ಸಿನಿಮಾದಲ್ಲಿ ಬಯಲಾಗಲಿದೆ ಜಯಾ ಬದುಕು, ಕೊನೆ ಕ್ಷಣಗಳ ಸ್ಫೋಟಕ ಸತ್ಯ?

By Suvarna Web DeskFirst Published Jan 7, 2017, 4:49 PM IST
Highlights

ಎಲ್ಲವೂ ಹೊರಗೆ ಬರಲಿದೆ. ಅಮ್ಮನ ಬದುಕಿನ ಎಲ್ಲಾ ಸತ್ಯಗಳು ಸಿನಿಮಾದ ಮೂಲಕ ಹೊರ ಬರಲಿದೆ. ಅಮ್ಮನಿಲ್ಲದ ನೆಲದಲ್ಲಿ, ಅಮ್ಮನ ನೆನಪುಗಳ ಜೊತೆಗೆ, ಒಂದಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಆ ಎಲ್ಲಾ ಅನುಮಾನಗಳು, ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲಲಿದೆ ಅಮ್ಮನ ಸಿನಿಮಾ. ಅಮ್ಮನ ಸಿನಿಮಾ ರೆಡಿಯಾಗ್ತಿದೆ. ಒಂದು ಟೀಂ ಅಮ್ಮನನ್ನ ತೆರೆಗೆ ತರಲು ಒಳಗೊಳಗೇ ಕಸರತ್ತು ನಡೆಸ್ತಿದೆ.

ಅಮ್ಮನ ಸಿನಿಮಾ ಬರ್ತಿದೆ. ಜಯಾ ಬದುಕಿನ ನೋವಿನ ಕಥೆ ಸಿನಿಮಾ ಆಗ್ತಿದೆ. ಆ ಸಿನಿಮಾದಲ್ಲಿ ಅವರ ಬದುಕಿನ ಕ್ಷಣಗಳು ಅನಾವರಣಗೊಳ್ಳಲಿವೆ. ಅಮ್ಮ ಅನುಭವಿಸಿದ ನೋವುಗಳು. ಅಮ್ಮ ಹಾಕಿದ ಕಣ್ಣೀರಿನ ಕಥೆ, ಒಂಟಿಯಾಗಿ ಅತ್ತ ಅದೆಷ್ಟೋ ಸನ್ನಿವೇಶಗಳು, ಸಿಎಂ ಆಗಿದ್ರೂ, ಖುಷಿ ಇಲ್ಲದ ಅದೆಷ್ಟೋ ಕ್ಷಣಗಳು. ಎಲ್ಲವೂ ತೆರೆ ಮೇಲೆ ಅನಾವರಣಗೊಳ್ಳಲಿದೆ. ಆ ಸಿನಿಮಾ ನೋಡಿದ್ರೆ ಸಾಕು, ಅಮ್ಮನ ಬದುಕಲ್ಲಿ ಇಷ್ಟೆಲ್ಲಾ ನಡೆದಿತ್ತಾ ಅಂತ ನೀವೇ ಶಾಕ್​ ಆಗ್ತೀರ. ಅಂಥಾ ಹಿಡನ್​ ಸ್ಟೋರಿಯನ್ನ ಹೆಕ್ಕಿ ತೆಗೆಯಲಾಗ್ತಿದೆ. ಯಾಕಂದ್ರೆ ನಿಗೂಢತೆಗೂ ಮೀರಿದ ಬದುಕು ಜಯಲಲಿತಾರದ್ದು.

ಎಂಜಿಆರ್​ ಜಯಾ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿದ್ರು ಅಂತಾನೂ ಗೊತ್ತು.  ಆದರೆ ಇದೆಲ್ಲವನ್ನೂ ಹೊರತುಪಡಿಸಿ, ಸಾಕಷ್ಟು ನೋವಿನ ಮೂಟೆಗಳನ್ನು ಹೊತ್ತು ಬದುಕಿದ್ದರು ಜಯಲಲಿತಾ. ಎಲ್ಲರ ಮುಂದೆ ನಗು ನಗುತಾ ಬದುಕಿದ್ದ ಜಯಲಲಿತಾ, ಒಂಟಿಯಾಗಿದ್ದಾಗ, ಒಳಗೊಳಗೇ ಅದೆಷ್ಟು ಬಾರಿ ಕಣ್ಣೀರು ಹಾಕಿದ್ರೋ ಲೆಕ್ಕವೇ ಇಲ್ಲ.

