'ಪ್ರೇಮದ ಊರಲಿ' ಸಿನಿಮಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ ಅದೊಂದು ಊರು!

Published : Oct 11, 2026, 08:22 PM IST
Premada Oorali Seegegudda

ಸಾರಾಂಶ

'ಪ್ರೇಮದ ಊರಲಿ' ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ, ಚಿತ್ರೀಕರಣಗೊಂಡ ಹಾಸನ ಜಿಲ್ಲೆಯ ಸೀಗೇಗುಡ್ಡಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಆದರೆ, ಹಠಾತ್ ಜನಸಂದಣಿಯಿಂದಾಗಿ ಈ ಸುಂದರ ತಾಣದಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದೆ.

'ಪ್ರೇಮದ ಊರಲಿ' (Premada Oorali) .. ಕನ್ನಡಕ್ಕೆ ಮತ್ತೊಮ್ಮೆ ಒಂದೊಳ್ಳೆ ಸಿನಿಮಾ ಸಿಕ್ಕಾಗಿದೆ. ಸಿನಿ ರಸಿಕರು ಪ್ರೇಮದ ಊರನ್ನು ಮೆಚ್ಚಿಕೊಂಡಿದ್ದಾಗಿದೆ. ಥಿಯೇಟರ್‍‌ಗಳು ಹೌಸ್ ಫುಲ್ ಆಗಿವೆ. ಸಿನಿಮಾ ಮಂದಿರಗಳಿಗೆ ಹೊಸ ಕಳೆ ಬಂದಾಗಿದೆ. ಗಣ್ಯರು ಭೇಷ್ ಎಂದಿದ್ದೂ ಆಗಿದೆ. ವಿದೇಶದಲ್ಲೂ ಹೆಂಗಿದೆ ನೋಡೇ ಬಿಡುವಾ ಅಂತಾ ಫಾರಿನ್ ಥಿಯೇಟರ್‍‌ಗಳಲ್ಲಿ ಹಾಕಿಸಿ ರಂಜಿದ್ದೂ ಆಗಿದೆ. ಈಗ ಶೂಟಿಂಗ್ ನಡೆದ ಸ್ಥಳವೊಂದು ಸಖತ್ ಫೇಮಸ್ ಆಗ್ತಿದೆ.

ಅದ್ಯಾವ ಊರು?

ಪ್ರೇಮದ ಊರಿನ ಸಿನಿಮಾ.. ನಮ್ಮ ಮನಸ್ಸನ್ನೂ ನಿಮ್ಮ ಮನಸ್ಸನ್ನೂ ಕದ್ದಿದೆ ನಿಜ. ಜೊತೆಗೆ ಚಿತ್ರದಲ್ಲಿ ಕಾಣುವ ಇನ್ನೊಂದು ಊರ ಇದೀಗ ಪ್ರವಾಸಿಗರ ಮನಸ್ಸು ಕದ್ದಿದೆ. ಅದು ಬೇರೆ ಯಾವುದೂ ಅಲ್ಲ. ನಮ್ಮದೇ ರಾಜ್ಯದ ಹಾಸನ ಜಿಲ್ಲೆಯಲ್ಲಿರುವ ಒಂದು ಸ್ಥಳ. ಸಿನಿಮಾ ಫೇಮಸ್ ಆಗ್ತಿದ್ದಂತೆಯೇ ಚಿತ್ರೀಕರಣ ನಡೆದ ಸ್ಥಳ ಪ್ರಸಿದ್ಧ ಸೀಗೇಗುಡ್ಡಕ್ಕೆ ಮತ್ತೊಮ್ಮೆ ಜನ ಮುಗಿ ಬೀಳ್ತಿದ್ದಾರೆ. ಸಿನಿಮಾ ನೋಡಿದ ಬಹುತೇಕ ಪ್ರೇಕ್ಷಕರಿಗೆ ಸೀಗೇಗುಡ್ಡದ ಮೇಲೂ ಸಾಣೆ ಲವ್ ಆಗಿದೆ. ಅದೇ ಕಾರಣಕ್ಕೆ ಸೀಗೇಗುಡ್ಡವನ್ನೂ (Seege Gudda) ಕಣ್ತುಂಬಿಕೊಂಡು ಬರೋಣ ಅಂತಾ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಆಶ್ಚರ್ಯಕ್ಕೆ ಒಳಗಾದ ಸ್ಥಳೀಯ ಜನ

