
ಬಾಲಿವುಡ್ ನಟಿ ಕಂಗನಾ ರಾಣಾವತ್ ಮೇಲೆ ನಿಷೇಧ ಹೇರುವ ಎಂಟರ್ ಟೇನ್ಮೆಂಟ್ ಜರ್ನಲಿಸ್ಟ್ ಗಿಲ್ಡ್ ನಿರ್ಧಾರವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಬೆಂಬಲಿಸಿದೆ.
ಪತ್ರಕರ್ತ ಜಸ್ಟಿನ್ ರಾವ್ ಜೊತೆ ಕಂಗನಾ ನಡೆದುಕೊಂಡ ರೀತಿಗೆ ಖಂಡನೆ ವ್ಯಕ್ತಪಡಿಸಿದೆ. ಮಾಧ್ಯಮದವರ ಮೇಲೆ ಅನಾಗರೀಕವಾಗಿ ಕಂಗನಾ ನಡೆದುಕೊಂಡಿದ್ದನ್ನು ಖಂಡಿಸಿದೆ. ಜೊತೆಗೆ ಇಂತಹ ನಡವಳಿಕೆಯನ್ನು ಒಪ್ಪಲಾಗುವುದಿಲ್ಲ ಎಂದಿದೆ.
ನಡೆದಿದ್ದೇನು?
ಕಂಗನಾ ರಾಣಾವತ್ ಜಡ್ಜ್ ಮೆಂಟಲ್ ಕ್ಯಾ ಹೇ ಸಿನಿಮಾದ ಪ್ರಮೋಶನ್ ಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಆ ವೇಳೆ ಪತ್ರಕರ್ತ ಜಸ್ಟಿನ್ ರಾವ್ ಪ್ರಶ್ನೆ ಕೇಳಲು ಆರಂಭಿಸಿದಾಗ ಕಂಗನಾ ಗರಂ ಆಗಿದ್ದಾರೆ.
ಮಣಿಕರ್ಣಿಕಾ ಸಿನಿಮಾ ಬಿಡುಗಡೆಯಾದಾಗ ಜಸ್ಟೀನ್ ಚಿತ್ರದ ಬಗ್ಗೆ ನೆಗೇಟಿವ್ ಆಗಿ ಬರೆದಿದ್ದರು. ಆ ಸಿಟ್ಟನ್ನು ಜಸ್ಟೀನ್ ಮೇಲೆ ತೋರಿಸಿದ್ದಾರೆ. ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಪಕ್ಕದಲ್ಲೇ ಇದ್ದ ನಿರ್ಮಾಪಕಿ ಏಕ್ತಾ ಕಪೂರ್ , ರಾಜ್ ಕುಮಾರ್ ರಾವ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಇಬ್ಬರೂ ಸುಮ್ಮನಾಗಲಿಲ್ಲ. ಇಬ್ಬರ ನಡುವಿನ ಜಗಳ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಂಗನಾ ಹಾಗೂ ಏಕ್ತಾ ಕಪೂರ್ ಘಟನೆ ಬಗ್ಗೆ ಕ್ಷಮೆಯಾಚಿಸಬೇಕೆಂದು ಸಿನಿಮಾ ಪತ್ರಕರ್ತರ ಕೂಟ ಒತ್ತಾಯಪಡಿಸಿತ್ತು. ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್ ಬಾಲಾಜಿ ಟೆಲಿಫಿಲ್ಮ್ ಕ್ಷಮೆಯಾಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.