ಮಾಜಿ ಕೇಂದ್ರ ಸಚಿವ ಖ್ಯಾತ ನಿರ್ಮಾಪಕ

ಎಲ್ಲವೂ ಹೊರಗೆ ಬರಲಿದೆ. ಅಮ್ಮನ ಬದುಕಿನ ಎಲ್ಲಾ ಸತ್ಯಗಳು ಸಿನಿಮಾದ ಮೂಲಕ ಹೊರ ಬರಲಿದೆ. ಅಮ್ಮನಿಲ್ಲದ ನೆಲದಲ್ಲಿ, ಅಮ್ಮನ ನೆನಪುಗಳ ಜೊತೆಗೆ, ಒಂದಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಆ ಎಲ್ಲಾ ಅನುಮಾನಗಳು, ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲಲಿದೆ ಅಮ್ಮನ ಸಿನಿಮಾ.

ಅಮ್ಮನ ಸಿನಿಮಾ ರೆಡಿಯಾಗ್ತಿದೆ. ಒಂದು ಟೀಂ ಅಮ್ಮನನ್ನ ತೆರೆಗೆ ತರಲು ಒಳಗೊಳಗೇ ಕಸರತ್ತು ನಡೆಸ್ತಿದೆ. ಅಮ್ಮನ ಬದುಕಿನ ಸೂಕ್ಷ್ಮ ವಿಚಾರಗಳನ್ನು ಕಲೆ ಹಾಕ್ತಿದೆ. ಆ ವಿಚಾರಗಳು, ಸನ್ನಿವೇಶಗಳನ್ನೇ ಆಧಾರವಾಗಿ ಇಟ್ಟುಕೊಂಡು, ಸಿನಿಮಾ ಮಾಡೋ ಆಲೋಚನೆಯಲ್ಲಿದೆ ಚಿತ್ರತಂಡ. ಅಂದ್ಹಾಗೆ ಅಮ್ಮನ ಲೈಫ್​ ಸ್ಟೋರಿಯನ್ನ ತೆರೆ ಮೇಲೆ ತರೋದಕ್ಕೆ ಸಜ್ಜಾಗಿದ್ದು ಯಾರು ಗೊತ್ತಾ? ತಮಿಳಿನ ಖ್ಯಾತ ನಿರ್ಮಾಪಕ ಮತ್ತು ಮಾಜಿ ಕೇಂದ್ರ ಸಚಿವ ದಸರಾಯ್​ ನಾರಾಯಣ ರಾವ್​.

ನಾರಾಯಣರಾವ್​  ಅಂತಿಂಥ ವ್ಯಕ್ತಿಯಲ್ಲ. ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರೋ ನಿರ್ಮಾಪಕ. ಜೊತೆಗೆ ರಾಜಕೀಯದಲ್ಲೂ ಸಾಕಷ್ಟು ಖ್ಯಾತಿಗಳಿಸಿರೋ ವ್ಯಕ್ತಿ. ಸಿನಿಮಾ ಮತ್ತು ರಾಜಕೀಯದ ನಂಟು ಹೊಂದಿರೋ ನಾರಾಯಣರಾವ್​, ಜಯಲಲಿತಾರನ್ನು ಹತ್ತಿರದಿಂದ ನೋಡಿದವರು. ಇದೇ ಕಾರಣಕ್ಕೆ, ಅಮ್ಮನ ಲೈಫ್​ ಸ್ಟೋರಿಯನ್ನ ಸಿನಿಮಾ ಮಾಡೋದಕ್ಕೆ ಸಜ್ಜಾಗಿದ್ದಾರೆ.

