
ಬೆಂಗಳೂರು (ಅ.23) ಪ್ರೇಮದ ಊರಲಿ ಸಿನಿಮಾ ಕನ್ನಡದ ಸೂಪರ್ ಹಿಟ್ ಸಿನಿಮಾ ಮಾತ್ರವಲ್ಲ, ಹಲವು ದಿಗ್ಗಜ ಸಿನಿಮಾ ದಾಖಲೆಯನ್ನೇ ಪುಡಿ ಮಾಡಿದೆ. ಅತೀ ಕಡಿಮೆ ಬಜೆಟ್‌ನಲ್ಲಿ ದಾಖಲೆಯ ಲಾಭ ಕಂಡ ದೇಶದ ಸಿನಿಮಾ ಪಟ್ಟಿಯಲ್ಲೂ ಪ್ರೇಮದ ಊರಲಿ ಸ್ಥಾನ ಪಡೆದಿದೆ. ಸಿಂಪಲ್ ಸಿನಿಮಾ, ಆಡಂಬರವಿಲ್ಲ, ಸ್ಟಾರ್ ನಾಯಕ ನಾಯಕಿಯರಿಲ್ಲ, ಸಿನಿಮಾ ಬಿಡುಗಡೆಗೂ ಒಂದೇ ದಿನ ಮೊದಲು ಇಡೀ ತಂಡಕ್ಕೆ ಶಾಕ್ ಎದುರಾಗಿತ್ತು. ಎಲ್ಲಾ ಸಿನಿಮಾ ತಂಡಗಳಂತೆ ಒಂದಷ್ಟು ಥಿಯೇಟರ್ ಹಾಗೂ ಶೋ ನಿರೀಕ್ಷಿಸಿದ್ದ ಸಿನಿಮಾ ಬಿಡುಗಡೆ ವೇಳೆ, ಇಷ್ಟೇ ಶೋನಾ, ಇಷ್ಟೇ ದಿಯೇಟರ್‌ನಲ್ಲಿ ನಮ್ಮ ಸಿನಿಮಾ ಬಿಡುಗಡೆನಾ ಎಂದು ಸಿನಿಮಾ ತಂಡ ತೀವ್ರ ನಿರಾಸೆ ಎದುರಿಸಿತ್ತು. ಈ ವೇಳೆ ನಿರ್ದೇಶಕ ಮನೋಕ್ ಕುಮಾರ್ ನಿರ್ಮಾಪಕರ ಜೊತೆ ತುರ್ತು ಸಭೆ ನಡೆಸಿದ ಆಡಿದ ಒಂದು ಮಾತು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಇತಿಹಾಸ ನಿರ್ಮಿಸಿದೆ.
ಏಷ್ಯಾನೆಟ್ ಸುವರ್ಣನ್ಯೂಸ್ ಸಂದರ್ಶನದಲ್ಲಿ ಪ್ರೇಮದ ಊರಲಿ ಸಿನಿಮಾ ನಿರ್ದೇಶಕ ಮನೋಕ್ ಕುಮಾರ್ ಹಲವು ರೋಚಕ ಮಾಹಿತಿ ಬಿಟ್ಟಿಟ್ಟಿದ್ದಾರೆ. ಪ್ರೇಮದ ಊರಲಿ ಸಿನಿಮಾ ಹಲವು ಅಡೆ ತಡೆಗಳ ಮೂಲಕ ಸಾಗಿ ಬಿಡುಗಡೆಗೆ ಸಜ್ಜಾಗಿತ್ತು. ಎಲ್ಲಾ ಸಿನಿಮಾ ತಂಡದಂತೆ ನಾವು ಕೂಡ ತುಂಬಾ ಶೋ, ಥಿಯೇಟರ್ ನಿರೀಕ್ಷೆ ಮಾಡಿದ್ದೆವು. ನಮ್ಮ ಸಿನಿಮಾ ಚೆನ್ನಾಗಿತ್ತು. ಅಪ್ಪಡ ಕನ್ನಡಿಗರ ಸಿನಿಮಾ ಇದು. ಕತೆ, ಪ್ರೊಡಕ್ಷನ್, ಕ್ಯಾಮೆರಾ ವರ್ಕ್ ಸೇರಿದಂತೆ ಎಲ್ಲವೂ ಚೆನ್ನಾಗಿತ್ತು. ಹೀಗಾಗಿ ನಾವು ತುಂಬಾ ಶೋ ನಿರೀಕ್ಷೆ ಮಾಡಿದ್ದೆವು. ಆದರೆ ಸಿನಿಮಾ ಬಿಡುಗಡೆಗೆ ನಾಲ್ಕೈದು ದಿನ ಇರುವಾಗ ಸಿನಿಮಾ ಶೋ, ಥಿಯೇಟರ್ ಸಂಖ್ಯೆ ಕಡಿಮೆಯಾಗುತ್ತಾ ಬಂತು. ನಾಳೆ ಸಿನಿಮಾ ಬಿಡುಗಡೆಯಾಗಬೇಕು, ಇವತ್ತು ನೋಡಿದಾಗ ನಮಗೆ ಆಘಾತವಾಗಿತ್ತು. ನಮ್ಮ ಸಿನಿಮಾಗೆ ಇಷ್ಟೇ ಥಿಯೇಟರ್‌ನಲ್ಲಿದೆಯಾ, ಇಷ್ಟೇ ಶೋನಾ ಎಂದು ತೀವ್ರ ನಿರಾಸೆಯಾಗಿತ್ತು.
