
ನಟಸಾರ್ವಭೌಮ ಈ ಹೆಸರು ಕೇಳಿದಾಕ್ಷಣ ಥಟ್ ಅಂತಾ ನೆನಪಾಗೋದು ಡಾ ರಾಜ್ ಕುಮಾರ್. ಇವತ್ತಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿರುವ ಈ ಹೆಸರು ಈಗ ಸಿನಿಮಾ ಟೈಟಲ್ ಆಗಿದೆ.
ರಾಜಕುಮಾರನಾಗಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಪವರ್'ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ನಟಸಾರ್ವಭೌಮನಾಗುತ್ತಿದ್ದಾರೆ. ಸೈಲೆಂಟಾಗಿ ಸೆಟ್ಟೇರಿದ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾದ ಟೈಟಲ್ ಇದು. ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ, ಈ ನಟಸಾರ್ವಭೌಮ ಚಿತ್ರದ ಫೋಟೋಶೂಟ್'ನಲ್ಲಿ ಪವರ್'ಸ್ಟಾರ್ ಸ್ಟೈಲಿಷ್ ಆಗಿ ಕಾಣ್ತಾರೆ.
ಪುನೀತ್ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು
ಪುನೀತ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈಗಾಗ್ಲೇ ಸಂತೋಷ್ ಆನಂದ್'ರಾಮ್ ನಿರ್ದೇಶನದ ಹಾಗೂ ತಮಿಳು ನಿರ್ದೇಶಕ ವೆಟ್ರಿ'ಮಾರನ್ ನಿರ್ದೇಶನದ ಮತ್ತು ನಿರ್ಮಾಪಕ ಎನ್.ಕುಮಾರ್, ಪುನೀತ್ ಹೋಂ ಬ್ಯಾನರ್'ನಲ್ಲಿ ಹೀಗೆ ಸಾಲು ಸಾಲು ಚಿತ್ರಗಳು ಪುನೀತ್ ಬರ್ತ್ಡೇಗೆ ಘೋಷಿಸಲಾಗುತ್ತಿದೆ. ಇನ್ನು ಪುನೀತ್ ರಾಜ್'ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಪುನೀತ್ ಅಭಿಮಾನಿಯೊಬ್ಬ, ಅಣ್ಣಾವ್ರ ಮಕ್ಕಳನ್ನ ಪೇಟಿಂಗ್ ಮಾಡುವ ಮೂಲಕ ಪವರ್'ಸ್ಟಾರ್' ಬರ್ತ್ಡೆಗೆ ಗಿಫ್ಟ್ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.