ಜಯಲಲಿತಾ ಮತ್ತು ಎಂಜಿಆರ್​ ನಡುವಿನ ಸಂಬಂಧ ಎಂಥಾದ್ದು? ಯಾಕೆ ಜಯಾ ತಮ್ಮ ಬದುಕಿನುದ್ದಕ್ಕೂ ಒಂಟಿಯಾಗಿದ್ರು? ಎಲ್ಲವನ್ನೂ ತ್ಯಜಿಸಿ ಅಮ್ಮ ವೈರಾಗಿಯಾಗಿದ್ದು ಯಾಕೆ? ಇದರ ಹಿಂದಿನ ಅಸಲಿ ಸತ್ಯ ಏನು? ಆಸ್ಪತ್ರೆಗೆ ಅಡ್ಮಿಟ್ ಆದ ನಂತರ ಒಳಗೆ ಏನೆಲ್ಲಾ ಆಯ್ತು? ಶಶಿಕಲಾ ಯಾಕೆ ಅಮ್ಮನನ್ನ ನೋಡೋದಕ್ಕೆ ಯಾರನ್ನೂ ಬಿಟ್ಟಿರಲಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ಸೂಕ್ಷ್ಮವಾಗಿ ಉತ್ತರಿಸಲಿದೆ ಸಿನಿಮಾ..

ನಟಿ ರಮ್ಯಾಕೃಷ್ಣ  ಜಯಮ್ಮನ ಪಾತ್ರದಲ್ಲಿ

ನಟಿ ಖುಷ್ಬು ಅಮ್ಮನ ಪಾತ್ರಕ್ಕೆ ಸೂಟ್​ ಆಗಬಹುದು ಅಂತ ಎಲ್ರೂ ಹೇಳ್ತಿದ್ದಾರೆ. ನೋಡೋದಕ್ಕೂ ಜಯಲಲಿತಾ ಥರಾನೇ ಇದ್ದಾರೆ. ಹೀಗಾಗಿ ಜಯಾ ಲೈಫ್​ ಸ್ಟೋರಿಯನ್ನ ಹೊತ್ತ ಸಿನಿಮಾಗೆ ಇವ್ರೇ ನಾಯಕಿಯಾದ್ರೂ ಅಚ್ಚರಿ ಇಲ್ಲ ಅಂತ ಹೇಳಲಾಗ್ತಿದೆ. ಇನ್ನುಳಿದಂತೆ, ಬಾಲಿವುಡ್​ನ ಕನಸಿನ ಕನ್ಯೆ ಹೇಮಾಮಾಲಿನಿ, ನಟಿ ತ್ರಿಶಾ, ಸಿಮ್ರಾನ್​ ಹೀಗೆ ಹಲವರ ಹೆಸರೂ ಅಮ್ಮನ ಪಾತ್ರಕ್ಕೆ ಕೇಳಿ ಬರ್ತಿದೆ. ಆದ್ರೆ ಇವರೆಲ್ಲರನ್ನೂ ಹೊರತು ಪಡಿಸಿ ಓರ್ವ ನಟಿಯ ಹೆಸರನ್ನು ಪ್ರಸ್ತಾಪಿಸಿದ್ದಾರೆ ನಿರ್ಮಾಪಕ ನಾರಾಯಣರಾವ್​. ಆ ನಟಿಯೇ ಅಮ್ಮನ ಪಾತ್ರ ಮಾಡ್ಬೇಕು. ಅವರೆ ಜಯಾ ಪಾತ್ರಕ್ಕೆ ಜೀವ ತುಂಬ್ತಾರೆ. ಅವರಿಂದಲೇ ಅಮ್ಮನ ಪಾತ್ರ ಮಾಡಿಸ್ತೀನಿ ಅಂತಿದ್ದಾರೆ ನಿರ್ಮಾಪಕರು. ಅಂದ್ಹಾಗೆ, ಅಮ್ಮನ ಪಾತ್ರಕ್ಕೆ ನಿರ್ಮಾಪಕರು ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ? ನಟಿ ರಮ್ಯಾಕೃಷ್ಣರನ್ನ.