ಸೀಗೇಗುಡ್ಡ ಮೊದಲಿನಿಂದಲೂ ಪ್ರಸಿದ್ಧಿಯೇನೋ ಪಡೆದಿದೆ. ಆದರೆ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಕಮ್ಮಿ ಆಗಿತ್ತು. ಈಗ ಇದ್ದಕ್ಕಿದ್ದಂತೆ ಗುಡ್ಡ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಾಗ್ತಿದೆ. ಯಾಕೆ ಇಷ್ಟೊಂದು ಜನ ಬರ್ತಿದ್ದಾರೆ ಎಂದು ಸ್ಥಳೀಯರು ಓರೆ ಹೆಚ್ಚಿದಾಗ ಗೊತ್ತಾಗಿದ್ದು, ಇದು 'ಪ್ರೇಮದ ಊರಲಿ' ಸಿನಿಮಾ ಎಫೆಕ್ಟ್ ಅಂತಾ. ಆದರೆ ಇಲ್ಲೊಂದು ಸಮಸ್ಯೆ ಕೂಡ ಎದುರಾಗಿದೆ. ಅದು ಏನು ಅಂತಾ ನೋಡೋದಾದ್ರೆ ಸೇಗೇಗುಡ್ಡದಲ್ಲಿ ಇಲ್ಲ ಮೂಲಕ ಸೌಕರ್ಯ.

ಕೆಲವು ವರದಿಗಳ ಪ್ರಕಾರ.. ಹಠಾತ್ ಜನಸಂದಣಿ ನಿಯಂತ್ರಿಸಲು ಇಲ್ಲಿ ಕಷ್ಟವಾಗ್ತಿದೆಯಂತೆ. ಸ್ಥಳೀಯ ಆಡಳಿತ ಪ್ರವಾಸಿಗರಿಗೆ ಮೂಲ ಸೌಕರ್ಯ ಹಾಗೂ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದರಿಂದ ಪ್ರಸಿದ್ಧ ಪ್ರವಾಸಿ ತಾಣವು ಸೌಲಭ್ಯಗಳಿಲ್ಲದೇ ಅವ್ಯವಸ್ಥೆಯ ಗೂಡಾಗಿ ಬದಲಾಗುತ್ತಿದೆ ಎಂಬುದು ಹಲವರ ಆರೋಪವಾಗಿದೆ.

ಸೀಗೇಗುಡ್ಡದ ವಿಶೇಷತೆ ಏನು?

ಸೀಗೇಗುಡ್ಡ ಹಾಸನದಿಂದ ಸುಮಾರು 15–20 ಕಿ.ಮೀ ದೂರದಲ್ಲಿದೆ. ಭೂ ಲೋಕದ ಸ್ವರ್ಗದಂತಿರುವ ಸೀಗೆಗುಡ್ಡ, ಪ್ರಕೃತಿ ಸೌಂದರ್ಯ ಮತ್ತು ಶಿವನ ಭಕ್ತಿಯನ್ನು ಒಂದೇ ಕಡೆ ಅನುಭವಿಸಬಹುದಾದ ಸುಂದರ ತಾಣವಾಗಿದೆ. ಸೀಗೆಗುಡ್ಡ ಕಾವಲ್ / ಸಿದ್ಧೇಶ್ವರ ಬೆಟ್ಟ ಎಂದೂ ಕರೆಯಲ್ಪಡುವ ಈ ಪ್ರದೇಶದಲ್ಲಿರುವ ಶ್ರೀ ಮಲೆಮಲ್ಲೇಶ್ವರ ಸ್ವಾಮಿ ದೇವಸ್ಥಾನ, ಇಲ್ಲಿನ ಭವ್ಯ ಶಿವನ ಮೂರ್ತಿ, ಹಸಿರು ಬೆಟ್ಟಗಳು, ತಂಪಾದ ವಾತಾವರಣ ಮತ್ತು ಸುತ್ತಲಿನ ಗಾಳಿ ಯಂತ್ರಗಳಿಂದ ಪ್ರಮುಖ ಆಕರ್ಷಣೆ. ಸ್ಥಳೀಯ ಪೌರಾಣಿಕ ನಂಬಿಕೆಗಳ ಪ್ರಕಾರ.. ಈ ಬೆಟ್ಟಕ್ಕೆ ಅರ್ಜುನನ ಬಾಣದಿಂದ ಜಿನುಗಿದ ನೀರು ಹಾಗೂ ಋಷಿಮುನಿಗಳ ತಪಸ್ಸಿಗೆ ಸಂಬಂಧಿಸಿದ ಕಥೆಗಳಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ತಪ್ಪುಗಳು ನಂದೇ ಆಗಿದ್ವು, ನಂಗೆ ಕೈಕೋಳ ಹಾಕುತ್ತಿದ್ದಾಗ ಅಪ್ಪ ಅಳುತ್ತಿದ್ದರು' ಕಂಬಿ ಎಣಿಸಿದ ದಿನ ನೆನೆದು ಕಣ್ಣೀರಿಟ್ಟ ದತ್
ಪ್ರೇಮದ ಊರಲಿ ಸಿನಿಮಾದ ಯಶಸ್ಸು, ಕೊಡಗಿನ ತಪಸ್ವಿನಿ ಪೂಣಚ್ಚ ನಟನೆಗೆ ರಶ್ಮಿಕಾ ಮಂದಣ್ಣ ಫಿದಾ