
ಬೆಂಗಳೂರು (ಡಿ. 14): ಪ್ರತಿಯೊಬ್ಬ ಸಾಧಕರ ಹಿನ್ನಲೆ ನೋಡಿದರೆ ಅವರ ಹಿಂದೆ ಒಬ್ಬೊಬ್ಬರು ಸಪೋರ್ಟ್ ಆಗಿ ಇರುತ್ತಾರೆ. ಅದು ತಾಯಿ, ತಂದೆ, ಪತ್ನಿ, ಗೆಳೆಯರು ಯಾರೇ ಆಗಿರಬಹುದು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಪವರ್ ಆಗಿ, ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಅಶ್ವಿನಿ ಪುನೀತ್. ಮೊದಲ ಬಾರಿಗೆ ಪುನೀತ್ ಹಾಗೂ ಅಶ್ವಿನಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
’ದಿ ಟಾಕ್ ವಿತ್ ಪ್ರೀತಿ ಶೆಣೈ’ ಎನ್ನುವ ಶೋ ನಲ್ಲಿ ಪುನೀತ್, ಅಶ್ವಿನಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪುನೀತ್ ಪತ್ನಿ ಅಶ್ವಿನಿ ಪಿಆರ್ ಕೆ ಪ್ರೊಡಕ್ಷನ್ ನ ಪ್ರೊಡ್ಯೂಸರ್ ಆಗಿದ್ದಾರೆ. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂದು ಪಿಆರ್ ಕೆ ಪ್ರೊಡಕ್ಷನ್ ನನ್ನು ಆರಂಭಿಸಿದ್ದಾರೆ. ಅಶ್ವಿನಿ ಸಿನಿಮಾ ಹಿನ್ನಲೆಯವರಲ್ಲವಾದರೂ ಸಿನಿಮಾಗಳ ಬಗ್ಗೆ ಒಳ್ಳೆಯ ಜ್ಞಾನವಿದೆ. ಸಿಕ್ಕಾಪಟ್ಟೆ ಪುಸ್ತಕಗಳನ್ನು ಓದುವ ಹವ್ಯಾಸ ಇರುವ ಇವರಿಗೆ ಯಾರಾದರೂ ಕಥೆ ಹೇಳಿದರೆ ಅದನ್ನು ಬೇಗನೇ ಗ್ರಹಿಸುತ್ತಾರೆ. ಪುನೀತ್ ಗೆ ಅದು ಹೊಂದುತ್ತಾ, ಇಲ್ಲವಾ ಎಂದು ವಿಮರ್ಶಿಸುತ್ತಾರೆ.
ಅದೇ ರೀತಿ ಪುನೀತ್ ಕೂಡಾ ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಎದುರಿಸಿದ ಕಷ್ಟಗಳು, ತೆರೆಮೇಲೆ, ತೆರೆಹೊರಗೆ ಹೇಗಿತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ತಾವು ಮಾಡುತ್ತಿರುವ ಸಮಾಜ ಸೇವೆ ಬಗ್ಗೆ ಹೇಳಿದ್ದಾರೆ. ಪುನೀತ್- ಅಶ್ವಿನಿ ಸ್ಯಾಂಡಲ್ ವುಡ್ ನ ಪವರ್ ಕಪಲ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ದಿ ಟಾಕ್ ವಿತ್ ಪ್ರೀತಿ ಶೆಣೈ ಜೊತೆ ಪುನೀತ್-ಅಶ್ವಿನಿ ಮಾತುಕತೆ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.