ರಮ್ಯಾಕೃಷ್ಣ ಬರೀ ತೆಲುಗು ತಮಿಳಿನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಪ್ರಮುಖವಾದದ್ದು  ರಕ್ತಕಣ್ಣೀರು. ಮಾಂಗಲ್ಯಂ ತಂತುನಾನೇನಾ ಸಿನಿಮಾದಲ್ಲಿ ನಟ ರವಿಚಂದ್ರನ್​ ಜೊತೆಗೆ ಅಭಿನಯಿಸಿದ್ರು. ಗಡಿಬಿಡಿ ಗಂಡ ಅನ್ನೋ ಸಿನಿಮಾದಲ್ಲೂ ರವಿಚಂದ್ರನ್​ ಮತ್ತು ರಮ್ಯಾಕೃಷ್ಣ  ಜೋಡಿ ಮೋಡಿ ಮಾಡಿತ್ತು. ನಟ ಸುನೀಲ್ ರಾವ್​ ಜೊತೆಗಿನ ಬಾಬಾರೋ ರಸಿಕಾ ಸಿನಿಮಾದಲ್ಲೂ ಕಾಣಿಸಿಕೊಂಡು, ತಮಗೆ ನೀಡಿದ್ದ ಪಾತ್ರಕ್ಕೆ ಜೀವ ತುಂಬಿದ್ದರು. ಇದೆಲ್ಲದಕ್ಕಿಂತ ಕನ್ನಡದಲ್ಲಿ ಸದ್ದು ಮಾಡಿದ್ದು ರಮ್ಯಾಕೃಷ್ಣ ಅಭಿನಯದ ನೀಲಾಂಬರಿ.

 ಹೀಗೆ ಕನ್ನಡ, ತೆಲುಗು ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ಕಾಣಿಸಿಕೊಂಡ ಪ್ರತಿಭಾನ್ವಿತ ನಟಿ ರಮ್ಯಾಕೃಷ್ಣ ಹೊಸಬರ ನಡುವೆ ತಮ್ಮ ವರ್ಚಸ್ಸನ್ನು ಕುಗ್ಗದಂತೆ ನೋಡಿಕೊಂಡ ಮೋಹಕ ನಟಿ. ಇಂಥಾ ನಟಿ ಅಭಿನಯಿಸಿದ ಒಂದು ಪಾತ್ರ ನಿರ್ಮಾಪಕ ನಾರಾಯಣರಾವ್​ ಅವ್ರಿಗೆ ಇಷ್ಟ ವಾಗಿತ್ತು. ಅಷ್ಟಕ್ಕೂ ಆ ಪಾತ್ರ ಯಾವುದು ಗೊತ್ತಾ? ನಟ ರಜನಿಕಾಂತ್​ ಅಭಿನಯದ ಪಡೆಯಪ್ಪ ಸಿನಿಮಾದ ಪಾತ್ರ.

ರಜನಿಕಾಂತ್'ಗೆ ಸರಿ ಸಮಾನವಾಗಿ ಕಾಣಿಸಿಕೊಂಡಿದ್ದ ನಟಿ

ಪಡೆಯಪ್ಪ ಸಿನಿಮಾದಲ್ಲಿ ರಜನಿಕಾಂತ್​ಗೆ ಸರಿ ಸಮಾನವಾಗಿ ಕಾಣಿಸಿಕೊಂಡಿದ್ದ ನಟಿ ರಮ್ಯಾಕೃಷ್ಣ, ಅಕ್ಷರಶಃ ಎಲ್ಲರಿಗೂ ಇಷ್ಟವಾಗಿದ್ರು. ಯಾಕಂದ್ರೆ ಒಂದು ಹೆಣ್ಣು ಇಷ್ಟೋಂದು ಬಲಿಷ್ಠವಾದ ಪಾತ್ರವನ್ನ ಮಾಡಬಹುದಾ ಅನ್ನೋದಕ್ಕೆ, ರಮ್ಯಾಕೃಷ್ಣಾ  ಅವ್ರ ಈ ಪಡೆಯಪ್ಪ ಪಾತ್ರವೇ ಸಾಕ್ಷಿಯಾಗಿತ್ತು. ಅದೂ ಅಲ್ದೇ, ಈ ಪಾತ್ರ ತಮಿಳುನಾಡಿನ ಅಮ್ಮನ ಪಾತ್ರದಂತಿದೆ ಅಂತ ಎಷ್ಟೋ ಮಂದಿ ಮಾತನಾಡಿಕೊಂಡಿದ್ದೂ ಇದೆ. ರಮ್ಯಾಕೃಷ್ಣ  ಅವ್ರ ಈ ಪಾತ್ರ ಕಂಡ ನಿರ್ಮಾಪಕರು, ಅಮ್ಮನ ಪಾತ್ರವನ್ನ ರಮ್ಯಾಕೃಷ್ಣ  ಅವ್ರಿಂದಲೇ ಮಾಡಿಸಬೇಕು ಅಂತ ಪ್ಲಾನ್​ ಮಾಡ್ತಿದ್ದಾರೆ. ಇದೇ ಟೈಮಿಗೆ ಅಮ್ಮನ ಅಭಿಮಾನಿ ಮತ್ತು ರಮ್ಯಾಕೃಷ್ಣ ಅವ್ರ ಫ್ಯಾನ್​ ಆಗಿದ್ದ ಓರ್ವ ವ್ಯಕ್ತಿ, ಮದರ್​ ಅಂತ ಒಂದು ಪೋಸ್ಟರ್​ ಡಿಜೈನ್ ಮಾಡಿದ್ದ. ಇದರಲ್ಲಂತೂ, ರಮ್ಯಾಕೃಷ್ಣ  ಥೇಟ್​ ಅಮ್ಮನಾಗೇ ಕಾಣಿಸಿಕೊಂಡಿದ್ರು.

