
120 ಮಕ್ಕಳು, ಏಳು ಮಂದಿ ದೊಡ್ಡವರು, ಜೊತೆಗೆ ಯಶವಂತ ಸರದೇಶಪಾಂಡೆ, ಮೇಲಾಗಿ ಜ್ಯೂಹಿ ಚಾವ್ಲಾ!
ಯಶವಂತ ಸರದೇಶಪಾಂಡೆ ಮಕ್ಕಳ ಶಿಬಿರ ಮಾಡಿ, ಆ ಶಿಬಿರದಲ್ಲಿ ನಟನೆ ಕಲಿಸಿ, ಆ ನಟರನ್ನು ಹಾಕಿಕೊಂಡು ಮಾಡುತ್ತಿರುವ ಸಿನಿಮಾದ ಹೆಸರು ವೆರಿಗುಡ್ ಸಿನಿಮಾ. ಆ ಸಿನಿಮಾದಲ್ಲಿ ಒಂದು ಪುಟ್ಟ ಪಾತ್ರ ಮಾಡಲು ಜ್ಯೂಹಿ ಚಾವ್ಲಾ ಬರುತ್ತಿದ್ದಾರೆ. ಮೊನ್ನೆ ಮೊನ್ನೆ ರಮೇಶ್ ಅಭಿನಯದ ಪುಷ್ಪಕ ವಿಮಾನ ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಮಾಡಿಹೋಗಿದ್ದ, ಜ್ಯೂಹಿ ಇದೀಗ ಸಂಗೀತ ಟೀಚರ್ ಆಗಿ ಮರಳುತ್ತಿದ್ದಾರೆ. ಆಗ್ಲೇ ಮಾತಾಡಿಸ್ಕೊಂಡು ಬಂದೆ. ಯಾವಾಗ್ ಬರ್ತಾರೋ ಗೊತ್ತಿಲ್ಲ ಅನ್ನುತ್ತಾ ಸರದೇಶಪಾಂಡೆ, ನಿಂಬೆಹಣ್ಣಿನಂಥ ಹುಡುಗಿಗೆ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.