ಧ್ರುವ ಸರ್ಜಾ ಪೊಗರು ಚಿತ್ರಕ್ಕೆ ಕಂಟಕ: ಕಾರಣವೇನು ಗೊತ್ತಾ?

Published : Oct 28, 2017, 02:56 PM ISTUpdated : Apr 11, 2018, 01:00 PM IST
ಧ್ರುವ ಸರ್ಜಾ ಪೊಗರು ಚಿತ್ರಕ್ಕೆ ಕಂಟಕ: ಕಾರಣವೇನು ಗೊತ್ತಾ?

ಸಾರಾಂಶ

ಇಂಥದ್ದೊಂದು ಸುದ್ದಿ ಈಗಷ್ಟೇ ಸದ್ದು ಮಾಡುತ್ತಿದೆ. ಈ ಸುದ್ದಿಯ ಸದ್ದು ‘ಪೊಗರು’ ಚಿತ್ರಕ್ಕೆ ಸಂಬಂಧಿಸಿದ್ದು. ಆ ಮೂಲಕ ನಂದಕಿಶೋರ್ ನಿರ್ದೇಶಿಸಬೇಕಿದ್ದ ಸಿನಿಮಾಗೆ ಯಾಕೋ ಮುಹೂರ್ತವೇ ಸರಿಯಾಗಿ ಕೂಡಿ ಬರುತ್ತಿಲ್ಲ. ಮೊದಲು ‘ಹಯಗ್ರೀವ’ ಅಂದ್ರು. ಅದು ಬದಲಾಯಿತು. ನಂತರ ‘ಪೊಗರು’ ಅನ್ನೋ ಹೆಸರಿನ ಚಿತ್ರಕ್ಕೆ ಚಾಲನೆ ನೀಡಿದರು. ಈಗ ಅದೂ ಸಹ ಬದಲಾಗುವ ಸಾಧ್ಯತೆಗಳು ದಟ್ಟವಾಗಿವೆ. ಅದಕ್ಕೆ ಕಾರಣ ಧ್ರುವ ಸರ್ಜಾ ಅವರು ಬಾಲಿವುಡ್ ರೈಟರ್ ಕೈ ಹಿಡಿದಿರುವುದು.

ಇಂಥದ್ದೊಂದು ಸುದ್ದಿ ಈಗಷ್ಟೇ ಸದ್ದು ಮಾಡುತ್ತಿದೆ. ಈ ಸುದ್ದಿಯ ಸದ್ದು ‘ಪೊಗರು’ ಚಿತ್ರಕ್ಕೆ ಸಂಬಂಧಿಸಿದ್ದು. ಆ ಮೂಲಕ ನಂದಕಿಶೋರ್ ನಿರ್ದೇಶಿಸಬೇಕಿದ್ದ ಸಿನಿಮಾಗೆ ಯಾಕೋ ಮುಹೂರ್ತವೇ ಸರಿಯಾಗಿ ಕೂಡಿ ಬರುತ್ತಿಲ್ಲ. ಮೊದಲು ‘ಹಯಗ್ರೀವ’ ಅಂದ್ರು. ಅದು ಬದಲಾಯಿತು. ನಂತರ ‘ಪೊಗರು’ ಅನ್ನೋ ಹೆಸರಿನ ಚಿತ್ರಕ್ಕೆ ಚಾಲನೆ ನೀಡಿದರು. ಈಗ ಅದೂ ಸಹ ಬದಲಾಗುವ ಸಾಧ್ಯತೆಗಳು ದಟ್ಟವಾಗಿವೆ. ಅದಕ್ಕೆ ಕಾರಣ ಧ್ರುವ ಸರ್ಜಾ ಅವರು ಬಾಲಿವುಡ್ ರೈಟರ್ ಕೈ ಹಿಡಿದಿರುವುದು.

ಒಂದು ಮಾಹಿತಿಯ ಪ್ರಕಾರ ಈಗಾಗಲೇ ಬಾಲಿವುಡ್'ನ ಶಗುಫ್ತಾ ರಫಿಕ್ ಅವರು ಧ್ರುವ ಸರ್ಜಾಗಾಗಿ ಕತೆ ಮಾಡುತ್ತಿದ್ದಾರಂತೆ. ಈ ನಡುವೆ ಈ ಹಿಂದೆ ದರ್ಶನ್ ಅಭಿನಯದಲ್ಲಿ ‘ಜಗ್ಗುದಾದಾ’ ಚಿತ್ರವನ್ನು ನಿರ್ದೇಶಿಸಿದ್ದ ರಾಘವೇಂದ್ರ ಹೆಗಡೆ ನಿರ್ದೇಶನದ ಚಿತ್ರಕ್ಕೂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ರಾಘವೇಂದ್ರ ಹೆಗಡೆ ಅವರು ಸಹ ಕತೆ ಮಾಡಿಸುತ್ತಿದ್ದಾರಂತೆ. ಈ ಎಲ್ಲರದ ಹಿನ್ನೆಲೆಯಲ್ಲಿ ‘ಪೊಗರು’ ಚಿತ್ರಕ್ಕೆ ಸೆಟ್ಟೇರುವ ‘ಾಗ್ಯ ದೊರೆಯುವುದು ಕಷ್ಟ ಎನ್ನಲಾಗುತ್ತಿದೆ.