ಇಡೀ ತಂಡಕ್ಕೆ ನೋವಾಗಿತ್ತು. ತಕ್ಷಣವೇ ನಿರ್ಮಾಪಕರ ಜೊತೆಯಲ್ಲಿ ಮಾತುಕತೆ ನಡೆಸಿದೆ. ನಮಗೆ ಎಷ್ಟು ಶೋ, ಎಷ್ಟು ಥಿಯೇಟರ್ ಸಿಕ್ಕಿದೆಯಾ ಇರಲಿ. ಅಷ್ಟೇ ಸಾಕು, ಎಷ್ಟು ಜನ ಬರ್ತಾರೋ ಬರಲಿ. ಬಂದವರು ಸಿನಿಮಾ ಒಪ್ಪಿಕೊಳ್ಳುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗಿ ಅವರ ಬಾಯಿಂದ ಬಾಯಿಗೆ ಸಿನಿಮಾ ಪ್ರಚಾರ ಆಗುತ್ತೆ. ಮುಂದೆ ಏನಾಗುತ್ತೆ ಎದುರಿಸೋಣ ಎಂದು ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ. ನಿರ್ದೇಶಕ ಮನೋಜ್ ಕುಮಾರ್ ಮಾತಿನಿಂದ ನಿರ್ಮಾಪಕರು ಧೈರ್ಯ ತಂದುಕೊಂಡರು. ಸಿನಿಮಾ ಬಿಡುಗಡೆಯಾಯಿತು. ಬಳಿಕ ಇತಿಹಾಸವೇ ನಿರ್ಮಾಣವಾಯಿತು ಎಂದು ಮನೋಜ್ ಕುಮಾರ್ ಹೇಳಿದ್ದಾರೆ.
ಪ್ರೇಮದ ಊರಲಿ ಸಿನಿಮಾದ ಹೀರೋ, ಹೀರೋಯಿನ್, ಇತರ ತಾರಾ ಬಳಗ, ಟೆಕ್ನಶಿಯನ್ ಸೇರಿದಂತೆ ಇಡೀ ತಂಡವೇ ಹೊಸದು. ಈ ಸಿನಿಮಾದಲ್ಲಿ ರಂಗಾಯಣ ರಘು ಸರ್ ಹೊರತುಪಡಿಸಿದರೆ, ಇಡೀ ಸಿನಿಮಾ ತಂಡವೇ ಹೊಸದು. ನನ್ನ ಎರಡನೇ ಸಿನಿಮಾ ಆದರೂ ನಾನು ಕೂಡ ಹೊಸಬ. ಆದರೆ ಶೋ ಹೆಚ್ಚಿರಲಿಲ್ಲ, ಥಿಯೇಟರ್ ಸಿಗದೆ ಪರಾದಾಡಿದ್ದೆವು. ಏನೇ ಇರಲಿ, ನಮ್ಮ ಸಿನಿಮಾ ಜನರಿಗೆ ಇಷ್ಟವಾಗುತ್ತೆ ಅನ್ನೋ ನಂಬಿಕೆ ಇತ್ತು. ಜೊತೆಗೆ ಸಿನಿಮಾದ ಹಾಡುಗಳು ಹಿಟ್ ಆಗಿತ್ತು. ಪ್ರೇಮದ ಊರಲಿ ಹಾಡಿನ ರೀಲ್ಸ್ 1.5 ಲಕ್ಷಕ್ಕೂ ಹೆಚ್ಚು ವೀವ್ಸ್ ದಾಖಲಾಗಿತ್ತು. ಏರುಪೇರು ಹಾಡು ಸೇರಿದಂತೆ ಮೂರು ಹಾಡುಗಳು ಹಿಟ್ ಆಗಿತ್ತು. ಹೀಗಾಗಿ ಸಿನಿಮಾಗೆ ಕಡಿಮೆ ಶೋ ಇದ್ದರೂ ಗೆಲ್ಲುತ್ತೆ ಅನ್ನೋ ನಂಬಿಕೆ ಇತ್ತು ಎಂದು ಮನೋಜ್ ಕುಮಾರ್ ಹೇಳಿದ್ದಾರೆ.
ಪ್ರೇಮದ ಊರಲಿ ಸಿನಿಮಾವನ್ನು ಜನರು ಇಷ್ಟಪಟ್ಟಿದ್ದಾರೆ. ಜನ ಅಪ್ಪಿಕೊಂಡು ಮೆರೆಸಿದ್ದಾರೆ, ಈಗಲೂ ಮರೆಸುತ್ತಿದ್ದಾರೆ. ಇದು ಜನರು ಕೊಟ್ಟ ಪ್ರೀತಿ ಎಂದ ಮನೋಕ್ ಕುಮಾರ್ ಹೇಳಿದ್ದಾರೆ. ಇಡೀ ಸಿನಿಮಾ ತಂಡ ನಿರಂತರವಾಗಿ ಕೆಲಸ ಮಾಡಿದೆ. ಇದೀಗ ಯಶಸ್ಸನ್ನು ಹೇಗೆ ವ್ಯಕ್ತಪಡಿಸಬೇಕು ಅನ್ನೋದು ಗೊತ್ತಾಗುತ್ತಿಲ್ಲ ಎಂದು ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.