
ಬೆಂಗಳೂರು (ಮಾ.20): ಅನೂಪ್ ಭಂಡಾರಿ ನಿರ್ದೇಶನದ ‘ರಾಜರಥ’ ಮಾರ್ಚ್ 23 ರಂದು ತೆರೆಕಾಣಲಿದೆ. ಇಷ್ಟು ದಿನ ತಣ್ಣಗಿದ್ದ ತಂಡ ಇದ್ದಕ್ಕಿದ್ದಂತೆ ಪ್ರಚಾರಾಂದೋಲಕ್ಕೆ ಇಳಿದಿದೆ. ಆ ಪ್ರಚಾರದಲ್ಲಿ ಚಿತ್ರರಸಿಕರನ್ನೂ
ಒಳಗೊಳ್ಳಲು ನಿರ್ಧರಿಸಿದೆ.
‘ಮೈ ರಾಜರಥ’ ಸೆಲ್ಫಿ ಕಾಂಟೆಸ್ಟ್ ಎನ್ನುವ ಸ್ಪರ್ಧೆ. ಪ್ರೇಕ್ಷಕರು ತಮ್ಮ ನೆಚ್ಚಿನ ವಾಹನಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಬೇಕು. ಆ ಫೋಟೋವನ್ನು ‘ರಾಜರಥ’ದ ಅಧಿಕೃತ ಟ್ವಿಟರ್ ಅಥವಾ ಫೇಸ್‌ಬುಕ್ ಅಕೌಂಟ್‌ಗೆ ಟ್ಯಾಗ್ ಮಾಡಬೇಕು. ಅದೃಷ್ಟವಂತ ಹತ್ತು ಮಂದಿಗೆ ಬಹುಮಾನ. ಗೆದ್ದವರಿಗೆ ಸೆಲೆಬ್ರಿಟಿಗಳ ಜೊತೆ ಸಿನಿಮಾ ನೋಡುವ ಅವಕಾಶ. ಇದರ ಮೊದಲ ಸೆಲ್ಫಿ ಕ್ಲಿಕ್ಕಿಸಿದ್ದು ಪುನೀತ್. ಸಂಜೆ ಹೊತ್ತಿಗೆ ಹತ್ತು ಸಾವಿರ ಮಂದಿ ಫೋಟೋ ಕ್ಲಿಕ್ಕಿಸಿ ಕಳುಹಿಸಿದ್ದಾರೆ. ಪುನೀತ್ ತಮ್ಮ ನೆಚ್ಚಿನ ಸೈಕಲ್ ಜೊತೆ ಸೆಲ್ಫಿ ತೆಗೆದು ಆಂದೋಲನ ಉದ್ಘಾಟಿಸಿದರು. ಇನ್ನಷ್ಟು ಸ್ಟಾರ್‌ಗಳು ಅದರಲ್ಲಿ ಜೊತೆಯಾಗಲಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.