ದರ್ಶನ್ ಮಾಡಬೇಕಿದ್ದ ಸಿನಿಮಾ ಪುನೀತ್ ತೆಕ್ಕೆಗೆ..?

Published : Nov 14, 2016, 02:02 PM ISTUpdated : Apr 11, 2018, 12:42 PM IST
ದರ್ಶನ್ ಮಾಡಬೇಕಿದ್ದ ಸಿನಿಮಾ ಪುನೀತ್ ತೆಕ್ಕೆಗೆ..?

ಸಾರಾಂಶ

ಪೂಜೈ ಸಿನಿಮಾವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಪೂಜೈ ರಿಮೇಕ್ ರೈಟ್ಸ್ ಹೊಂದಿದ್ದ ಬುಲೆಟ್ ಪ್ರಕಾಶ್ ಹಾಗೂ ಸ್ನೇಹಿತರು ಖ್ಯಾತ ನಿರ್ಮಾಪಕ ಎನ್. ಕುಮಾರ್`ಗೆ ಮಾರಾಟ ಮಾಡಲಾಗಿದೆಯಂತೆ. ಹೀಗಾಗಿ, ನಿರ್ಮಾಪಕ ಎನ್ ಕುಮಾರ್ ಈ ಪ್ರಾಜೇಕ್ಟನ್ನ  ಪುನೀತ್ ರಾಜ್ ಕುಮಾರ್ ಮಾಡುವ ಪ್ಲಾನ್ ನಲ್ಲಿದ್ದಾರಂತೆ. ಈ ಸಿನಿಮಾವನ್ನ ನಿರ್ದೇಶಕ ಹರ್ಷ ಡೈರೆಕ್ಟ್ ಮಾಡ್ತಾರೆ ಅಂತಾ ಹೇಳಲಾಗುತ್ತಿದೆ.

ಬೆಂಗಳೂರು(ನ.14): ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಬೇಕಿದ್ದ ಸಿನಿಮಾವೊಂದು ಈಗ ಪವರ್ ಸ್ಟಾರ್ ಮಾಡುತ್ತಿದ್ದಾರಂತೆ.  ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಸಿನಿಮಾ ಪೂಜೈ. ವಿಶಾಲ್ ಆಕ್ಟ್ ಮಾಡಿದ್ದ ಈ ಸಿನಿಮಾ ಸ್ಯಾಂಡಲ್ ವುಡ್`ನಲ್ಲಿ ರಿಮೇಕ್ ಆಗುತ್ತೆ ಅಂತಾ ಹೇಳಲಾಗಿತ್ತು. ಈ ಸಿನಿಮಾವನ್ನ ಕಾಮಿಡಿ ನಟ ಬುಲೆಟ್ ಪ್ರಕಾಶ್, ಕುಚಿಕು ಗೆಳಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದರು. ಇನ್ನೇನು ಪೂಜೈ ಸಿನಿಮಾ ಸೆಟ್ಟೇರುತ್ತೆ ಎನ್ನುವಷ್ಟರಲ್ಲಿ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ತಮ್ಮ ದಿನಕರ್ ಗಲಾಟೆಯಿಂದ ಈ ಪಾಜೆಕ್ಟ್ ಸ್ಟಾಪ್ ಆಗಿತ್ತು. ಸದ್ಯ ಗಾಂಧಿನಗರದ ಲೇಟೆಸ್ಟ್ ನ್ಯೂಸ್ ಅಂದರೆ ಈ ಸಿನಿಮಾವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡುವ ಸಾಧ್ಯತೆ ಅಂತಾ ಸ್ಯಾಂಡಲ್ ವುಡ್`ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.

ಪುನೀತ್ ರಾಜ್ ಕುಮಾರ್ ಪೂಜೈ ಸಿನಿಮಾ ಮಾಡ್ತಾರಾ?: ಪೂಜೈ ಸಿನಿಮಾವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಪೂಜೈ ರಿಮೇಕ್ ರೈಟ್ಸ್ ಹೊಂದಿದ್ದ ಬುಲೆಟ್ ಪ್ರಕಾಶ್ ಹಾಗೂ ಸ್ನೇಹಿತರು ಖ್ಯಾತ ನಿರ್ಮಾಪಕ ಎನ್. ಕುಮಾರ್`ಗೆ ಮಾರಾಟ ಮಾಡಲಾಗಿದೆಯಂತೆ. ಹೀಗಾಗಿ, ನಿರ್ಮಾಪಕ ಎನ್ ಕುಮಾರ್ ಈ ಪ್ರಾಜೇಕ್ಟನ್ನ  ಪುನೀತ್ ರಾಜ್ ಕುಮಾರ್ ಮಾಡುವ ಪ್ಲಾನ್ ನಲ್ಲಿದ್ದಾರಂತೆ. ಈ ಸಿನಿಮಾವನ್ನ ನಿರ್ದೇಶಕ ಹರ್ಷ ಡೈರೆಕ್ಟ್ ಮಾಡ್ತಾರೆ ಅಂತಾ ಹೇಳಲಾಗುತ್ತಿದೆ.

ಆದರೆ, ಪುನೀತ್ ರಾಜ್ ಕುಮಾರ್ ಪೂಜೈ ರಿಮೇಕ್ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇನ್ನೊಂದು ಕಡೆ ಪವರ್ ಸ್ಟಾರ್ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ  ಸದ್ಯದಲ್ಲೇ ಆಗುವುದಿಲ್ಲ ಅಂತಿದ್ದಾರೆ ಪುನೀತ್ ಆಪ್ತರು. ಆದರೆ, ನಿರ್ಮಾಪಕ ಎನ್ ಕುಮಾರ್ ಈ ಸಿನಿಮಾವನ್ನ ದರ್ಶನ್ ಜೊತೆಗೆ ಮಾಡ್ತಾರಾ ಅಥವಾ ಪುನೀತ್ ರಾಜ್ ಕುಮಾರ್ ಜೊತೆ ಮಾಡ್ತಾರಾ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

ರವಿಕುಮಾರ್ ಎಂಕೆ ಎಂಟರ್ ಟೈನ್ ಮೆಂಟ್ ಬ್ಯೂರೋ ಸುವರ್ಣ ನ್ಯೂಸ್ ಬೆಂಗಳೂರು

 

 

 

 

 

 

 

 

 

 

 

 

 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Bossನಲ್ಲಿ ಅಶ್ವಿನಿ ಗೌಡ ವ್ಯವಹಾರದ ಕುರಿತು ಯಾರೂ ತಿಳಿಯದ ಬಹುದೊಡ್ಡ ಸೀಕ್ರೆಟ್​ ಬಿಚ್ಚಿಟ್ಟ ಅಭಿಷೇಕ್​!
ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಆಡಿರೋ ಮಾತು ಯಾರ ವಿರುದ್ಧ? ವಿಜಯಲಕ್ಷ್ಮೀ ದರ್ಶನ್ ಮಾತಿನ ಮರ್ಮವೇನು?