
ಬೆಂಗಳೂರು (ಅ.27): ಮಲ್ಟಿಟ್ಯಾಲೆಂಟೆಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಬತ್ತಳಿಕೆಯಲ್ಲಿ ಮೂಡಿಬಂದ ಮಗಧೀರ ಚಿತ್ರದಲ್ಲಿ ರಾಮ್ ಚರಣ್ ಹೀರೋ ಆಗಿ ನಟಿಸಿದ್ದು, ಈ ಸಿನಿಮಾ ಅವರ ಕೇರಿಯರ್ ಗೆ ಬಿಗ್ ಬ್ರೇಕ್ ಕೊಟ್ಟಿತ್ತು. ರಾಜ್ ಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಗಧೀರ ಚಿತ್ರಕ್ಕೆ ಕಥೆ ಬರೆದಿದ್ದರು. ಇನ್ನು 350 ಮಿಲಿಯನ್ ಹೈ ಬಜೆಟ್ ನಲ್ಲಿ ನಿರ್ಮಣವಾದ ಈ ಚಿತ್ರ 1.5 ಬಿಲಿಯನ್ ಕಲೆಕ್ಷನ್ ಮಾಡಿ, ಟಾಲಿವುಡ್ ಇಂಡಸ್ಟ್ರಿ ಹಿಟ್ ಸಿನಿಮಾಗಳಲ್ಲಿ ಇದು ಒಂದಾಗಿದೆ. ಇದೀಗ ಈ ಮಗಧಿರ ಚಿತ್ರದ ಸಿಕ್ವೆಲ್ 2 ಭಾಗ- 2 ಮೂಡಿಬರುತ್ತೆ ಅನ್ನೋ ಸುದ್ದಿ ಬಹಳ ವರ್ಷಗಳಿಂದ ಹಲ್ ಚಲ್ ಎಬ್ಬಿಸುತ್ತಿದ್ದು ವಿಜಯೇಂದ್ರ ಪ್ರಸಾದ್ ಕಥೆ ರೆಡಿ ಮಾಡ್ತಿದ್ದಾರೆ ಅಂತಾನೂ ಸುದ್ದಿ ಇತ್ತು.
ಈ ಹಿಂದೆ ಮಗಧೀರ ಚಿತ್ರ ಕಥೆಯಮ್ಮ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಗಧೀರ ಚಿತ್ರದ ಕಥೆಯನ್ನ ಟಿ-ಟೌನ್ ಸೂಪರ್ ಸ್ಟಾರ್ ಚಿರಂಜಿವಿಗೆ ಬರೆದಿದ್ರಂತೆ. ಇನ್ನು ಮಗಧೀರ ಚಿತ್ರದ ಒಂದು ಫೈಟಿಂಗ್ ದೃಶ್ಯವನ್ನ ಅವರು ತಲೆಯಲ್ಲಿ ಇಟ್ಟುಕೊಂಡು ಮಾಡಿದ್ರಂತೆ. ಆದರೆ ನಟ ಚಿರಂಜಿವಿ ತಮ್ಮ ಪುತ್ರ ರಾಮ್ ಚರಣ್ ಗೆ ಈ ಸಿನಿಮಾ ಚಾನ್ಸ್ ಕೊಟ್ಟಿದ್ರಂತೆ . ಅಂದಹಾಗೆ ಸದ್ಯ ವಿಜಯೇಂದ್ರ ಪ್ರಸಾದ್ ಮತ್ತೆ ಮಗಧೀರ ಪಾರ್ಟ್ 2 ಕಥೆ ಸಿದ್ಧ ಮಾಡುತ್ತಿದ್ದು ಈ ಚಿತ್ರಕ್ಕೆ ಇವರ ಪುತ್ರ ಎಸ್ ಎಸ್ ರಾಜ್ ಮೌಳಿನೆ ನಿರ್ದೇಶನ ಮಾಡ್ಬೇಕು ಜೊತೆಗೆ ಚಿರಂಜಿವಿ ಪುತ್ರ ರಾಮ್ ಚರಣ್ ನೆ ನಾಯಕನಾಗಬೇಕು ಅನ್ನೋ ತಮ್ಮ ಆಸೆ ವ್ಯಕ್ತಪಡಿಸಿದ್ದು, ಶ್ರೀವಲ್ಲಿ ಪ್ರೋಮೊಷನ್ ನಲ್ಲಿ ಬ್ಯುಸಿ ಯಾಗಿದ್ದಾರೆ.
ಬಾಹುಬಲಿ ಸಿನಿಮಾ ಸಕ್ಸಸ್ ನಂತರ ಮಹಾಭಾರತ ಕೈಗೆತ್ತುಕೊಂಡಿರೋ ರಾಜಮೌಳಿಯ ಈ ಚಿತ್ರಕ್ಕೂ ವಿಜಯೇಂದ್ರ ಅವರು ಕಥೇ ಬರೆದಿದ್ದು ಇದು 4/5 ಭಾಗಳಲ್ಲಿ ಮೂಡಿಬರಲಿದೆಯಂತೆ. ಮಹಾಭಾರತದ ಸಿನಿಮಾ ಪೂರ್ತಿ ಮುಗಿಯಬೇಕಂದ್ರೆ ಬರೋಬ್ಬರಿ 10 ವರ್ಷಗಳು ಬೇಕಾಗುತ್ತೆ .ಆ ಸಿನಿಮಾದ ನಂತರವೇ ಆಕ್ಷನ್ ಫಿಕ್ಷನ್ ಮಗಧೀರ ಸಿನಿಮಾ ರೆಡಿಯಾಗೋದು, ಅಂದ್ರೆ ಈ ಮಲ್ಟಿ ಮೆಗಾಸ್ಟಾರ್ ರಾಮ್ ಚರಣ್ ಮಗಧೀರ ಸಿನಿಮಾ ಮೂಡಿ ಬರೋಕ್ಕೆ 10 ವರ್ಷಗಳೆ ಕಾಯ್ಬೇಕು. ಚಿರಂಜಿವಿ ಫ್ಯಾಮಿಲಿಗೂ ಮತ್ತು ವಿಜಯೇಂದ್ರ ಪ್ರಸಾದ್ , ರಾಜಮೌಳಿ ಅವರು ಸ್ನೇಹ ಭಾಂದವ್ಯ ಚೆನ್ನಾಗಿರೋದ್ರಿಂದ ಮಗಧೀರ- 2 ಯಾವಾಗ ಬೇಕಾದ್ರು ಸೆಟ್ಟೇರಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.