ಮತ್ತೊಂದು ಮಾಹಿತಿಯ ಪ್ರಕಾರಣ ‘ಪೊಗರು’ ನಿಲ್ಲುವುದಕ್ಕೆ ಕಾರಣ ಅದು ಪಕ್ಕಾ ರೀಮೇಕ್ ಸಿನಿಮಾ ಎಂಬುದು. ಹೌದು, ತೆಲುಗಿನ ರಾಮ್ ನಟಿಸಿದ್ದ ‘ಕಂದಿರಿಗ’ ಚಿತ್ರವನ್ನೇ ಯಥಾವತ್ತಾಗಿ ‘ಪೊಗರು’ ಹೆಸರಿನಲ್ಲಿ ರೀಮೇಕ್ ಮಾಡಲಾಗುತ್ತಿತ್ತು. ಅದನ್ನು ಕನ್ನಡಕ್ಕೆ ತಕ್ಕಂತೆ ಬದಲಾಯಿ ಸುತ್ತಿರುವಾಗಲೇ ಯಾಕೋ ಧ್ರುವ ಸರ್ಜಾಗೆ ‘ಕಂದಿರಿಗ’ ಸಿನಿಮಾ ಹಳೆಯ ದಾಯಿತು ಅನಿಸಿತು. ಹೀಗಾಗಿ ಈ ಚಿತ್ರಕ್ಕೆ ರೆಡ್ ಸಿಗ್ನಲ್ ಕೊಟ್ಟಿದ್ದಾರೆ. ಸ್ವಮೇಕ್ ಕತೆ ಮಾಡಿ ಎನ್ನುತ್ತಿದ್ದಾರೆ. ನಂದಕಿಶೋರ್ ಸ್ವಮೇಕ್ ಕತೆ ಮಾಡಿಕೊಂಡು ಕೂತರೇ ಬೇರೆಯವರಿಗೆ ಕೊಟ್ಟಿರುವ ಡೇಟ್ಸ್ ಹೆಚ್ಚು ಕಮ್ಮಿ ಆಗಲಿವೆ. ಮೂರು ಜನ ನಿರ್ಮಾಪಕರು ಕಾಯುತ್ತಿದ್ದಾರೆ.

ಉದಯ್ ಮೆಹ್ತಾ ಸಿನಿಮಾ ಅಂತೂ ಜನವರಿಗೆ ಸೆಟ್ಟೇರಬೇಕು ಎನ್ನುವ ಯೋಚನೆ ಯಲ್ಲಿದ್ದಾರೆ. ಈ ನಡುವೆ ಹೊಸದಾಗಿ ಬಂದಿರುವ ಎರಡ್ಮೂರು ತೆಲುಗು ಸಿನಿಮಾಗಳನ್ನು ಧ್ರುವ ಅವರಿಗೆ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ, ಯಾವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೋ ಗೊತ್ತಿಲ್ಲ. ನಿರ್ಮಾಪಕ ಬಿ ಕೆ ಗಂಗಾ‘ರ್ ಅವರಿಗೂ ರೀಮೇಕ್ ಸಿನಿಮಾಗಳ ಮೇಲೆಯೇ ಹೆಚ್ಚು ನಂಬಿಕೆ. ಅದಕ್ಕೆ ಕಾರಣ ಅವರ ಹಿಂದಿನ ನಿರ್ಮಾಣದ ‘ಅಧ್ಯಕ್ಷ’ ಚಿತ್ರದ ಹಿಟ್. ಈ ಎಲ್ಲ ಸುದ್ದಿಯ ಸದ್ದಿನಲ್ಲಿ ಮುಳುಗಿರುವ ‘ಪೊಗರು’ ಹೆಸರಿನ ಚಿತ್ರ ಸೆಟ್ಟೇರುವುದು ಅನುಮಾನ ಎಂಬುದು ಸದ್ಯದ ಸುದ್ದಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Gilli Nata: ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೆಯ 'ಡೆವಿಲ್' ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದ ನಿರ್ದೇಶಕ
BBK 12: ಗಿಲ್ಲಿ ನಟನ PR ಮಾಡ್ತಿರೋ ಡಬಲ್‌ಗೇಮ್‌ ಬಿಚ್ಚಿಟ್ಟ ರಜತ್;‌ ನನ್‌ ಮುಂದೆ ಬಂದು ಮಾತಾಡ್ತಾನಾ?