
ಬೆಂಗಳೂರು(ಮೇ.05): ಮನೆ ಖಾಲಿ ಮಾಡು ಎಂದ ಸ್ನೇಹಿತನಿಗೆ ರೌಡಿಗಳಿಂದ ಬೆದರಿಕೆ ಹಾಕಿಸಿದ್ದ ಚಲನಚಿತ್ರ ಸಹಾಯಕ ನಿರ್ದೇಶಕ ಅಂಥೋನಿ ಅಲಿಯಾಸ್ ಪ್ರಖ್ಯಾತ್ (29) ಎಂಬಾತನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಂಥೋನಿ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವನಾಗಿದ್ದು, ಸಹಾಯಕ ನಿರ್ದೇಶಕ ಎಂದು ಹೇಳಿಕೊಂಡಿದ್ದಾನೆ. ಈತನಿಗೆ ನಗರದಲ್ಲಿ ಉಳಿದುಕೊಳ್ಳಲು ಸ್ನೇಹಿತ ಪುರುಷೋತ್ತಮ್ ಗೋವಿಂದರಾಜ್‌ನಗರದಲ್ಲಿರುವ ತನ್ನ ಮನೆ ಬಾಡಿಗೆ ನೀಡಿದ್ದರು. ಪುರುಷೋತ್ತಮ್ ಕೂಡ ಚಿತ್ರರಂಗದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅಂಥೋನಿ, ಮನೆಗೆ ಯುವತಿಯರನ್ನು ಕರೆ ತಂದು ಪಾರ್ಟಿ ಮಾಡುತ್ತಿದ್ದ. ಅಲ್ಲದೆ, ಆಡಿಷನ್ ನೆಪದಲ್ಲಿ ಅವರನ್ನು ಮನೆಗೆ ಕರೆದು ತರುತ್ತಿದ್ದ. ಹೀಗಾಗಿ ಮನೆ ಖಾಲಿ ಮಾಡುವಂತೆ ಸ್ನೇಹಿತ ಪುರುಷೋತ್ತಮ್ ಸೂಚಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.