
ಮುಂಬೈ (ಜು. 16): ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜಾನ್ಸ್ ಇಬ್ಬರ ನಡುವೆ ಪ್ರೀತಿ, ಪ್ರೇಮ ಇದೆ ಎಂಬುದು ಸಾಕಷ್ಟು ಹಿಂದಿನಿಂದಲೇ ಚಾಲ್ತಿಯಲ್ಲಿದ್ದ ಸುದ್ದಿ. ಆದರೆ ಈಗ ಲೇಟೆಸ್ಟ್ ಆಗಿ ಪ್ರಿಯಾಂಕಾ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಮಾತು ಇವರಿಬ್ಬರ ಬಂಧ ಮತ್ತಷ್ಟು ಗಟ್ಟಿಯಾಗುತ್ತಿದೆ ಎನ್ನುವುದನ್ನು ಸಾಬೀತು ಮಾಡುವಂತಿದೆ.
ಪ್ರಿಯಾಂಕಾ ನಿಕ್ ಜಾನ್ಸ್ ಜೊತೆಗೆ ದೇಶ ವಿದೇಶವೆಲ್ಲವನ್ನೂ ಸುತ್ತಿದ್ದಾಯಿತು. ಪ್ರಿಯಾಂಕಾ ಮನೆಯ ಸಮಾರಂಭಕ್ಕೆ ನಿಕ್ ಜಾನ್ಸ್ ಬಂದು ಹೋಗಿಯಾಗಿತ್ತು. ಪರಸ್ಪರ ಮನೆಯವರೆಲ್ಲಾ ಪರಿಚಯವೂ ಆಗಿದ್ದರು. ಇಬ್ಬರ ಬಳಿಯಲ್ಲೂ ಒಂದೇ ರಿಂಗ್ ಕಾಣಿಸಿಕೊಂಡು ಎಂಗೇಜ್‌ಮೆಂಟ್ ಆಗಿಯೇ ಹೋಗಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಆದರೆ ಈಗ ಮೊದಲ ಬಾರಿಗೆ ತನ್ನ ಸಂಬಂಧದ ಬಗ್ಗೆ ಪ್ರಿಯಾಂಕಾ ಮೌನ ಮುರಿದಿದ್ದಾರೆ.
‘ನಾನು ನಿಕ್ ಜಾನ್ಸ್ ಪರಸ್ಪರ ಚೆನ್ನಾಗಿ ತಿಳಿದುಕೊಳ್ಳುವ ಹಂತದಲ್ಲಿ ಇದ್ದೇವೆ’ ಎಂದಷ್ಟೇ ಹೇಳಿ ಮುಂದೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಕ್ವಶ್ಚನ್ ಮಾರ್ಕ್ ಇಟ್ಟಿದ್ದಾರೆ. ಅದೇನೇ ಆದರೂ ಈಗ ನಿಕ್ ಜಾನ್ಸ್ ಮತ್ತು ಪ್ರಿಯಾಂಕಾ ಚೋಪ್ರಾ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವ ಹಂತದಲ್ಲಿ ಇದ್ದಾರೆ ಎಂದುದು ಸ್ವತಃ ಪ್ರಿಯಾಂಕಾರಿಂದಲೇ ಬಹಿರಂಗವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.