರು ಮಳೆ ಸುರಿಯುತ್ತಿದ್ದು. ಗ್ರೀನ್ ಟೀ ಕುಡಿಯುತ್ತ ಕತೆ ಕೇಳಿ ಒಪ್ಪಿಕೊಂಡೆ. ಏಪ್ರಿಲ್ ಡಿಸೋಜಾ ಎನ್ನುವ ನನ್ನ ಪಾತ್ರವೇ ನನ್ನ ಆಕರ್ಷಿಸಿತು.

ಉಪೇಂದ್ರ ಅವರ ಲವ್ ಸಿದ್ದಾಂತ
ಉಪೇಂದ್ರ ಅವರ ಜತೆಗೆ ಒಂದೆರಡು ಸಿನಿಮಾ ಮಾಡಿದರೆ ನಾವು ಕೂಡ ಫಿಲಾಸಫರ್ ಆಗಿಬಿಡುತ್ತೇವೆ. ಅಷ್ಟು ಅನುಭವಗಳು ಕಲಾವಿದ ಅವರು. ‘ಐಲವ್‌ಯೂ’ ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಂಡಿದ್ದೇ ದೊಡ್ಡ ಖುಷಿ. ಲವ್, ಸೆಕ್ಸ್ ಬಗ್ಗೆ
ಅವರು ಹೇಳುವ ಪ್ರಾಕ್ಟಿಕಲ್ ಮಾತುಗಳು ನನಗೂ ನಿಜ ಅನಿಸಿಬಿಡ್ತು. ಲವ್ ಈಸ್ ನಥಿಂಗ್ ಬಟ್ ಸೆಕ್ಸ್ ಎಂದು ಹೇಳಿದಾಗ ನನಗೆ ಗಾಬರಿ ಆಯಿತು. ಆ ಮೇಲೆ ನಾನೂ ಯೋಚಿಸಿದರೆ ಹೌದಲ್ವಾ, ಮೊದಲು ಪ್ರೀತಿ ಅಂತ
ಸುತ್ತಾಡುತ್ತೇವೆ. ಆಮೇಲೆ ಸೆಕ್ಸ್. ನೇರವಾಗಿ ಸೆಕ್ಸ್ ಕೇಳುವ ಬದಲು ಪ್ರೀತಿಯ ಸೋಗಿನಲ್ಲಿ ಸೇರುತ್ತೇವೆ ಅಲ್ವಾ ಅನಿಸಿದ್ದು. ಉಪ್ಪಿ ಜತೆ ಲವ್ ಪಾಠ ಕೇಳಿದ ಮೇಲೆ ನಾನು ಶೂಟಿಂಗ್ನಲ್ಲಿದ್ದರೆ ಹುಡುಗರ ಮೊಬೈಲ್ ಚೆಕ್ ಮಾಡಿ ಅವರನ್ನು ಕಾಳೆಲೆದಿದ್ದು ಇದೆ. ಬ್ಯೂಟಿಫುಲ್ ಕತೆ ‘ಐಲವ್‌ಯೂ’ ಚಿತ್ರದ್ದು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan ಅರೆಸ್ಟ್‌ ಆದಾಗ ಮಗ ವಿನೀಶ್‌ನನ್ನು ಹ್ಯಾಂಡಲ್‌ ಮಾಡೋದು ಮಾತ್ರ...; ನೈಜ ಘಟನೆ ತಿಳಿಸಿದ Vijayalakshmi
ಕುಡುಕ ನನ್ ಮಕ್ಳು ಸಿನಿಮಾ ಮೂಲಕ ಕಂಬ್ಯಾಕ್, Deep Neck Dress ಧರಿಸಿ ಟ್ರೋಲ್ ಆದ Chaitra Kotur