ಇದೆಲ್ಲವನ್ನೂ ಸೂಕ್ಷ್ಮವಾಗಿ ನೋಡಿದ ನಿರ್ಮಾಪಕರು, ನಟಿ ರಮ್ಯಾಕೃಷ್ಣ ಅವ್ರನ್ನೇ ಅಮ್ಮನ ಪಾತ್ರಕ್ಕೆ ಆಯ್ಕೆ ಮಾಡಬೇಕು ಅಂತ ಪಟ್ಟು ಹಿಡಿದ್ದಾರಂತೆ,. ಇನ್ನೂ ಅಮ್ಮನ ಪಾತ್ರದ ಈ ಪೋಸ್ಟರ್​ ಕಂಡು, ರಮ್ಯಾಕೃಷ್ಣ ಕೂಡ ಖುಷಿಯಾಗಿದ್ದಾರೆ. ಅಮ್ಮನ ಪಾತ್ರ ಸಿಕ್ರೆ ಖುಷಿಯಾಗಿ ಮಾಡ್ತೀನಿ ಅಂತ ಅಂದಿದ್ದಾರಂತೆ. ಈ ಎಲ್ಲಾ ಬೆಳವಣಿಗೆಗಳನ್ನ ನೋಡ್ತಾ ಇದ್ರೆ, ಅಮ್ಮನ ಪಾತ್ರಕ್ಕೆ ರಮ್ಯಾಕೃಷ್ಣಾನೇ ಫಿಕ್ಸ್ ಅಂತ ಹೇಳಲಾಗ್ತಿದೆ.

'ಕಿಲ್ಲಿಂಗ್' ವರ್ಮಾ

 ಸಾಲು ಸಾಲು ರಿಯಲ್​ ಸ್ಟೋರಿಗಳನ್ನು ಅದ್ಭುತವಾಗಿ ತೆರೆಗೆ ತಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಮ್ಮನ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.  ರಿಯಲ್ ಸ್ಟೋರಿಯನ್ನ ರಿಯಲಿಸ್ಟಿಕ್ಕಾಗಿ ತೋರಿಸೋ ಚಾಣಾಕ್ಷ ನಿರ್ದೇಶಕ ರಾಮ್​ ಗೋಪಾಲ್​ ವರ್ಮ. ಹಲವು ರಿಯಲ್ ಸ್ಟೋರಿಗಳನ್ನು ಸಿನಿಮಾ ಮಾಡಿದ್ದಾರೆ ಆರ್​ಜಿವಿ. ಹೀಗಾಗಿ ಅಮ್ಮನ ಸಿನಿಮಾನೂ ಇವ್ರೇ ನಿರ್ದೇಶನ ಮಾಡಬಹುದು ಅಂತ ಹೇಳಲಾಗ್ತಿದೆ. ಹಾಗೇನಾದ್ರೂ ರಾಮ್​ಗೋಪಾಲ್​ ವರ್ಮ ಜಯಾ ಬದುಕಿನ ಸಿನಿಮಾ ಮಾಡಿದ್ದೇ ಆದ್ರೆ, ನಾವು ಊಹಿಸದ ಸತ್ಯಗಳು ಸಿನಿಮಾ ಮೂಲಕ ಹೊರ ಬೀಳಲಿವೆ.

ವರದಿ:ಶೇಖರ್ ಪೂಜಾರಿ,ಸುವರ್ಣ ನ್ಯೂಸ್

 

click me!