
ಹೈದ್ರಾಬಾದ್(ಜ.09): ಟಾಲಿವುಡ್‌ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ‘ಬಾಹುಬಲಿ’ ಸೆಟ್‌ನಿಂದ ಔಟ್ ಆಗಿದ್ದಾರೆ. ನಿರ್ದೇಶಕ ರಾಜ್‌ವೌಳಿ ಅವರೇ ಪ್ರಭಾಸ್‌ಗೆ ಗೌರವಯುತವಾಗಿ ಚಿತ್ರೀಕರಣದಿಂದ ಗೇಟ್ ಪಾಸ್ ಕೊಟ್ಟಿದ್ದಾರೆ! ಹೀಗಂತ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ. ಹಾಗಂತ ಅನುಷ್ಕಾ ಶೆಟ್ಟಿ ಅವರಂತೆ ಪ್ರಭಾಸ್, ರೌಜ್‌ವೌಳಿ ಜತೆ ಜಗಳ ಆಡಿರಬಹುದೇ? ಅನ್ನುವ ಗುಮಾನಿ ಬೇಡ. ಯಾಕೆಂದರೆ ಇದು ಚಿತ್ರೀಕರಣ ವಿಷಯಕ್ಕೆ ಸಂಬಂಧಿಸಿದ್ದು. ಹೌದು, ಅಂದುಕೊಂಡಂತೆ ಪ್ರಭಾಸ್ ನಟನೆಯ ಭಾಗಗಳ ಚಿತ್ರೀಕರಣ ಮುಗಿಸಿದ್ದಾರೆ ಹೀಗಾಗಿ ‘ಬಾಹುಬಲಿ-2’ ಸೆಟ್‌ನಿಂದ ಪ್ರಭಾಸ್ ಹೊರ ಬಿದ್ದಿದ್ದಾರೆ. ಹೀಗೆ ತಮ್ಮ ನಟನೆಯ ದೃಶ್ಯಗಳ ಚಿತ್ರೀಕರಣ ಮುಗಿಸಿರುವ ಬಾಹುಬಲಿ, ‘ಐದು ವರ್ಷಗಳ ಜರ್ನಿ ಇಲ್ಲಿಗೆ ಮುಗಿದಿದೆ.
ಬಾಹುಬಲಿ-2 ಚಿತ್ರಕ್ಕಾಗಿ 613 ದಿನ ಕಾಲ್‌ಶೀಟ್ ಕೊಡಲಾಗಿತ್ತು. ನಿರ್ದೇಶಕರು ನನ್ನ ಕಾಲ್‌ಶೀಟ್ ಅನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ನನಗೆ ಸಂಬಂಸಿದ ಭಾಗಗಳನ್ನು ಚಿತ್ರೀಕರಣ ಮುಗಿಸಿದ್ದೇನೆ. ಒಂದು ಒಳ್ಳೆಯ ಫ್ಯಾಮಿಲಿಯಂತೆ ಎಲ್ಲರು ಸೇರಿ ಕೆಲಸ ಮಾಡಿದ್ದೇವೆ’ ಎಂದಿದ್ದಾರೆ ಪ್ರಭಾಸ್. ನಟ ಪ್ರಭಾಸ್ ಅವರ ಈ ಟ್ವೀಟ್ ನೋಡಿ ಅವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಯಾಕೆಂದರೆ ಪ್ರಭಾಸ್ ಚಿತ್ರೀಕರಣ ಮುಗಿಸಿದ್ದಾರೆ ಅಂದರೆ ‘ಬಾಹುಬಲಿ-2’ಗೆ ಬಾಗಶಃ ಚಿತ್ರೀಕರಣ ಮುಗಿದಿ ಎಂದರ್ಥ. ಈ ಕಾರಣಕ್ಕೆ ತಮ್ಮ ನೆಚ್ಚಿನ ನಾಯಕನ ಚಿತ್ರ ಇನ್ನೇನು ತೆರೆಗೆ ಬಂದೇ ಬಿಟ್ಟಿತು ಎನ್ನುವಷ್ಟು ಉತ್ಸಾಹ ಅವರದ್ದು. ಒಟ್ಟಿನಲ್ಲಿ ಬಾಹುಬಲಿ ಪ್ರಭಾಸ್, ಐತಿಹಾಸಿಕ ಯುದ್ಧ ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.